ಬೆಂಗಳೂರು:ಜಗತ್ತನ್ನೇ ತಲ್ಲಣಗೊಳಿಸಿರುವ ಕರೊನಾ ಇದೀಗ ರಾಜ್ಯದ ರೈತ ಸಮುದಾಯಕ್ಕೂ ಕಂಟಕವಾಗುತ್ತಿದ್ದು, ಬೆಳೆದ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ರೈತರು ಸಾವಿನ ದಾರಿ ಹಿಡಿಯುತ್ತಿದ್ದಾರೆ.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡಚಿಂಚೋಳಿ ರೈತ ಚಂದ್ರಕಾಂತ ಬಿರಾದಾರ (45) ಕಷ್ಟಪಟ್ಟು ಬೆಳೆದ ಕಲ್ಲಂಗಡಿ ಮಾರಾಟ ಆಗದ ಕಾರಣ ನೇಣಿಗೆ ಶರಣಾಗಿದ್ದಾನೆ. ಈತ 8.13 ಎಕರೆಯಲ್ಲಿ 1.31 ಎಕರೆ ಕಲ್ಲಂಗಡಿ ಬೆಳೆದಿದ್ದ. ಇದಕ್ಕಾಗಿ ಬ್ಯಾಂಕ್​ವೊಂದರಲ್ಲಿ 5.40 ಲಕ್ಷ ರೂ. ಸಾಲ ಮಾಡಿದ್ದ. ಖಾಸಗಿ ಸೇರಿ 11 ಲಕ್ಷ ರೂ. ಸಾಲವಿತ್ತು. ಬ್ಯಾಂಕಿನ ಮೊದಲ ಕಂತು 84 ಸಾವಿರ ರೂ. ಮೇ ತಿಂಗಳಲ್ಲಿ ಕಟ್ಟಲೇಬೇಕಿದೆ. ಆದರೀಗ ಲಾಕ್​ಡೌನ್​ನಿಂದಾಗಿ ಕಲ್ಲಂಗಡಿ ಎಲ್ಲೂ ಮಾರಾಟವಾಗದೆ ಕೊಳೆತು ಹೋಗುತ್ತಿರುವುದನ್ನು ಕಂಡು ಸೋಮವಾರ ರಾತ್ರಿ ತನ್ನ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಾರಿ ಕಾಣದೆ ಕಂಗಾಲು
ಚಳ್ಳಕೆರೆಯ ಕೊರ್ಲಕುಂಟೆ ಗ್ರಾಮದಲ್ಲಿ ರೈತನೊಬ್ಬ 3 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರೈತ ನಂದೀಶ 3 ಲಕ್ಷ ರೂ. ಖರ್ಚು ಮಾಡಿ ಕಲ್ಲಂಗಡಿ ಬೆಳೆದಿದ್ದರು. ಉತ್ತಮ ಫಸಲು ಕೂಡ ಬಂದಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಫಸಲು ಮಾರಾಟಕ್ಕೆ ಮಾಡದಂತಾಗಿದೆ. ಖರೀದಿಗೆ ವ್ಯಾಪಾರಸ್ಥರು ಮುಂದೆ ಬರದ ಕಾರಣ ಜನರೇ ಕಿತ್ತುಕೊಂಡು ಹೋಗಲಿ ಎಂದು ಕೈಚೆಲ್ಲಿ ಕೂತಿದ್ದಾರೆ.
ಬಾಳೆಹಣ್ಣಿಗಿಲ್ಲ ಬೆಲೆ
ಬೆಳಗಾವಿ: ಕರೊನಾ ಸೋಂಕಿನಿಂದ ಬಹುಬೇಡಿಕೆಯ ಬಾಳೆಹಣ್ಣು ಮೂಲೆಗುಂಪಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಬಾಳೆಗೆ ನಾಲ್ಕಾಣೆ ಕಿಮ್ಮತ್ತೂ ಲಭಿಸದ್ದರಿಂದ ಬೆಳೆಗಾರರು ಟನ್​ಗಟ್ಟಲೆ ಬಾಳೆ ಗೊನೆಗಳನ್ನು ಹೊಲದಲ್ಲೇ ಸುರಿಯುತ್ತಿದ್ದಾರೆ.ಕೆಲವರು ಲಾರಿಯಲ್ಲಿ ಸಾಗಿಸಿ ಹಳ್ಳ-ಕೊಳ್ಳಕ್ಕೆ ಹಾಕಿದ್ದಾರೆ.
ಕೊಳೆಯುತ್ತಿದೆ ದ್ರಾಕ್ಷಿ
ಗದಗ ಜಿಲ್ಲೆ ರೋಣ ತಾಲೂಕಿನ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಮಾರುಕಟ್ಟೆ ಸಿಗದೆ ದ್ರಾಕ್ಷಿ ಫಸಲೆಲ್ಲ ಬಳ್ಳಿಯಲ್ಲೇ ಹಣ್ಣಾಗಿ ಕೊಳೆಯುವಂತಾಗಿದೆ. 75 ಎಕರೆಯಲ್ಲಿ ಅಂದಾಜು 50 ಟನ್ ದ್ರಾಕ್ಷಿ ಫಸಲು ಕೊಯ್ಲಿಗೆ ಬಂದು 8-10 ದಿನಗಳಾಗಿದ್ದು, ಬಳ್ಳಿಯಲ್ಲೇ ಹಣ್ಣಾಗಿ ಕೊಳೆಯುತ್ತಿವೆ.
ಸೂಕ್ತ ಮಾರುಕಟ್ಟೆ, ಬೆಲೆ ಇಲ್ಲದೆ ಬೆಳೆಗಳು ಮಣ್ಣುಪಾಲಾಗುತ್ತಿದ್ದು, ರೈತರ ನೆರವಿಗೆ ಧಾವಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕಲ್ಲಂಗಡಿ ಹಣ್ಣು ಬೆಳೆದ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ನೋವಿನ ಸಂಗತಿ. ಯಾವುದೇ ಕಾರಣಕ್ಕೂ ರೈತರು ಧೈರ್ಯ ಕಳೆದುಕೊಳ್ಳಬಾರದು.
| ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ
ರೈತ ತಾನು ಬೆಳೆದ ಕಲ್ಲಂಗಡಿ ಮಾರಾಟ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಪರಿಸ್ಥಿತಿ ಕೈ ಮೀರುವ ಮೊದಲು ಸಿಎಂ ಯಡಿಯೂರಪ್ಪ ತಕ್ಷಣ ರೈತರ ಕಷ್ಟ ನಿವಾರಣೆಗೆ ಕಾರ್ಯಪ್ರವೃತ್ತರಾಗಬೇಕು.
| ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
101ಕ್ಕೆ ಏರಿತು ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
