ಬೆಂಗಳೂರು:ನಕಲಿ ಶಾಪಿಂಗ್ ವೆಬ್ ಸೈಟ್ ನಲ್ಲಿ ವಂಚನೆಗೆ ಒಳಗಾದವರು ದೂರು ನೀಡಲು ಸೈಬರಾಬಾದ್ ಪೊಲೀಸರು ಮನವಿ ಮಾಡಿದ್ದಾರೆ. ಹೆಚ್ಚಾಗಿ ಕನ್ನಡಿಗರು ವಂಚನೆಗೆ ಒಳಗಾಗಿರುವ ಮಾಹಿತಿ ಮೇರೆಗೆ ಸೈಬರಾಬಾದ್ ಪೊಲೀಸರು ಕನ್ನಡದಲ್ಲಿ ಟ್ವಿಟ್ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ.
ನಕಲಿ ವೆಬ್ ಸೈಟ್http://www.modwayfurniture.inಮತ್ತುhttp://www.zopnow.inನಿಂದ ಸಾವಿರಾರು ಮಂದಿಗೆ ಉತ್ತರ ಪ್ರದೇಶ ಮೂಲದ ಬನಶಂಕರಿ ನಿವಾಸಿ ರಿಷಭ್ ಉಪಾಧ್ಯಾಯ ಅಲಿಯಾಸ್ ಚಂದನ್ ವಂಚನೆ ಮಾಡಿದ್ದ. ಸಾಫ್ಟ್‌ವೇರ್ ಇಂಜಿನಿಯರ್ ಈ ಕುರಿತು ಆರೋಪಿಯ ವಿರುದ್ಧ ದೂರು ನೀಡಿದ್ದರು. ತನಿಖೆ ಕೈಗೊಂಡ ತೆಲಂಗಾಣದ ಸೈಬರಾಬಾದ್ ಪೊಲೀಸರು ಇತ್ತೀಚೆಗೆ ಬೆಂಗಳೂರಿನಲ್ಲಿ ಬಂಧಿಸಿದ್ದರು.
ಈ ವೇಳೆ ಆರೋಪಿ ಬ್ಯಾಂಕ್ ಖಾತೆಯಲ್ಲಿ 40 ಲಕ್ಷ ಜಪ್ತಿ ಮಾಡಿದ್ದರು. ಆದರೆ, ಸೈಬರಾಬಾದ್ ನಲ್ಲಿ ಕೇವಲ 9 ಪ್ರಕರಣ ದಾಖಲಾಗಿದ್ದವು. ವಂಚನೆ ಮೊತ್ತವು ಕಡಿಮೆ. ಅದಕ್ಕಾಗಿ ಈ ನಕಲಿ ವೆಬ್ ಸೈಟ್ ನಲ್ಲಿ ಶಾಪಿಂಗ್ ಮಾಡಲು ಹೋಗಿ ವಂಚನೆಗೆ ಒಳಗಾಗಿದ್ದರೇ ಅಂತವರು ದೂರು ನೀಡಿದರೆ ಮೋಸವಾಗಿರುವ ಹಣವನ್ನು ಕಾನೂನು ಬದ್ಧವಾಗಿ ವಾಪಸ್ ಕೊಡುವುದಾಗಿ ಸೈಬರಾಬಾದ್ ಪೊಲೀಸರು ಭರವಸೆ ನೀಡಿದ್ದಾರೆ.
ಈ ಮೇಲ್ಕಂಡ ನಕಲಿ ಶಾಪಿಂಗ್ ವೆಬ್ ಸೈಟುಗಳಲ್ಲಿ ಶಾಪಿಂಗ್ ಮಾಡಿ ದುಡ್ಡು ಕಳೆದುಕೊಂಡಿರುವ ಜನರು ನಮ್ಮನ್ನು ಪೂರ್ತಿ ವಿವರಗಳೊಂದಿಗೆ ಸಂಪರ್ಕಿಸಬೇಕಾಗಿ ಮನವಿ.pic.twitter.com/hY069IONgM
— Cyber Crimes Wing Cyberabad (@CyberCrimePSCyb)July 28, 2021

ಮಂಡ್ಯದಲ್ಲಿ ನಿಖಿಲ್​ -ಅಭಿ ನಡುವೆ ಜಿದ್ದಾಜಿದ್ದಿ? ಸ್ಫೋಟಕ ಸುಳಿವು ಕೊಟ್ರು ಜೂ.ರೆಬೆಲ್ ಸ್ಟಾರ್

ಹಿರಿಯ ಅಧಿಕಾರಿಗಳು ಎಷ್ಟೇ ಎಚ್ಚರಿಕೆ ನೀಡಿದ್ರೂ ನಿಲ್ಲದ ಲಂಚದ ವ್ಯಾಮೋಹ: ಮತ್ತೆ ಸಿಕ್ಕಿಬಿದ್ದ ಮಹಿಳಾ ಇನ್ಸ್​ಪೆಕ್ಟರ್​!

ಸಚಿವ ಸಂಪುಟ ವಿಳಂಬ: ದೆಹಲಿ ತಲುಪದ ಪ್ರಾಶಸ್ತ್ಯ ಪಟ್ಟಿ; ಆ ಬಳಿಕವಷ್ಟೇ ಸ್ಥಾನ ಗಟ್ಟಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 5 =
Remember me
