ಬೆಂಗಳೂರು:ಲಾಕ್​ಡೌನ್​ನಿಂದಾಗಿ ಸ್ತಬ್ಧವಾದ ಕಾರ್ಖಾನೆಗಳು, ವಾಣಿಜ್ಯ ಸಂಕೀರ್ಣಗಳ ಮಾಲೀಕರ ಕೈಸೇರಿದ ವಿದ್ಯುತ್ ಬಿಲ್ ಶಾಕ್ ನೀಡಿದೆ. ಸರ್ಕಾರದ ಸೂಚನೆಯಂತೆ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ) ಮೀಟರ್ ರೀಡಿಂಗ್ ಬದಲಿಗೆ 3 ತಿಂಗಳ ಸರಾಸರಿ ವಿದ್ಯುತ್ ಬಳಕೆ ಲೆಕ್ಕ ಹಾಕಿ ಆನ್​ಲೈನ್/ಮೊಬೈಲ್​ಗೆ ಎಸ್​ಎಂಎಸ್ ಮೂಲಕ ಬಿಲ್ ಕಳುಹಿಸಿವೆ. ಈ ಬಿಲ್​ನಲ್ಲಿ ಬಳಸಿದ ವಿದ್ಯುತ್ ಜತೆಗೆ ನಿಗದಿತ ಶುಲ್ಕ (ಊಇ) ಸೇರಿಸಿವೆ. ಲಾಕ್​ಡೌನ್ ಮುಗಿದು ಬಾಡಿಗೆದಾರರು ಮರಳಿದ ಬಳಿಕ ಬಳಸಿದ ವಿದ್ಯುತ್​ಗೆ ಬಿಲ್ ಕಟ್ಟಿಸಬಹುದು.
ಆದರೆ ನಿಗದಿತ ಶುಲ್ಕದ್ದೇ ದೊಡ್ಡ ಭಾರ ಎನ್ನುತ್ತಿದ್ದಾರೆ ಉದ್ಯಮಿಗಳು. ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿ ನಷ್ಟವಾಗಿದ್ದು, ವಿನಾಯಿತಿ ನೀಡಬೇಕೆಂದು ಕೆಲವರು ಮೊರೆಯಿಟ್ಟರೆ, ಕಾಲಾವಕಾಶ ನೀಡಿ ಕಂತಿನಲ್ಲಿ ಕಟ್ಟಲು ಅವಕಾಶ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ.
ಎಸ್ಕಾಂ ಸಮರ್ಥನೆ:ನಿಗದಿತ ಶುಲ್ಕ ಭರಿಸುವುದಾಗಿ ಸರ್ಕಾರ ಒಪ್ಪಿ ಕೆಇಆರ್​ಸಿಗೆ ಸಲ್ಲಿಸಬೇಕು. ಈ ವಿಷಯದಲ್ಲಿ ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ ಎಂದು ಎಸ್ಕಾಂ ಮೂಲಗಳು ಸಮರ್ಥಿಸಿಕೊಂಡಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 5 =
Remember me
