ಬೆಂಗಳೂರು:ಬ್ಯಾಂಕ್​ಗಳಲ್ಲಿ ಸಾಲ ಮಾಡಿದವರಿಗೆ ಇಎಂಐ (ಮಾಸಿಕ ಕಂತು) ಪಾವತಿಗೆ ಆರ್​ಬಿಐ ನೀಡಿದ ಕಂತು ಮುಂದೂಡಿಕೆ ಅವಕಾಶವನ್ನೇ ದುರುಪಯೋಗ ಪಡಿಸಿಕೊಂಡು ಸೈಬರ್ ಕಳ್ಳರು ವಂಚನೆಗೆ ಬಲೆ ಬೀಸುತ್ತಿದ್ದಾರೆ.
ಏನಿದು ವಂಚಕ ಆಪ್?
ಕ್ವಿಕ್ ಸಪೋರ್ಟ್ ಆಪ್ ಎನಿಡೆಸ್ಕ್ ಆಪ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಮೊಬೈಲ್​ಗೆ ಡೌನ್​ಲೋಡ್ ಮಾಡಿಕೊಳ್ಳುವಾಗ ಮೊಬೈಲ್ ನಂಬರ್ ನಮೂದು ಮಾಡಿರುತ್ತೇವೆ. ಆಪ್ ಇನ್​ಸ್ಟಾಲ್ ಆದ ಕೂಡಲೇ ಮೊಬೈಲ್ ಕಂಟ್ರೋಲ್ ಸೈಬರ್ ಕಳ್ಳರ ಕೈಗೆ ಸಿಗುತ್ತದೆ. ಆಗ ಕಳ್ಳರು ಅಜ್ಞಾತ ಸ್ಥಳದಿಂದಲೇ ನಮ್ಮ ಮೊಬೈಲ್​ನ್ನು ರಿಮೋಟ್ ಕಂಟ್ರೋಲ್ ಮಾದರಿ ಬಳಸುತ್ತಾರೆ. ಮೊಬೈಲ್ ಬ್ಯಾಂಕಿಂಗ್, ವ್ಯಾಲೆಟ್​ನ್ನು ಆಪರೇಟ್ ಮಾಡಿ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ವ್ಯಕ್ತಿಯೊಬ್ಬರ ಮೊಬೈಲ್​ಗೆ ಕರೆ ಮಾಡಿ 3 ತಿಂಗಳ ಇಎಂಐ ಮುಂದೂಡಲು ಸೌಲಭ್ಯ ಕಲ್ಪಿಸುವ ಸೋಗಿನಲ್ಲಿ 20 ಸಾವಿರ ರೂ. ದೋಚಿದ್ದಾರೆ. ಈ ಸಂಬಂಧ ಸುಂಕದಕಟ್ಟೆಯ ವೈ.ಸಿ. ಪ್ರಕಾಶ್ ಎಂಬುವರು ಪಶ್ಚಿಮ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ರಾಹುಲ್ ಶರ್ಮಾ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.
ಲಾಕ್​ಡೌನ್​ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬ್ಯಾಂಕ್ ಸಾಲಗಾರರಿಗೆ ಇಎಂಐ ಪಾವತಿ ಮಾಡಲು ಆರ್​ಬಿಐ, ಹಂತ ಹಂತವಾಗಿ 6 ತಿಂಗಳ ವಿನಾಯಿತಿ ನೀಡಿ ಬ್ಯಾಂಕ್​ಗಳಿಗೆ ಆದೇಶಿಸಿದೆ. ಬ್ಯಾಂಕ್ ಗ್ರಾಹಕರು ಸಹ ತಮಗೆ ಸೌಲಭ್ಯ ಬೇಕಾದರೆ ಸಂಬಂಧಪಟ್ಟ ಬ್ಯಾಂಕ್​ಗೆ ಆನ್​ಲೈನ್ ಮೂಲಕ ಪತ್ರ ರವಾನಿಸಬೇಕಾಗಿದೆ. ಇಲ್ಲವಾದರೆ, ತಿಂಗಳ ಕಂತು ಕಡಿತವಾಗುತ್ತದೆ. ಆರ್​ಬಿಐ ನೀಡಿದ ಈ ಸೌಲಭ್ಯವನ್ನೇ ದುರುಪಯೋಗಪಡಿಸಿಕೊಂಡ ಸೈಬರ್ ಕಳ್ಳರು ಅಮಾಯಕರಿಗೆ ವಂಚನೆ ಮಾಡುತ್ತಿದ್ದಾರೆ.
ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಬ್ಯಾಂಕ್ ಖಾತೆ ವಿವರ ಕೇಳಿದರೆ ಹಾಗೂ ಲಿಂಕ್, ಆಪ್ ಕಳುಹಿಸಿ ಮಾಹಿತಿ ಕೋರಿದರೆ ಹಂಚಿಕೊಳ್ಳಬೇಡಿ. ಇದು ಸೈಬರ್ ಕಳ್ಳರ ವಂಚನೆ ಜಾಲ.| ಭಾಸ್ಕರ್ ರಾವ್ನಗರ ಪೊಲೀಸ್ ಆಯುಕ್ತ
ಜೂ.6ರ ಮಧ್ಯಾಹ್ನ 12.15ರಲ್ಲಿ ಪ್ರಕಾಶ್ ಅವರ ಮೊಬೈಲ್​ಗೆ ಕರೆ ಮಾಡಿದ ವ್ಯಕ್ತಿ, ಎಚ್​ಡಿಎಫ್​ಸಿ ಬ್ಯಾಂಕ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಪ್ರಕಾಶ್ ಕೂಡ ಅದೇ ಬ್ಯಾಂಕ್​ನಲ್ಲಿ ಸಾಲ ಪಡೆದಿದ್ದರು. ಹಾಗಾಗಿ ಅಪರಿಚಿತ ವ್ಯಕ್ತಿಯನ್ನೇ ಬ್ಯಾಂಕ್ ಅಧಿಕಾರಿ ಎಂದು ನಂಬಿ ಸಂಭಾಷಣೆ ಮುಂದುವರಿಸಿದ್ದಾರೆ. ಆತ, ‘ನಿಮ್ಮ ಸಾಲದ ಇಎಂಐ 3 ತಿಂಗಳು ಮುಂದೂಡಲಾಗುತ್ತದೆ. ಈ ಸೌಲಭ್ಯ ಬೇಕಾದರೆ ಮೊದಲು ಕ್ವಿಕ್ ಸಪೋರ್ಟ್ ಆಪ್ ಡೌನ್​ಲೋಡ್ ಮಾಡಿಕೊಳ್ಳಿ’ ಎಂದು ಹೇಳಿದ್ದಾನೆ. ಅದರಂತೆ ಪ್ರಕಾಶ್ ಮೊಬೈಲ್​ನಲ್ಲಿ ಆಪ್ ಡೌನ್​ಲೋಡ್ ಮಾಡಿಕೊಂಡು ಬ್ಯಾಂಕ್ ಖಾತೆ ವಿವರ ಭರ್ತಿ ಮಾಡಿದ್ದರು. ಇದಾದ ಬಳಿಕ ಪ್ರಕಾಶ್ ಖಾತೆಯಿಂದ ಹಂತ ಹಂತವಾಗಿ 19,998 ರೂ. ಗಳನ್ನು ಸೈಬರ್ ಕಳ್ಳ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಮೋಸಗಾರರ ಕೈಗೆ ಸಿಲುಕಿರು ವುದಾಗಿ ತಿಳಿದ ಪ್ರಕಾಶ್ ದೂರು ದಾಖಲಿಸಿದ್ದಾರೆ.
ಎಚ್ಚರ ವಹಿಸದಿದ್ದರೆ ಕನ್ನ:ಇಎಂಐ ಪಾವತಿ ಕಂತು ಮುಂದೂಡಿಕೆ ಪಡೆಯಬೇಕಾದರೆ ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ಸಂಬಂಧಪಟ್ಟ ಬ್ಯಾಂಕ್​ನ ಆನ್​ಲೈನ್ ಸೇವೆಯಲ್ಲಿ ಅರ್ಜಿಯನ್ನು ಸಲ್ಲಿಸಿ. ಯಾವುದೇ ಬ್ಯಾಂಕ್ ಅಧಿಕಾರಿಗಳು ಕರೆ ಮಾಡುವುದಿಲ್ಲ. ಒಂದು ವೇಳೆ ಯಾರಾದರೂ ತಾವು ಅಧಿಕಾರಿಗಳೆಂದು ಕರೆ ಮಾಡಿದರೆ ಎಚ್ಚರ ವಹಿಸಿ. ಅನಗತ್ಯವಾಗಿ ಆಪ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳಬೇಡಿ. ಅಲ್ಲದೆ, ಯಾರೊಂದಿಗೂ ಬ್ಯಾಂಕ್ ಖಾತೆ ವಿವರ ಹಂಚಿಕೊಳ್ಳಬೇಡಿ.
ಕಥೆಯಲ್ಲ-ಜೀವನ: ಅನಾರೋಗ್ಯಪೀಡಿತ ಪೋಲಿಸಪ್ಪನ ನೋವಿನ ಕಥೆ-ವ್ಯಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 6 =
Remember me
