ಬೆಂಗಳೂರು: ವಾಟ್ಸ್​ಆಪ್ ಡಿಪಿಗೆ ಗೆಳೆಯನ ಫೋಟೋ ಹಾಕಿ ಸೈಬರ್ ಕಳ್ಳರು ಸಾಫ್ಟ್​ವೇರ್ ಉದ್ಯೋಗಿಗೆ 1.4 ಲಕ್ಷ ರೂ. ವಂಚಿಸಿದ್ದಾರೆ. ಹೆಸರಘಟ್ಟ ರಸ್ತೆಯ ಮಲ್ಲಸಂದ್ರದ ಟೆಕ್ಕಿ ವಂಚನೆಗೆ ಒಳಗಾದವರು. ತಮ್ಮ ಸ್ನೇಹಿತನ ಹೆಸರಿನಲ್ಲಿ ವಾಟ್ಸ್​ಆಪ್​ನಲ್ಲಿ ಸಂದೇಶ ಕಳುಹಿಸಿ ಹಣ ಪಡೆದು ಮೋಸ ಮಾಡಿರುವುದಾಗಿ ದೂರು ನೀಡಿರುವುದಾಗಿ ಉತ್ತರ ವಿಭಾಗ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ ಮೂಲದ ಸಾಫ್ಟ್​ವೇರ್ ಇಂಜಿನಿಯರ್, ಕುಟುಂಬದ ಜತೆ ಮಲ್ಲಸಂದ್ರದಲ್ಲಿ ವಾಸಿಸುತ್ತಿದ್ದಾರೆ. ಜು. 30ರಂದು ಅವರ ಸ್ನೇಹಿತನ ಹೆಸರಿನಲ್ಲಿ ವಾಟ್ಸ್​ಆಪ್​ನಲ್ಲಿ ಸಂದೇಶ ಬಂದಿದೆ. ‘ಅನಾರೋಗ್ಯ ಸಂಬಂಧ ತುರ್ತಾಗಿ 3 ಲಕ್ಷ ರೂ. ಬೇಕಿದೆ ಎಂದು ಸಂದೇಶವಿತ್ತು. ವಾಟ್ಸ್​ಆಪ್​ನಲ್ಲಿ ಡಿಪಿ ಕಾರಣಕ್ಕೆ ಗೆಳೆಯನದ್ದೇ ಎಂದು ನಂಬಿ 1.4 ಲಕ್ಷ ರೂ. ಗಳನ್ನು ಆತ ನೀಡಿದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾರೆ.
ಇದನ್ನೂ ಓದಿ:ಕೆಪಿಸಿಸಿ ಅಕಾಡೆಮಿ: ಪಕ್ಷದ ಸಿದ್ಧಾಂತ ಇತಿಹಾಸ ದಾಖಲೀಕರಣದ ಹೊಸ ಪ್ರಯತ್ನ
ಮರುದಿನ ಗೆಳೆಯನ ಯೋಗಕ್ಷೇಮ ವಿಚಾರಣೆಗೆ ಕರೆ ಮಾಡಿದಾಗಲೇ ವಂಚನೆ ನಡೆದಿರುವುದು ಗೊತ್ತಾಗಿದೆ.
30 ಲಕ್ಷ ಸಾಲ ಕೊಡ್ತೇನೆ ಎನ್ನುತ್ತ 4.5 ಲಕ್ಷ ರೂಪಾಯಿ ಲಪಟಾಯಿಸಿದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − fifteen =
Remember me
