ರಾಮನಗರ:ಸೈಬರ್ ಕ್ರೈಂ ಈಗ ಸಾಮಾನ್ಯ ಎನ್ನುವಂತೆ ಆಗಿದೆ. ಪೊಲೀಸ್ ಇಲಾಕೆ ಏನೆಲ್ಲಾ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಸೈಬರ್ ಕಳ್ಳರ ಕೈಚಳ ಮಾತ್ರ ನಿಂತೇ ಇಲ್ಲ. ಇದೀಗ ರಾಮನಗರ ಜಿಲ್ಲಾಧಿಕಾರಿ ಹೆಸರಲ್ಲೇ ದುರ್ಬಳಕೆ ಮಾಡಿಕೊಂಡು, ಸರ್ಕಾರಿ ಅಧಿಕಾರಿಯೊಬ್ಬರನ್ನು ವಂಚಿಸುವ ಪ್ರಕರಣ ದಾಖಲಾಗಿದೆ. ಇದೇನಿದು ಪ್ರಕರಣ ಎನ್ನುತ್ತೀರಾ…ಈ ವರದಿ ನೋಡಿ
ಜು.27ರಂದು ರಾಮನಗರ ಜಿಲ್ಲಾಧಿಕಾರಿ ಹೆಸರಲ್ಲಿ ಸಣ್ಣ ನೀರಾವರಿ ಇಲಾಕೆ ಸಹಾಯಕ ಅಭಿಯಂತರ ಎಚ್.ಎಂ.ಕೊಟ್ರೇಶ್ ಅವರಿಗೆ ಅಮೇಜಾನ್ ಪೇ – ಇ -ಗಿಫ್ಟ್ ಕಾರ್ಡ್‌ಗಳನ್ನು ಕೊಡಬೇಕಾಗಿ ಸಂದೇಶ ಬಂದಿದೆ. ಅಲ್ಲದೆ, ಈ ಗಿಫ್ಟ್ ಗಳನ್ನು ಮರುಪಾವತಿ ಮಾಡುವುದಾಗಿಯೂ ತಿಳಿಸಿದೆ.
ಜಿಲ್ಲಾಧಿಕಾರಿಯಿಂದಲೇ ಸಂದೇಶ ಬಂದಿದೆ ಎಂದು ಭಾವಿಸಿದ ಕೊಟ್ರೇಶ್, ತಮಗೆ ಸಂದೇಶ ಬಂದ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಈ ವೇಳೆ ವಂಚಕ 10 ಸಾವಿರ ರೂ ಬೆಲೆಯ 15 ಗಿಫ್ಟ್ ಕಾರ್ಡ್‌ಗಳು ಬೇಕು ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಟ್ರೇಶ್ ತಮ್ಮ ಅಮೇಜಾನ್ ಖಾತೆಯಿಂದ ಒಂದು ಲಕ್ಷ ರೂ ಮೌಲ್ಯದ ಒಟ್ಟು 10 ಗಿಫ್ಟ್ ಕಾರ್ಡ್‌ಗಳು ಹಾಗೂ ತಮ್ಮ ಸ್ನೇಹಿತರಾದ ಯುಗಂದರಗೌಡ ಅವರ ಅಮೇಜಾನ್ ಅಕೌಂಟ್‌ನಿಂದ 50 ಸಾವಿರ ರೂ ಮೌಲ್ಯದ ಒಟ್ಟು 5 ಕಾರ್ಡ್‌ಗಳನ್ನು ಖರೀದಿಸಿ ವ್ಯಾಟ್ಸ್ ಆಫ್ ಸಂಖ್ಯೆ 9227867253ಗೆ ಕಳುಹಿಸಿದ್ದಾರೆ.ಆದರೆ ಇದಾದ ನಂತರ ಜಿಲ್ಲಾಧಿಕಾರಿ ಕಚೇರಿ ವಾಟ್ಸ್ ಆಫ್ ಗ್ರೂಪ್‌ನಲ್ಲಿ ವಂಚನೆಯ ಬಗ್ಗೆ ತಿಳಿಸಿದಾಗ, ಅಧಿಕಾರಿಗಳು ವಂಚನೆಗೆ ಒಳಗಾಗಿರುವುದು ತಿಳಿದು ಬಂದಿದ್ದು, ಈ ಸಂಬಂಧ ಕೊಟ್ರೇಶ್ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಎಚ್ಚರಿಕೆ ಇರಲಿಇತ್ತೀಚಿಗೆ ಆನ್‌ಲೈನ್ ಮೂಲಕ ವಂಚನೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ, ಪೊಲೀಸ್ ಇಲಾಖೆ, ಮಾಧ್ಯಮಗಳು ಸಹ ಈ ಬಗ್ಗೆ ಸಾಕಷ್ಟು ಎಚ್ಚರಿಸುವ ಕೆಲಸವನ್ನು ಮಾಡುತ್ತಲೇ ಇವೆ. ಆದರೂ ವಂಚನೆಗೆ ಒಳಗಾಗುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಸಾರ್ವಜನಿಕರು ಯಾವುದೋ ಉಡುಗೊರೆ, ಸಾಲದ ಹೆಸರಲ್ಲಿ ವಂಚಿಸಲು ಬರುವವರ ಬಗ್ಗೆ ಎಚ್ಚರವಹಿಸಬೇಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
