ಬೆಂಗಳೂರು: ಕರೊನಾ ತಂದ ಆರ್ಥಿಕ ಸಂಕಷ್ಟದಿಂದ ಹೊರಬರಲು ರಾಜ್ಯದ ಜನತೆ ಕಷ್ಟಪಡುತ್ತಿರುವ ಸಂದರ್ಭದಲ್ಲೇ ಗಾಯದ ಮೇಲೆ ಬರೆ ಎಂಬಂತೆ ಬೆಸ್ಕಾಂ ಮತ್ತೊಂದು ಹೊರೆ ಹೊರಿಸಿದೆ. ಲಾಕ್​ಡೌನ್​ನಿಂದಾಗಿ ಮೀಟರ್ ರೀಡಿಂಗ್ ನೋಡಿ ವಿದ್ಯುತ್ ಬಿಲ್ ಕೊಡಲು ಸಾಧ್ಯವಾಗದ ಕಾರಣಕ್ಕೆ ಬೆಸ್ಕಾಂ ಸರಾಸರಿ ವಿದ್ಯುತ್ ಯೂನಿಟ್ ಬಳಕೆ ಆಧಾರದಲ್ಲಿ ಗ್ರಾಹಕರಿಗೆ ಬಿಲ್ ನೀಡಿದೆ. ಬಿಲ್​ನಲ್ಲಿ ಸರಾಸರಿ ಶೇ.30ರಿಂದ ಶೇ.60 ಹೆಚ್ಚುವರಿ ಮೊತ್ತ ಹಾಕಿರುವ ಪರಿಣಾಮ ಕಂಗಾಲಾಗಿರುವ ಗ್ರಾಹಕರು ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೀಟರ್ ನೋಡಿಯೇ ಮಾರ್ಚ್​ನ ಬಿಲ್ ಅನ್ನು ಏಪ್ರಿಲ್​ನಲ್ಲಿ ಹಾಕಲಾಗಿತ್ತು. ಬಿಲ್ ಕೊಡದಿದ್ದರೂ ಕಳೆದ ಬಿಲ್​ನ ಸರಾಸರಿ ಲೆಕ್ಕಾಚಾರದಂತೆ ಪಾವತಿಸಲು ಗ್ರಾಹಕರಿಗೆ ಸೂಚಿಸಲಾಗಿತ್ತು. ಇದೀಗ ಮಾರ್ಚ್ ಮತ್ತು ಏಪ್ರಿಲ್​ನಲ್ಲಿ ಬಳಸಿದ ಒಟ್ಟು ಯೂನಿಟ್ ಆಧರಿಸಿ (ಹಲವು ಸ್ಲಾಬ್​ಗಳನ್ನು ಸೇರಿಸಿ) ಒಟ್ಟಿಗೆ ಬಿಲ್ ನೀಡಿದ್ದಾರೆ. ಸರಾಸರಿ ವಿದ್ಯುತ್ ಬಳಕೆ ಆಧಾರದಲ್ಲಿ ಲೆಕ್ಕ ಹಾಕಿದರೂ ಈ ಬಿಲ್ ಮೊತ್ತ ಜಾಸ್ತಿ ಎಂದು ಗ್ರಾಹಕರು ದೂರಿದ್ದಾರೆ.
ಏಪ್ರಿಲ್​ನಲ್ಲಿ ಉಪಯೋಗಿಸಿದ ವಿದ್ಯುತ್ ಬಿಲ್ ಮೇನಲ್ಲಿ ಬಂದಿದೆ. ಬಿಲ್​ನಲ್ಲಿ ಶೇ.30ರಿಂದ ಶೇ.60 ಹೆಚ್ಚುವರಿ ಮೊತ್ತ ಹಾಕಲಾಗಿದೆ. ಪ್ರತಿ ತಿಂಗಳು ಅಂದಾಜು 850ರಿಂದ 900 ರೂ. ಬರುತ್ತಿತ್ತು. ಏಪ್ರಿಲ್​ನಲ್ಲಿ ಎಲ್ಲರೂ ಮನೆಯಲ್ಲೇ ಇದ್ದಿದ್ದರಿಂದ ತುಸು ಹೆಚ್ಚು ವಿದ್ಯುತ್ ಬಳಸಿರಬಹುದು. ಇದರಿಂದ ಸ್ವಲ್ಪ ಹೆಚ್ಚು ಯೂನಿಟ್ ಬಳಕೆಯಾಗಿರಬಹುದು. ಆದರೆ, 2 ತಿಂಗಳಿಗೆ ಸರಾಸರಿ 1,800 ರೂ. ಬರಬೇಕಿದ್ದ ಬಿಲ್ 2,300 ರೂ. ಬಂದಿದೆ ಎಂದು ಗ್ರಾಹಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
300 ರೂ. ಜಾಸ್ತಿ !
ಲಾಕ್​ಡೌನ್​ನಿಂದಾಗಿ ಏಪ್ರಿಲ್ ಮೊದಲ ವಾರ ಬಿಲ್ ಕೊಟ್ಟಿಲ್ಲ. ಆದರೂ ಆನ್​ಲೈನ್​ನಲ್ಲಿ ಪಾವತಿಸಿದ್ದೇನೆ. ಆದರೆ, ಇದೀಗ ಬಂದಿರುವ ಹೊಸ ಬಿಲ್​ನಲ್ಲಿ 1,100 ರೂ. ಇದೆ. ಯಾವ ಆಧಾರದಲ್ಲಿ ಬಿಲ್ ಹಾಕಿದ್ದಾರೆ ಗೊತ್ತಾಗಿಲ್ಲ. ಪ್ರತಿ ತಿಂಗಳು ಸರಾಸರಿ 700-800 ರೂ.ಬರುತ್ತಿತ್ತು. ಇದೀಗ 300 ರೂ. ಜಾಸ್ತಿ ಬಂದಿದೆ. ಅದು ಹೇಗೆ ಸಾಧ್ಯ? ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಹಕರೊಬ್ಬರು ಒತ್ತಾಯಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 20 =
Remember me
