ಬೆಂಗಳೂರು: ಎರಡು ಕೋಟಿ ರೂ. ಬಹುಮಾನದ ಆಸೆ ತೋರಿಸಿದ ಸೈಬರ್ ಕಳ್ಳರು ವ್ಯಕ್ತಿಗೆ 20 ಸಾವಿರ ರೂ. ವಂಚಿಸಿದ್ದಾರೆ. ಗೊಲ್ಲರಹಟ್ಟಿ ಸಮೀಪ ಅಂಜನಾನಗರದ ಎಂ. ಕುಮಾರ್ ವಂಚನೆಗೊಳಗಾದವರು.
ಕೆಲ ದಿನಗಳ ಹಿಂದೆ ವಂಚಕರು ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಕುಮಾರ್​ಗೆ ಕರೆ ಮಾಡಿ ನಿಮಗೆ ಲಾಟರಿಯಲ್ಲಿ 2 ಕೋಟಿ ರೂ. ಬಹುಮಾನ ಬಂದಿದೆ. ನೀವು ಹಣ ಪಡೆಯಲು ಕೆಲ ಶುಲ್ಕಗಳನ್ನು ಪಾವತಿಸಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ:ಮೊದಲ ಬ್ಯಾಚ್​ನ 5 ರಫೆಲ್​ ಜೆಟ್​ಗಳು ಜುಲೈ ಅಂತ್ಯಕ್ಕೆ ಸೇನೆ ಸೇರ್ಪಡೆ
ಅಂತೆಯೇ ಅವರು ಸೂಚಿಸಿದ ಅತುಲ್ ಕುಮಾರ್ ಎಂಬಾತನ ಬ್ಯಾಂಕ್ ಖಾತೆಗೆ ಹಂತಹಂತವಾಗಿ 20,500 ರೂ.ಗಳನ್ನು ಕುಮಾರ್ ಜಮೆ ಮಾಡಿದ್ದಾರೆ. ಆದರೆ ಈ ಹಣ ಸಂದಾಯವಾದ ಬಳಿಕ ವಂಚಕರು ಮೊಬೈಲ್ ಆಫ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಈ ವರ್ಷ ಎರಡು ಬಿಡುಗಡೆ; ಮೂರು ಶೂಟಿಂಗ್​ … ಇನ್ನು ಸುಮ್ಮನೆ ಕೂರಲ್ಲ ಅಕ್ಷಯ್​
ಈ ಬಗ್ಗೆ ಕುಮಾರ್ ದೂರು ನೀಡಿದ್ದು ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
29ರಿಂದ ಹಜ್ ಯಾತ್ರೆ ಶುರು- 1,000 ಯಾತ್ರಿಗಳಿಗಷ್ಟೇ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twelve =
Remember me
