ಬೆಂಗಳೂರು:ಪ್ರೇಯಸಿ ಮೇಲಿನ ದ್ವೇಷಕ್ಕೆ ಸಾಫ್ಟ್ ವೇರ್ ಇಂಜಿನಿಯರ್​ವೊಬ್ಬ ತಾನು ಓದಿದ್ದ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ಹಳೇ ವಿದ್ಯಾರ್ಥಿಗಳ ಫೋಟೋವನ್ನು ​ಅಶ್ಲೀಲ ವೆಬ್​ಸೈಟ್​ಗೆ ಅಪ್ಲೋಡ್​ ಮಾಡಿ ಸಿಕ್ಕಿಬಿದ್ದಿದ್ದಾನೆ.
ಅಶ್ಲೀಲ ವೆಬ್​ಸೈಟ್​ಗೆ ಫೋಟೋ ಅಪ್ಲೋಡ್​ ಮಾಡಿದ ಆರೋಪದ ಮೇರೆಗೆ ಸಿ.ವಿ.ರಾಮನ್​ನಗರದ ಅಜಯ್​ ತನಿಕಾಚಲಂ(37) ಮತ್ತು ರಾಜಾಜಿನಗರದ ವಿಶ್ವಕ್​ ಸೇನ್​(27) ಎಂಬುವವರನ್ನು ಸೈಬರ್​ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿರಿಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!
ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಅಜಯ್​ ತನಿಕಾಚಲಂ, ಪ್ರಸ್ತುತ ಸಾಫ್ಟ್ವೇರ್ ​ ಇಂಜಿನಿಯರ್. ವ್ಯಾಸಂಗದ ವೇಳೆ ಸಹಪಾಠಿ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಆಕೆ ಈತನನ್ನು ನಿರಾಕರಿಸಿದ್ದಳು. ಕುಪಿತಗೊಂಡಿದ್ದ ಆರೋಪಿ, ಸೇಡು ತೀರಿಸಿಕೊಳ್ಳುವ ಸಲುವಾಗಿ ಅದೇ ಕಾಲೇಜಿನ ವಿದ್ಯಾರ್ಥಿ ವಿಶ್ವಕ್​ನನ್ನು ಪರಿಚಯ ಮಾಡಿಕೊಂಡಿದ್ದ. ಆತನ ಮೂಲಕ ಕಾಲೇಜಿನ ಪ್ರಾಂಶುಪಾಲರ, ಪ್ರಾಧ್ಯಾಪಕರ, ಪ್ರೇಯಸಿ ಸೇರಿದಂತೆ ಹಳೆಯ 30 ವಿದ್ಯಾರ್ಥಿಗಳ ಫೇಸ್​ಬುಕ್​, ಇನ್​ಸ್ಟಾಗ್ರಾಂ​, ಟ್ವಿಟರ್​ ಖಾತೆಗಳಲ್ಲಿ ಫೋಟೋಗಳನ್ನು ಕಳವು ಮಾಡಿಸಿದ್ದ.
ಇದೇ ಪೋಟೋಗಳನ್ನು ಎಡಿಟ್​ ಮಾಡಿ ಅಶ್ಲೀಲ ವೆಬ್​ಸೈಟ್​ಗೆ ಅಪ್ಲೋಡ್​ ಮಾಡಿ ವೈರಲ್​ ಮಾಡಿದ್ದ. ಇದನ್ನು ಗಮನಿಸಿದ ಹಳೇ ವಿದ್ಯಾರ್ಥಿಗಳು ಪ್ರಾಧ್ಯಾಪಕರಿಗೆ ವಿಷಯ ಮುಟ್ಟಿಸಿದ್ದರು. ಪ್ರಾಂಶುಪಾಲರು, ಪ್ರಾಧ್ಯಾಪಕರ ಮತ್ತು ಹಳೇ ವಿದ್ಯಾರ್ಥಿಗಳು ಸೇರಿ 30 ಜನರ ಫೋಟೋಗಳನ್ನು ಅಶ್ಲೀಲ ವೆಬ್​ಸೈಟ್​ಗೆ ಅಪ್ಲೋಡ್​ ಮಾಡಲಾಗಿತ್ತು. ಈ ಬಗ್ಗೆ ಸಹಾಯಕ ಪ್ರಾಧ್ಯಾಪಕಿ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿರುವುದಾಗಿ ಸೈಬರ್​ ಕ್ರೈಂ ಪೊಲೀಸರು ತಿಳಿಸಿದ್ದಾರೆ.
ಗಂಡ ಸತ್ತು 2 ತಿಂಗಳಾಯ್ತು, ಕಡುಬಡತನಕ್ಕೆ ಹೆದರಿ ಹಸುಗೂಸನ್ನೇ ದತ್ತು ಕೊಡಲು ಬಯಸಿದಳು… ಕೊನೆಗೆ ಆ ದಂಧೆಗೆ ಸಿಲುಕಿದಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 17 =
Remember me
