ಬೆಂಗಳೂರು:ಸೆಕ್ಯುರಿಟಿ ಶುಲ್ಕದ ನೆಪದಲ್ಲಿ ಯೋಗ ಶಿಕ್ಷಕಿಯಿಂದ 65 ಸಾವಿರ ರೂ. ಪಡೆದು ಸೈಬರ್ ಕಳ್ಳರು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಇದನ್ನೂ ಓದಿ:‘ಲವ್ ಮಾಡು’ ಎಂದು ಟೀಚರ್ ಮಗನ ಕಾಟ, ಆತನಿಗೆ ಅಮ್ಮನ ಬೆಂಬಲ?: ಸಾವಿಗೆ ಶರಣಾದ್ಲು ಹತ್ತನೇ ತರಗತಿ ವಿದ್ಯಾರ್ಥಿನಿಬಿಎಸ್‌ಎಫ್​​ ಕಚೇರಿಯ ಮಹಿಳಾ ಅಧಿಕಾರಿಗಳಿಗೆ ಯೋಗ ತರಗತಿ ಮಾಡಬೇಕೆಂದು ನಂಬಿಸಿ ಈ ಕೃತ್ಯ ಎಸಗಿರುವ ಕಳ್ಳರ ವಿರುದ್ಧ ಯೋಗ ಶಿಕ್ಷಕಿಗೆ ಕೊಟ್ಟ ದೂರಿನ ಮೇರೆಗೆ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.ಹಲವು ವರ್ಷಗಳಿಂದ ಯೋಗ ಶಿಕ್ಷಕಿಯಾಗಿರುವ ನಗರದ ಮಹಿಳೆಯೊಬ್ಬಳ ಮೊಬೈಲ್‌ಗೆ ಜೂನ್ 25ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ಅಶೋಕನಗರದಲ್ಲಿ ಇರುವ ಬಿಎಸ್‌ಎಫ್​​ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಅಧಿಕಾರಿಗಳಿಗೆ ಎರಡು ತಿಂಗಳ ಕಾಲ ಯೋಗ ತರಗತಿ ನಡೆಸಬೇಕು. ನೀವು ಒಪ್ಪಿಕೊಂಡರೇ ಮೇಲಧಿಕಾರಿಗಳ ಗಮನಕ್ಕೆ ತಂದು ಖಚಿತ ಪಡಿಸಿವುದಾಗಿ ನಂಬಿಸಿದ್ದ.ಇದನ್ನೂ ಓದಿ:VIDEO| ರೈಲಿನ ಹಳಿ ಕೆಳಗೆ ಮಲಗಿ ಹುಚ್ಚಾಟವಾಡಿದ ಯುವಕ; ಕಠಿಣ ಕ್ರಮಕ್ಕೆ ಆಗ್ರಹ..ಅದಕ್ಕೆ ಯೋಗ ಶಿಕ್ಷಕಿಯೂ ತರಗತಿ ಮಾಡಲು ಒಪ್ಪಿಕೊಂಡಿದ್ದರು. ಕೆಲ ತಾಸುಗಳು ಬಿಟ್ಟು ಮತ್ತೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಸೆಕ್ಯೂರಿಟಿ ಉದ್ದೇಶದ ಹಿನ್ನೆಲೆ ಸ್ವಲ್ಪ ಶುಲ್ಕ ಪಾವತಿ ಮಾಡಬೇಕಾಗಿದೆ. ಆ ಹಣ ತರಗತಿ ಮುಗಿದ ಮೇಲೆ ವಾಪಸ್ ಬರಲಿದೆ ಎಂದು ಹೇಳಿದ್ದ. ಆಗ ಯೋಗ ಶಿಕ್ಷಕಿಯು 30 ಸಾವಿರ ರೂ. ಅಪರಿಚಿತ ವ್ಯಕ್ತಿಯ ಫೋನ್​ಗೆ ವರ್ಗಾವಣೆ ಮಾಡಿದ್ದರು. ಆದರೆ ಅಪರಿಚಿತ ವ್ಯಕ್ತಿ ತನಗೆ ಹಣ ಬಂದಿಲ್ಲವೆಂದು ಸುಳ್ಳು ಹೇಳಿ ಮತ್ತೆ ಯೋಗ ಶಿಕ್ಷಕಿಯಿಂದ 35 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡಿದ್ದ. ಆದರೆ ಆತನಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ನೊಂದ ಮಹಿಳಾ ಶಿಕ್ಷಕಿ, ಆತನ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್​​ ಆಗಿತ್ತು. ಕೊನೆಗೆ ಶಿಕ್ಷಕಿಯು ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − fifteen =
Remember me
