ಬೆಂಗಳೂರು:ಯಲಹಂಕದ ಮೇಲ್ಸೇತುವೆಗೆ ಸ್ವಾತಂತ್ರೃವೀರ ಸಾವರ್ಕರ್ ಹೆಸರಿಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರತಿಪಕ್ಷಗಳ ನಾಯಕರಿಗೆ ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.
‘‘ಕಾಲೇಜುಗಳು, ಬಡಾವಣೆಗಳು, ಆಸ್ಪತ್ರೆಗಳು ಮತ್ತು ಕ್ಯಾಂಟೀನ್‌ಗಳಿಗೆ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಹೆಸರಿಡುವಾಗ ಮಣ್ಣಿನ ಮಕ್ಕಳು ನೆನಪಾಗಲಿಲ್ಲವೇ ಸಿದ್ಧರಾಮಯ್ಯನವರೇ’’ ಎಂದು ಸಿ.ಟಿ. ರವಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಜವಾಹರ್ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ಸಂಜಯ್ ಗಾಂಧಿ ಹೆಸರಿನಲ್ಲಿ ಕಾಲೇಜುಗಳು, ಬಡಾವಣೆಗಳು, ಆಸ್ಪತ್ರೆಗಳು ಮತ್ತು ಕ್ಯಾಂಟೀನ್ ನಾಮಕರಣ ಮಾಡುವಾಗ ಮಣ್ಣಿನ ಮಕ್ಕಳು ನೆನಪಿಗೆ ಬರಲಿಲ್ಲವೇ ಸಿದ್ದರಾಮಯ್ಯನವರೇ?
ಅಪ್ಪಟ ದೇಶಭಕ್ತ ವೀರ ಸಾವರ್ಕರ್ ಹೆಸರಿನಲ್ಲಿ ಒಂದು ಸೇತುವೆಯ ನಾಮಕರಣ ಮಾಡುವುದು ನಿಮಗೆ ಸಹಿಸಲು ಆಗುತ್ತಿಲ್ಲವೇ?https://t.co/LYGSGGAHB2
— C T Ravi 🇮🇳 ಸಿ ಟಿ ರವಿ (@CTRavi_BJP)May 27, 2020

‘‘ಅಪ್ಪಟ ದೇಶಭಕ್ತರಾಗಿದ್ದ ವೀರ ಸಾವರ್ಕರ್ ಅವರ ಹೆಸರನ್ನು ಒಂದು ಮೇಲ್ಸೇತುವೆಗೆ ಇಡುವುದನ್ನು ಸಹಿಸಲು ನಿಮ್ಮಿಂದಾಗುತ್ತಿಲ್ಲ ಅಲ್ಲವೆ’’ ಎಂದೂ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಅವರು ಇದಕ್ಕೆ ಮುನ್ನ ನೀಡಿದ ಹೇಳಿಕೆಯಲ್ಲಿ, ‘‘ಸಾವರ್ಕರ್ ಹೆಸರಿನ ಬದಲು ನಮ್ಮ ನಾಡಿನ, ಈ ಮಣ್ಣಿನ ಹೋರಾಟಗಾರರು ಹೆಸರನ್ನು ಇಡುವುದು ಸೂಕ್ತ’’ ಎಂದು ಅಭಿಪ್ರಾಯಪಟ್ಟಿದ್ದರು.
FACT CHECK: ಮುನ್ನೂರು ಮುಸ್ಲಿಮರ ಮನೆಗಳ ಸುಟ್ಟಿದ್ಯಾರು? ಇಲ್ಲಿದೆ ನೋಡಿ ಅಸಲಿಯತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − three =
Remember me
