ಬಳ್ಳಾರಿ:ಪರಿಚಿತರೇ ಇರಲಿ, ಮಕ್ಕಳೇ ಇರಲಿ. ಬ್ರೌಸ್ಸಿಂಗ್​ ಮಾಡಲು ಸ್ಮಾರ್ಟ್​ಫೋನ್​ ಕೊಡುವ ಮುನ್ನ ಸಾವಿರ ಬಾರಿ ಯೋಚಿಸಿ. ಬ್ಯಾಂಕ್​ ಮ್ಯಾನೇಜರ್​ ಒಬ್ಬರು ತಮ್ಮ ಸ್ಮಾರ್ಟ್​ಫೋನ್​ ಅನ್ನು ಬ್ರೌಸ್​ ಮಾಡಲು ಗೆಳತಿಗೆ ಕೊಟ್ಟು 50 ಸಾವಿರ ರೂ. ಕಳೆದುಕೊಂಡಿದ್ದಾರೆ.
ಬ್ಯಾಂಕ್​ ಮ್ಯಾನೇಜರ್​ ವಾಣಿ ಅವರ ಮನೆಗೆ ಬಂದಿದ್ದ ಗೆಳತಿ, ವಾಣಿ ಅವರ ಸ್ಮಾರ್ಟ್​ಫೋನ್​ ಬಳಸಿ ಉದ್ಯೋಗ ಹುಡುಕಲು ಮುಂದಾಗಿದ್ದರು. ಆಗ ಶೈನ್​ಡಾಟ್​ ಕಾಂನಿಂದ ಉದ್ಯೋಗ ಲಭ್ಯತೆಯ ಲಿಂಕ್​ ದೊರೆತಿತ್ತು. ಆ ಲಿಂಕ್​ ತೆರೆದ ಬಳಿಕ ಕೋಮಲ್​ ಎಂಬಾಕೆ ಕರೆ ಮಾಡಿ, ಅವರ ವೈಯಕ್ತಿಕ ವಿವರಗಳನ್ನು ಕೇಳಿ ತಿಳಿದುಕೊಂಡಿದ್ದಳು.
ನಿಮಗೆ ನಮ್ಮ ಕಂಪನಿಯಲ್ಲಿ ಕೆಲಸ ಸಿಗಲಿದೆ. ರೆಸ್ಯೂಮ್ ತುಂಬಿ ಲಿಂಕ್‌ನಲ್ಲಿ ಹಾಕಿ. ಆನ್‌ಲೈನ್ ಮೂಲಕವೇ ಇಂಟರ್‌ವ್ಯೆ ಮಾಡಲಾಗುವುದು ಎಂದು ಆಕೆ ಹೇಳಿದ್ದಳು.
ಅದರಂತೆ ರೆಸ್ಯೂಮ್​ ತುಂಬಿ ಲಿಂಕ್​ನಲ್ಲಿ ಅಪ್​ಡೇಟ್​ ಮಾಡುವಾಗ ಕ್ರೆಡಿಟ್​ಕಾರ್ಡ್​ ಮಾಹಿತಿಯನ್ನೂ ಕೇಳಲಾಗಿತ್ತು. ತಮ್ಮ ಬಳಿ ಕ್ರೆಡಿಟ್​ಕಾರ್ಡ್​ ಇಲ್ಲದ ಕಾರಣ ಗೆಳತಿ ವಾಣಿ ಅವರ ಕ್ರೆಡಿಟ್​ಕಾರ್ಡ್​ ವಿವರಗಳನ್ನು ಒದಗಿಸಿದ್ದರು.
ಆರಂಭದಲ್ಲಿ ಕ್ರೆಡಿಟ್​ಕಾರ್ಡ್​ನಿಂದ 49 ರೂ. ಕಟ್​ ಆಗಿದ್ದು, ಒಂದು ಗಂಟೆಯ ಬಳಿಕ ತಲಾ 10 ಸಾವಿರ ರೂ.ನಂತೆ 5 ಬಾರಿ ಕಾರ್ಡ್​ ಸ್ವೈಪ್​ ಆಗಿದೆ. ಇದರಿಂದ ವಂಚನೆಗೆ ಒಳಗಾಗಿರುವುದು ಗೊತ್ತಾಗಿ, ಸೈಬರ್​ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ
https://www.vijayavani.net/coronavirus-india-may-month-pandemic-infection/.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − fifteen =
Remember me
