ದಾವಣೆಗೆರೆ:ವಿದ್ಯುತ್​ ಕಂಬದ ಮೇಲೆ ಹತ್ತಿ ವಿದ್ಯುತ್​ ತಂತಿ ದುರಸ್ತಿ ಮಾಡಲು ಹೊರಟಿದ್ದ ಲೈನ್​ ಮ್ಯಾನ್​ಗಳಿಗೆ ವಿದ್ಯುತ್​ ತಗುಲಿರುವ ಘಟನೆ ದಾವಣಗೆರೆಯ ಹರಿಹರದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಲೈನ್​ ಮ್ಯಾನ್​ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ:ರೈತ ಹೋರಾಟದಲ್ಲಿ ಕಾರಿಗೆ ಬೆಂಕಿ; ಹೋರಾಟಗಾರನ ಸಜೀವ ದಹನ
ಬೆಸ್ಕಾಂನ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಲೈನ್​ ಮ್ಯಾನ್​ಗಳು ಭಾನುವಾರ ಹರಿಹರದ ಪಟೇಲ್​ ಬಡವಾಣೆಯ ಸಾಯಿಬಾಬ ಮಂದಿರದ ಬಳಿ ವಿದ್ಯುತ್​ ತಂತಿ ದುರಸ್ಥಿ ಮಾಡುತ್ತಿದ್ದರು. ಈ ವೇಳೆ ಅಚಾನಕ್ಕಾಗಿ ತಂತಿಯಲ್ಲಿ ವಿದ್ಯುತ್​ ಹರಿದಿದೆ. ಇದರಿಂದಾಗಿ ಮಾರುತಿ (24) ಹೆಸರಿನ ಲೈನ್​ ಮ್ಯಾನ್​ ಮೃತಪಟ್ಟಿದ್ದು, ಮಹೇಶ್​ (34) ಸ್ಥಿತಿ ಗಂಭೀರವಾಗಿದೆ. ಇವರಿಬ್ಬರು ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ನಿವಾಸಿಗಳು. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಈ ಘಟನೆ ನಡೆದಿರಬಹುದಾದ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗಲೇ ವಿದ್ಯುತ್​ ತಗುಲಿ ಶವವಾಗಿರುವ ದೃಶ್ಯ ಸೆರೆಯಾಗಿದೆ.
ಇದನ್ನೂ ಓದಿ:ಹೆಲ್ಮೆಟ್​ ಹಾಕಿದ್ರೂ ಇನ್ಮುಂದೆ ಕಟ್ಟಬೇಕಾಗಬಹುದು ದಂಡ! ಏಕೆ ಗೊತ್ತಾ?
ಕಳೆದ 15 ದಿನಗಳಿಂದ ಈ ಭಾಗದಲ್ಲಿ ಕೆಲಸ ಮಾಡಲಾಗುತ್ತಿದೆ. ಎಲ್ಲ ರೀತಿಯ ರಕ್ಷಣಾ ಸಾಮಾಗ್ರಿಯನ್ನು ಕೊಡಲಾಗಿತ್ತು. ಲೈನ್​ ಕೂಡ ಕ್ಲಿಯರ್​ ಮಾಡಿ ಕೊಡಲಾಗಿತ್ತು. ಆದರೆ ಅವರು ರಕ್ಷಣಾ ಸಾಮಾಗ್ರಿಗಳನ್ನು ಧರಿಸಿರಲಿಲ್ಲ. ಯಾರದ್ದೋ ಮನೆಯ ಯುಪಿಎಸ್​ ಅಥವಾ ಬೇರೆ ಏನೋ ತಾಂತ್ರಿಕ ದೋಷದಿಂದ ಈ ಘಟನೆ ಸಂಭವಿಸಿರಬಹುದು. ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಸಿಸ್ಟೆಂಟ್​ ಇಂಜಿನಿಯರ್​ ಆಗಿರುವ ರಾಘವೇಂದ್ರ ಅವರು ತಿಳಿಸಿದ್ದಾರೆ.
ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

ಲಾಡ್ಜ್​ಗೆ ಬರುವಾಗ ಇಬ್ಬರು, ಹೋಗುವಾಗ ಒಬ್ಬನೇ: ಮುಚ್ಚಿದ್ದ ಕೊಠಡಿ ತೆರೆದವರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 13 =
Remember me
