ಸಿರಗುಪ್ಪ(ಬಳ್ಳಾರಿ):ಕರೆಂಟ್ ಶಾಕ್ ಹೊಡೆಯು ವುದು ಎಲ್ಲರಿಗೂ ಗೊತ್ತು. ಆದರೆ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಜೆಸ್ಕಾಂ ಕಚೇರಿ ಗ್ರಾಹಕರಿಗೆ ಈ ತಿಂಗಳ ಕರೆಂಟ್ ಬಿಲ್ ಕೂಡ ಶಾಕ್ ಕೊಟ್ಟಿದೆ.
ಮಾಸಿಕ 500 ರಿಂದ 600 ರೂ. ಬರುತ್ತಿದ್ದ ಕರೆಂಟ್ ಬಿಲ್ ಈ ಬಾರಿ 4.5 ಲಕ್ಷ ರೂ.ನಿಂದ 5.78 ಲಕ್ಷ ರೂ.ವರೆಗೆ ಬಂದಿದ್ದು, ಗ್ರಾಹಕರನ್ನು ಅಚ್ಚರಿ ಜತೆಗೆ ಆಘಾತಕ್ಕೀಡುಮಾಡಿತ್ತು. 30 ಗ್ರಾಹಕರಿಗೆ ಇದೇ ರೀತಿಯಲ್ಲಿ ಬಿಲ್ ಬಂದಿದ್ದರಿಂದ ಜನ ಗಾಬರಿಯಾಗಿದ್ದರು. ಆದರೆ ಬಿಲ್ಲಿಂಗ್ ಮಷಿನ್​ನಲ್ಲಿನ ತಾಂತ್ರಿಕ ದೋಷದಿಂದ ಎಡವಟ್ಟಾಗಿದೆ ಎಂದು ಗೊತ್ತಾದ ಮೇಲೆ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.
ಹೊಸ ಬಿಲ್ಲಿಂಗ್ ಮಷಿನ್​ನ ತಾಂತ್ರಿಕ ದೋಷಗಳಿಂದಾಗಿ ತಪ್ಪಾಗಿದೆ. ಅದನ್ನು ಈಗಾಗಲೆ ಸರಿಪಡಿಸಿ ಗ್ರಾಹಕರಿಗೆ ಬೇರೆ ಬಿಲ್ ಕೊಟ್ಟಿದ್ದೇವೆ.
| ಶ್ರೀನಿವಾಸಜೆಸ್ಕಾಂ ಎಇಇ, ಸಿರಗುಪ್ಪ
ಪ್ರತಿ ತಿಂಗಳು 500 ರಿಂದ 600 ರೂ.ವರೆಗೆ ಬಿಲ್ ಬರು ತ್ತಿತ್ತು. ಈ ತಿಂಗಳು ಲಕ್ಷಾಂತರ ರೂ. ಬಿಲ್ ಬಂದಿದೆ. ಇದನ್ನು ನೋಡಿ ಶಾಕ್ ಆಗಿತ್ತು. ಇಲಾಖೆ ಅಧಿಕಾರಿಗಳನ್ನು ಸಂರ್ಪಸಿದೆ. ಅವರು ಸರಿಪಡಿಸಿಕೊಟ್ಟಿದ್ದಾರೆ.
| ರಾಜೇಶಗ್ರಾಹಕ, ಸಿರಗುಪ್ಪ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − four =
Remember me
