ಬೆಂಗಳೂರು:5 ಲಕ್ಷ ರೂಪಾಯಿ ಆಸೆಗೆ ಬಿದ್ದ ಇಂಜಿನಿಯರಿಂಗ್ ‌ವಿದ್ಯಾರ್ಥಿಯೊಬ್ಬ, ಬರೋಬ್ಬರಿ 84 ಸಾವಿರ ರೂ. ಕಳೆದುಕೊಂಡ ಘಟನೆ ನಗರದಲ್ಲಿ ಸಂಭವಿಸಿದೆ.
ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾರ್ತಿಕ್​ ಮೊಬೈಲ್​ಗೆ ಜ.29ರಂದು ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದ ಲಕ್ಕಿ ಡ್ರಾ ಹೆಸರಲ್ಲಿ ಕರೆ ಬಂದಿತ್ತು. ಈ ಕರೆ ಮಾಡಿದ್ದು ಖದೀಮರು ಎಂಬುದನ್ನ ಅರಿಯದ ವಿದ್ಯಾರ್ಥಿ, 5 ಲಕ್ಷ ಹಣ ಸಿಕ್ಕೇಸಿಗಲಿದೆ ಎಂದು ನಂಬಿದ್ದ. ಅದಕ್ಕಾಗಿ ತಂದೆ ಬಳಿಯೂ ಸುಳ್ಳು ಹೇಳಿ ಹಣ ತರಿಸಿಕೊಂಡಿದ್ದ.ಇದನ್ನೂ ಓದಿರಿಮಗಳ ಮದ್ವೆ ಸ್ಪೆಷಲ್: ಕ್ಷೇತ್ರದ ಜನ್ರಿಗೆ ದುಬಾರಿ ಗಿಫ್ಟ್​ ಕೊಟ್ಟ ಡಿಕೆಶಿ! ಪ್ರತಿ ಮನೆ-ಮನೆಗೂ ತಲುಪಿಸಿದ್ರು
ಅಂದು ಕಾರ್ತಿಕ್​ ಮೊಬೈಲ್​ಗೆ ಕರೆ ಮಾಡಿದ ಸೈಬರ್ ಕಳ್ಳರು, ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಿಂದ ಮಾತನಾಡುತ್ತಿದ್ದೇವೆ. ನೀವು ಲಕ್ಕಿ ಡ್ರಾದಲ್ಲಿ 25 ಲಕ್ಷ ರೂಪಾಯಿ ವಿಜೇತರಾಗಿದ್ದೀರಿ. ಹಣ ಕ್ಲೇಮ್ ಮಾಡಿಕೊಳ್ಳಲು ಜಿಎಸ್​ಟಿ ಕ್ಲಿಯರನ್ಸ್​ ಮಾಡಬೇಕು ಎಂದು ನಂಬಿಸಿದ್ದಾರೆ‌. ಇದನ್ನು ನಂಬಿದ ಎಂಜಿನಿಯರಿಂಗ್ ವಿದ್ಯಾರ್ಥಿ ತಂದೆ-ತಾಯಿ ಬಳಿ ಪ್ರಾಜೆಕ್ಟ್ ವರ್ಕ್​ ಎಂದು ಹೇಳಿ 80 ಸಾವಿರ ಪಡೆದಿದ್ದ.
ತಂದೆಯಿಂದ ಹಣ ಪಡೆದು, ನಂತರ ಸೈಬರ್ ಕಳ್ಳರು ಸೂಚಿಸಿದ ಅಕೌಂಟ್​ಗೆ ಕಾರ್ತಿಕ್​ 84.100 ರೂಪಾಯಿ ವರ್ಗಾವಣೆ ಮಾಡಿದ್ದ. ಬಳಿಕ ಮತ್ತೆ ವರಸೆ ಶುರು ಮಾಡಿದ ಖದೀಮರು, ಲಕ್ಕಿ ಡ್ರಾ ಹಣವನ್ನು ಪಾವತಿಸದೆ ಇನ್ನಷ್ಟು ಹಣಕ್ಕಾಗಿ ಪೀಡಿಸಿದ್ದಾರೆ. ಅನುಮಾನಗೊಂಡು ಪ್ರಶ್ನಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ‌‌. ವಿದ್ಯಾರ್ಥಿಯು ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಮುಂದುವರಿದಿದೆ.
ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು

PHOTOS| ಡಿಕೆಶಿ ಪುತ್ರಿ ಐಶ್ವರ್ಯಾ ಅದ್ಧೂರಿ ವಿವಾಹದ ಎಕ್ಸ್​ಕ್ಲೂಸಿವ್​ ಫೋಟೋಗಳು..!

ಮಗಳ ಮದ್ವೆ ಸ್ಪೆಷಲ್: ಕ್ಷೇತ್ರದ ಜನ್ರಿಗೆ ದುಬಾರಿ ಗಿಫ್ಟ್​ ಕೊಟ್ಟ ಡಿಕೆಶಿ! ಪ್ರತಿ ಮನೆ-ಮನೆಗೂ ತಲುಪಿಸಿದ್ರು

ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 7 =
Remember me
