|ಗೋವಿಂದರಾಜು ಚಿನ್ನಕುರ್ಚಿಬೆಂಗಳೂರು
ಮಕ್ಕಳ ಸ್ಮಾರ್ಟ್​ಫೋನ್ ಕ್ರಿಯೆಟಿವಿಟಿ ಬಗ್ಗೆ ಹೆಮ್ಮೆ ಪಡುವ ಪಾಲಕರು ಗಮನಿಸಲೇಬೇಕಾದ ಸುದ್ದಿ ಇದು! ಹೌದು, ಕರೊನಾ ಕಾಲಘಟ್ಟ ಹಾಗೂ ನಂತರದ ದಿನಗಳಲ್ಲಿ ಕಲಿಕೆ, ಹೋಮ್ರ್ಕ್ ಜತೆಗೆ ರೀಲ್ಸ್, ಯೂಟ್ಯೂಬ್ ಚಾನೆಲ್​ನಂಥ ಹವ್ಯಾಸ, ಫೇಸ್​ಬುಕ್, ಇನ್​ಸ್ಟಾಗ್ರಾಂ, ಸ್ನ್ಯಾಪ್​ ಚ್ಯಾಟ್​ ಮತ್ತಿತರ ಗೀಳು ಹತ್ತಿಸಿಕೊಂಡಿರುವ ಮಕ್ಕಳು ಸೈಬರ್ ವಂಚಕರ ಖೆಡ್ಡಾಕ್ಕೆ ಬೀಳುವ ಅಪಾಯ ಹೆಚ್ಚಾಗಿದೆ. ಇದರಿಂದ ಮಕ್ಕಳು ಮಾತ್ರವಲ್ಲ, ಇಡೀ ಕುಟುಂಬವೇ ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗಬಹುದು.
ಆಂಡ್ರಾಯ್್ಡ ಫೋನ್ ಬಳಕೆಯಲ್ಲಿ ತೊಡಗಿರುವ ಮಕ್ಕಳಿಗೆ ವಿವಿಧ ಆಕರ್ಷಕ ಗೇಮ್​ಗಳ ಲಿಂಕ್​ಗಳನ್ನು ಕಳುಹಿಸಿ, ಮಾನಸಿಕ ವ್ಯಸನಿಗಳನ್ನಾಗಿಸುವ ಜಾಲ ದೇಶಾದ್ಯಂತ ಸಕ್ರಿಯವಾಗಿದೆ. ವಿವಿಧ ಆಮಿಷವೊಡ್ಡಿ ಮಕ್ಕಳನ್ನು ಕೈಗೊಂಬೆ ಮಾಡಿಕೊಳ್ಳುತ್ತಿರುವ ವಂಚಕರು, ಕುಟುಂಬಸ್ಥರ ಅಶ್ಲೀಲ ಪೋಟೋ -ವಿಡಿಯೋಗಳನ್ನು ಪಡೆದು ಬ್ಲಾ್ಯಕ್​ವೆುೕಲ್ ಮಾಡುತ್ತಿದ್ದಾರೆ.
ಸೈಬರ್ ಕ್ರಿಮಿನಲ್​ಗಳು ಮಕ್ಕಳನ್ನೇ ಟಾರ್ಗೆಟ್ ಮಾಡಿ ಆನ್​ಲೈನ್​ನಲ್ಲೇ ಬಲೆ ಬೀಸುತ್ತಿದ್ದಾರೆ. ಇದಕ್ಕೆ ಸೈಬರ್ ಕ್ರೖೆಂ ಭಾಷೆಯಲ್ಲಿ ‘ಆನ್​ಲೈನ್ ಗ್ರೂಮಿಂಗ್’ ಎನ್ನಲಾಗುತ್ತಿದೆ. ಕೋವಿಡ್ ಲಾಕ್​ಡೌನ್ ಮತ್ತು ನಂತರದ ದಿನಗಳಲ್ಲಿ ಸ್ಮಾರ್ಟ್​ಫೋನ್​ಗಳು ಮಕ್ಕಳ ಕೈ ಸೇರಿವೆ. ಆನ್​ಲೈನ್ ಗೇಮ್ ಇನ್​ಸ್ಟಾಗ್ರಾಂ ಇನ್ನಿತರ ಜಾಲತಾಣದಲ್ಲಿ ಮಕ್ಕಳು ಹೆಚ್ಚು ನಿರತರಾಗಿದ್ದಾರೆ. ಇವರನ್ನೇ ಟಾರ್ಗೆಟ್ ಮಾಡಿರುವ ಸೈಬರ್ ಕಳ್ಳರು, ಸಾಮಾಜಿಕ ಜಾಲತಾಣಗಳ ಮೂಲಕವೇ ಪರಿಚಯ ಮಾಡಿಕೊಂಡು ಹೊಸ ಹೊಸ ಗೇಮ್ಳು ಹಾಗೂ ಇನ್ನಿತರ ಚಟುವಟಿಕೆಗಳ ಲಿಂಕ್​ಗಳನ್ನು ಕಳುಹಿಸುತ್ತಿದ್ದಾರೆ.
ನಿಧಾನವಾಗಿ ಅವರನ್ನು ಆನ್​ಲೈನ್ ಗೇಮ್ಳ ವ್ಯಸನಿಗಳಾಗಿಸಿದ ನಂತರ ಮಾನಸಿಕವಾಗಿ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ನಂತರ ಹೆದರಿಸಿ ಕುಟುಂಬದ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ರಹಸ್ಯವಾಗಿ ಪಡೆದು, ಅದನ್ನು ಪಾಲಕರಿಗೆ ಕಳುಹಿಸಿ, ಬ್ಲಾ್ಯಕ್​ವೆುೕಲ್ ಮೂಲಕ ಹಣ ಸುಲಿಗೆ ಮಾಡುತ್ತಿದ್ದಾರೆ. ಅಲ್ಲದೆ, ಕೆಲವೊಂದು ಪ್ರಕರಣಗಳಲ್ಲಿ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಪಾಲಕರಿಗೆ ಕಳುಹಿಸುವುದಾಗಿ ಮಕ್ಕಳಿಗೇ ಹೆದರಿಸಿ ಅವರಿಂದಲೇ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡು ಹಣ ಎಗರಿಸಿರುವ ಪ್ರಕರಣಗಳೂ ವರದಿಯಾಗಿವೆ.
ಖಾಸಗಿ ವಿಡಿಯೋ ಸೆರೆ:ಮೊದಲು ಮಕ್ಕಳಿಗೆ ಹೊಸ ಗೇಮ್ ಅಥವಾ ಅವರ ಅಶ್ಲೀಲ ವಿಡಿಯೋ ಮುಂದಿಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡುತ್ತಾರೆ. ತಂದೆ-ತಾಯಿಯ ಖಾಸಗಿ ಕ್ಷಣವನ್ನು ವಿಡಿಯೋ ಸೆರೆಹಿಡಿದು ಕಳುಹಿಸುವಂತೆ ಪ್ರಚೋದಿಸಿ ಪಡೆಯುತ್ತಾರೆ. ಪಾಲಕರ ಮೊಬೈಲ್​ಗೆ ಕರೆ ಮಾಡಿ ಬೆದರಿಕೆ ಒಡ್ಡಿ ಹಣ ವಸೂಲಿ ಶುರು ಮಾಡುತ್ತಾರೆ. ಇತ್ತೀಚೆಗೆ 13 ವರ್ಷದ ಬಾಲಕ, ತಂದೆ-ತಾಯಿ ಖಾಸಗಿ ವಿಡಿಯೋ ಸೈಬರ್ ಕಳ್ಳರಿಗೆ ಕಳುಹಿಸಿ ಪೇಚಿಗೆ ಸಿಲುಕಿದ್ದ. ಈ ಬಗ್ಗೆ ಸಿಐಡಿಯಲ್ಲಿ ಕೇಸ್ ದಾಖಲಾಗಿತ್ತು.
ಆನ್​ಲೈನ್ ಗೇಮ್ ಜಾಲತಾಣದಿಂದ ಮಕ್ಕಳನ್ನು ಆದಷ್ಟು ದೂರ ಇರಿಸಿ. ಆನ್​ಲೈನ್​ನಲ್ಲಿ ಯಾವುದೇ ರೀತಿಯ ವಂಚನೆಗೆ ಒಳಗಾಗಿದ್ದರೆ ತಕ್ಷಣ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ.
|ರಮಣ್ ಗುಪ್ತಜಂಟಿ ಪೊಲೀಸ್ ಆಯುಕ್ತ (ಅಪರಾಧ)
ಟಾರ್ಗೆಟ್​ ಯಾರು?:ಸೈಬರ್ ಕ್ರಿಮಿನಲ್​ಗಳು ಆನ್​ಲೈನ್ ಗ್ರೂಮಿಂಗ್​ನಲ್ಲಿ 10 ರಿಂದ 16 ವರ್ಷದ ಮಕ್ಕಳನ್ನೇ ಟಾರ್ಗೆಟ್ ಮಾಡಿದ್ದಾರೆ. ರಾಜ್ಯದಲ್ಲಿ ಈ ಸಂಬಂಧ 159 ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 4 =
Remember me
