ಬೆಂಗಳೂರು :ಆನ್‌ಲೈನ್ ತರಗತಿಯಲ್ಲಿ ಪಾಠ ಕೇಳಲು ಮಕ್ಕಳ ಕೈಗೆ ಮೊಬೈಲ್ ಕೊಟ್ಟಿದ್ದೀರಾ. ಹಾಗದರೇ ಮೊಬೈಲ್‌ನಲ್ಲಿ ಮಕ್ಕಳು ಏನೆಲ್ಲ ಮಾಡುತ್ತಾರೆ ಎಂಬುದರ ಬಗ್ಗೆ ನಿಗಾ ವಹಿಸಿ. ಇಲ್ಲವಾದರೆ, ಮಕ್ಕಳು ಸೈಬರ್ ಕಿರಾತಕರ ಕೈಗೊಂಬೆಯಾಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ.
ಇಂತಹ ಪ್ರಕರಣಯೊಂದು ಸಂಜಯನಗರದಲ್ಲಿ ನಡೆದಿದೆ. 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳಿಗೆ ಆನ್‌ಲೈನ್ ತರಗತಿಯಲ್ಲಿ ಪಾಠ ಕೇಳಲು ತಂದೆ ಮೊಬೈಲ್ ಕೊಡಿಸಿದ್ದರು. ವಿದ್ಯಾರ್ಥಿನಿ, ಪಾಠ ಕೇಳುವ ಜತೆಗೆ ಇನ್‌ಸ್ಟ್ರಾಗ್ರಾಮ್‌ನಲ್ಲಿ ಫೋಟೋ, ಡ್ಯಾನ್ಸ್ ವಿಡಿಯೋ ಅಪ್‌ಲೋಡ್ ಮಾಡಿದ್ದಳು. ಇದನ್ನೇ ದುರುಪಯೋಗಪಡಿಸಿಕೊಂಡ ಸ್ಥಳೀಯ ಹುಡುಗರು, ವಿಡಿಯೋವನ್ನು ಡೌನ್‌ಲೋಡ್ ಮಾಡಿಕೊಂಡು ಆಕೆ ಮೊಬೈಲ್‌ಗೆ ಕರೆ ಮಾಡಿ ಬೆದರಿಕೆ ಒಡ್ಡಿದ್ದಾರೆ. ನಾವು ಹೇಳಿದಂತೆ ಕೇಳದಿದ್ದರೆ ವಿಡಿಯೋವನ್ನು ತಿರುಚಿ ಮರ್ಯಾದೆ ತೆಗೆಯುವುದಾಗಿ ಹೆದರಿಸಿ ಪ್ರತಿದಿನ ಕಿರುಕುಳ ಕೊಟ್ಟಿದ್ದಾರೆ. ಹೆದರಿದ ವಿದ್ಯಾರ್ಥಿನಿ, ಪಾಲಕರಿಗೆ ಹೇಳಲು ಸಾಧ್ಯವಾಗದೆ ಸುಮ್ಮನಾಗಿದ್ದಳು. ಅ.30ರಂದು ಯುವಕರು, ಮನೆ ಬಳಿಗೆ ಬಂದು ಯುವತಿಗೆ ಕರೆ ಮಾಡಿ ರಸ್ತೆಗೆ ಬರುವಂತೆ ಒತ್ತಾಯಿಸಿದ್ದಾರೆ. ನೊಂದ ಯುವತಿ, ತಂದೆ ಬಳಿ ನಡೆದ ವಿಚಾರ ಹೇಳಿಕೊಂಡಿದ್ದಾರೆ. ಎಚ್ಚೆತ್ತ ತಂದೆ, ಸ್ಥಳೀಯರ ಸಹಾಯದಿಂದ ಯುವಕರನ್ನು ಬೆನ್ನಟ್ಟಿ ಒಬ್ಬನ ಹಿಡಿದು ಸಂಜಯನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಚಾರ ಸ್ಥಳೀಯ ಜನರಿಗೆ ತಿಳಿಯುತ್ತಿದಂತೆ ಯುವಕನ ಪಾಲಕರು ಠಾಣೆಗೆ ಬಂದಿದ್ದಾರೆ. ಪೊಲೀಸರು ಓಡಿಹೋಗಿದ್ದ ಮೂವರು ಯುವಕರನ್ನು ಕರೆಸಿದ್ದಾರೆ. ಯುವಕರು ಮತ್ತು ಯುವತಿ ಪಾಲಕರು ರಾಜೀಸಂಧಾನ ಮಾಡಿಕೊಂಡಿದ್ದಾರೆ. ಯುವಕರು ಮತ್ತು ಅವರ ಪಾಲಕರು ತಪ್ಪೊಪ್ಪಿಗೆ ಮುಚ್ಚಳಿಕೆ ಬರೆದುಕೊಟ್ಟು ರಾಜೀ ಮಾಡಿಕೊಂಡಿದ್ದಾರೆ ಎಂದು ಸಂಜಯನಗರ ಪೊಲೀಸರು ತಿಳಿಸಿದ್ದಾರೆ.
Web Exclusive | ನೂರಾರು ಕನ್ನಡ ಸಂಘಗಳಿಂದ ‘ವಿಶ್ವ ಕನ್ನಡ ಸಾಂಸ್ಕೃತಿಕ ಹಬ್ಬ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
