ಬೆಂಗಳೂರು:ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ನವರತನ್ ಜ್ಯುವೆಲರ್ಸ್ ಪ್ರೖೆ.ಲಿ. ಆಯೋಜಿಸಿದ್ದ ಮೂರು ದಿನಗಳ ‘ದಿ ಪ್ರಿನ್ಸೆಸ್ ಫ್ಯಾಷನ್ ಶೋ’ ಗೆ ಭಾನುವಾರ ತೆರೆಬಿದ್ದಿದೆ.
ಯುವ ರೂಪದರ್ಶಿಗಳಿಗೆ ಅವಕಾಶ ಕಲ್ಪಿಸಿ ಉತ್ತಮ ಭವಿಷ್ಯ ರೂಪಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಫ್ಯಾಷನ್ ಶೋನಲ್ಲಿ ಸಾಂಪ್ರದಾಯಿಕತೆ ಮತ್ತು ಆಧುನಿಕತೆಯ ಉಡುಪು ಧರಿಸಿ ರೂಪದರ್ಶಿಗಳು ಆಭರಣಗಳನ್ನು ತೊಟ್ಟು ರ‍್ಯಾಂಪ್ ವಾಕ್ ಮಾಡಿದರು. ಮುಖ್ಯ ಅತಿಥಿಯಾಗಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಭಾಗವಹಿಸಿದ್ದರು. ಭಾನುವಾರ ವೈದ್ಯದಿನವೂ ಆಗಿದ್ದರಿಂದ ವೈದ್ಯರಾದ ಡಾ. ಚಂದ್ರಮೌಳಿ, ಡಾ. ಸುಧೀರ್ ಪೈ, ಡಾ. ಕಾರ್ತಿಕ್ ನಾಗೇಶ್, ಡಾ. ಅಶೀಶ್ ಶಾ ಜತೆಗೆ ನವರತನ್ ಜ್ಯುವೆಲರ್ಸ್​ನ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

ಫೆಬ್ರವರಿ ಮತ್ತು ಮಾರ್ಚ್ ಅವಧಿಗೆ 2ನೇ ಅಲೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದನ್ನು ಮರೆಯಬಾರದು. ಇದು ನಮ್ಮ ಜೀವನದ ಒಂದು ಭಾಗವೆಂದು ನಾವು ತಿಳಿದುಕೊಳ್ಳಬೇಕೆಂದು ಡಾ. ಮಂಜುನಾಥ್ ತಿಳಿಸಿದರು.
ಸಾಧಕರಿಗೆ ಸನ್ಮಾನ
ಕರೊನಾ ಯೋಧರಾದ ವೈದ್ಯರು ಹಾಗೂ ಕ್ರೀಡಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ನವರತನ್ ಜ್ಯುವೆಲರ್ಸ್​ನ ಸಹ ವ್ಯವಸ್ಥಾಪಕ ನಿರ್ದೇಶಕ (ಜೆಎಂಡಿ) ನಿರ್ಮಲ್ ಕುಮಾರ್, ನಿರ್ದೇಶಕರಾದ ಅಶೋಕ್ ಕುಮಾರ್, ಮಿತೇಶ್ ಬಾಪ್ನಾ, ವಿನೋದ್ ಕುಮಾರ್, ಸಿಎಫ್​ಒ ಗ್ಯಾನ್ ಚಂದ್ ಮತ್ತಿತರರು ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
