ಧಾರವಾಡ:ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಯುವ ಉದ್ಯಮಿ ಅನಿಲಕುಮಾರ ಕೋತಂಬ್ರಿ ಅವರು ಆರಂಭಿಸಿರುವ ‘ಓಲ್ಡ್ ಸ್ಕೂಲ್ ಚಾಪರ್’ ಕಂಪನಿಯ ವಿನೂತನ ಮಾದರಿಯ ಬೈಸಿಕಲ್​ಗಳನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರು ಭಾನುವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ನಗರದ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸೈಕಲ್​ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಸೈಕಲ್ ಬಳಕೆಯಿಂದ ಆತ್ಮಸಂತೋಷ ಹಾಗೂ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಹೀಗಾಗಿ ವಿದೇಶಗಳಲ್ಲಿ, ವಿಶೇಷವಾಗಿ ಐರೋಪ್ಯ ರಾಷ್ಟ್ರಗಳಲ್ಲಿ ಇಂದಿಗೂ ಸೈಕಲ್​ಗಳ ಬಳಕೆ ಹೆಚ್ಚಾಗಿದೆ. ಕಾರ್​ಗಳಿದ್ದರೂ ಅಲ್ಲಿನ ಶ್ರೀಮಂತರು ಸೈಕಲ್ ಬಳಸುತ್ತಾರೆ. ಭಾರತದಲ್ಲಿ ಸೈಕಲ್ ಬಳಕೆ ಸಂಪ್ರದಾಯ ಕಡಿಮೆಯಾಗುತ್ತಿರುವುದು ದುರ್ದೈವದ ಸಂಗತಿ. ಸದ್ಯದ ಪರಿಸ್ಥಿತಿಯಲ್ಲಿ ಸೈಕಲ್​ಗಳ ಬಳಕೆಗೆ ಬೇಡಿಕೆ ಬಂದಿದ್ದು, ವಿವಿಧ ಕಂಪನಿಗಳ ಪೈಪೋಟಿಯನ್ನು ಕಾಣಬಹುದು’ ಎಂದರು.
ಪ್ರಾಮಾಣಿಕರಾಗಿದ್ದರೆ ಬ್ಯಾಂಕ್​ಗಳಿಂದ ಸಾಲಸೌಲಭ್ಯ ಸುಲಭವಾಗಿ ಸಿಗುತ್ತದೆ. ಉತ್ತರ ಕರ್ನಾಟಕದಲ್ಲಿ ನವೋದ್ಯಮಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ. ಜತೆಗೆ ಕಾಲೆಳೆಯುವವರೂ ಹೆಚ್ಚಾಗಿದ್ದಾರೆ. ಯುವ ಉದ್ಯಮಿ ಅನಿಲಕುಮಾರ ಕೋತಂಬ್ರಿ ಸವಾಲಾಗಿ ಸ್ವೀಕರಿಸಿ ಆರಂಭಿಸಿರುವ ಸೈಕಲ್ ಉದ್ಯಮ ಯಶ ಕಾಣಲಿ. ಆರಂಭದಲ್ಲಿ ಕಡಿಮೆ ಮಾದರಿಗಳೊಂದಿಗೆ ಹೆಚ್ಚು ಉತ್ಪಾದನೆಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಉದ್ಯಮಗಳಲ್ಲಿ ಯಶಸ್ಸು ಸಾಧಿಸಬೇಕಾದರೆ ವರ್ಷದ 365 ದಿನವೂ ದುಡಿಯಬೇಕು. ಸವಾಲುಗಳನ್ನು ಮೆಟ್ಟಿ ನಿಂತಾಗ ಸಣ್ಣ ಉದ್ಯಮವು ಜಾಗತಿಕ ಮಟ್ಟದಲ್ಲೂ ಪೈಪೋಟಿ ನೀಡಬಲ್ಲದು ಎಂಬುದಕ್ಕೆ ವಿಆರ್​ಎಲ್ ಸಂಸ್ಥೆ ನಿದರ್ಶನ. ಕನಸು ನನಸಾಗಿಸಿಕೊಳ್ಳಲು ಶ್ರದ್ಧೆಯನ್ನು ಅಳವಡಿಸಿಕೊಳ್ಳಬೇಕು ಎಂದು ಡಾ.ವಿಜಯ ಸಂಕೇಶ್ವರ ಹೇಳಿದರು.
ಅನಿಲಕುಮಾರ ಕೋತಂಬ್ರಿ ಮಾತನಾಡಿ, ಅಮೆರಿಕ, ಯುರೋಪ್​ನಲ್ಲಿ ಹೆಚ್ಚು ಜನಪ್ರಿಯವಾಗಿರುವ ಸೈಕಲ್​ಗಳನ್ನು ಪರಿಚಯಿಸುವ ಗುರಿ ಇತ್ತು. ವಿಭಿನ್ನ ಮಾದರಿಯ ಸೈಕಲ್​ಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ತರುವ 3 ವರ್ಷಗಳ ಕನಸು ಇಂದು ನನಸಾಗಿದೆ. 60-70 ಮಾದರಿಗಳಿದ್ದು, ಸದ್ಯ ಮಕ್ಕಳು, ವಯಸ್ಕರಿಗಾಗಿ 10-15 ಮಾದರಿಗಳನ್ನು ಪರಿಚಯಿಸಲಾಗಿದೆ ಎಂದರು.
ಕರ್ಣಾಟಕ ಬ್ಯಾಂಕ್ ಮ್ಯಾನೇಜರ್ ರಂಗನಗೌಡ ಪಾಟೀಲ ಅತಿಥಿಯಾಗಿ ಪಾಲ್ಗೊಂಡಿದ್ದರು. ದೀಪಾ ಅನಿಲಕುಮಾರ, ಕಿರಣ ದಿವಟೆ, ಶಕುಂತಲಾ ಹಾಗೂ ವಿವಿಧ ಜಿಲ್ಲೆಗಳ ಸೈಕಲ್ ಡೀಲರ್​ಗಳು ಉಪಸ್ಥಿತರಿದ್ದರು.
ಪಾಂಡವರ ಕಾಲದ ದೇವಸ್ಥಾನದ ಬಸವನ ತಲೆ ಉರುಳಿಸಿದ ದುಷ್ಕರ್ಮಿಗಳು; ಪ್ರವಾಸಿಗರಿಗೆ ನಿರ್ಬಂಧ ವಿಧಿಸಲು ಆಗ್ರಹ

ಇಷ್ಟ ಇದ್ರೆ ಬನ್ನಿ.. ಬರೋವಾಗ ತಿಂಡಿ-ಕುಡಿಯೋ ನೀರು ನೀವೇ ತನ್ನಿ; ಸೋಮವಾರ ಶಾಲೆ ಶುರು, ವಿದ್ಯಾರ್ಥಿಗಳಿಗೆ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 8 =
Remember me
