ಚೆನ್ನೈ:ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮಾಂಡೌಸ್​ ಚಂಡಮಾರುತವು ಶುಕ್ರವಾರ ತಡರಾತ್ರಿ ತಮಿಳುನಾಡು ಕರಾವಳಿಗೆ ಅಪ್ಪಳಿಸಿದ್ದು, ಭಾರಿ ಮಳೆಯಾಗುತ್ತಿದೆ. ಮಾಮಲಪುರಂನಲ್ಲಿ ಭೂ ಕುಸಿತ ಉಂಟಾಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನೂರಾರು ಮರಗಳು ಧರೆಗುರುಳಿವೆ.
ಚೈನ್ನೈನಲ್ಲಿ ಬೃಹತ್​ ಮರಗಳೂ ಧರೆಗುರುಳಿದ್ದು, ಪಾಲಿಕೆ ವತಿಯಿಂದ ತೆರವು ಕಾರ್ಯಾಚರಣೆ ಮುಂದುವರಿದಿದೆ. ಮುಂದಿನ ಸೂಚನೆವರೆಗೆ ಎಲ್ಲ ಪಾರ್ಕ್​ ಮತ್ತು ಆಟದ ಮೈದಾನಗಳನ್ನು ಮುಚ್ಚಲು ಚೆನ್ನೈ ಮಹಾನಗರಪಾಲಿಕೆ ಆದೇಶಿಸಿದೆ. ಬೀಚ್​ಗೆ ತೆರಳದಂತೆ ಹಾಗೂ ಮರಗಳ ಕೆಳಗೆ ನಿಲ್ಲದಂತೆ, ವಾಹನಗಳನ್ನು ಮರದ ಕೆಳಗೆ ನಿಲ್ಲಿಸದಂತೆ ಸೂಚಿಸಿದೆ.
Greater Chennai Corporation (GCC) requests all to avoid going out until cyclonic storm 'Mandous' weakens. Almost 65 trees have fallen down in 3 hrs & GCC is taking measures to remove them. Motor pumps are being used to remove water stagnation in low lying saucer shaped areas: GCCpic.twitter.com/va9udmqVDK
— ANI (@ANI)December 9, 2022

ಗುರುವಾರದಿಂದಲೇ ಸಾಧಾರಣ ಮಳೆಯಾಗುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ಚೆನ್ನೈ ತಿರುವಲ್ಲೂರ್​, ಚೆಂಗಲ್ಪಟ್ಟು, ವೆಲ್ಲೂರು, ರಾಣಿಪೇಟೆ ಮತ್ತು ಕಾಂಚಿಪುರಂ ಸಹಿತ 12 ಜಿಲ್ಲೆಗಳಲ್ಲಿ ಶುಕ್ರವಾರವೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಮಿಳುನಾಡಿನಾದ್ಯಂತ 5,093 ಪರಿಹಾರ ಕೇಂದ್ರಗಳು ಮತ್ತು 121 ಆಶ್ರಯ ತಾಣಗಳನ್ನು ತೆರೆಯಲಾಗಿದೆ. ಈ ಪೈಕಿ ಕೇಂದ್ರಾಡಳಿತ ಪ್ರದೇಶದಲ್ಲಿ 238 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. 10 ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ ಕಾರ್ಯನಿರ್ವಹಿಸುತ್ತಿದೆ.
ಕನಸುಗಳ ಬೆನ್ನತ್ತಿದ ಛಲಗಾರನ ಸಾಹಸಗಾಥೆ ‘ವಿಜಯಾನಂದ’

ಬ್ಯಾನ್ ಮಾಡಿದ್ದು ತಪ್ಪು, ಒಬ್ಬ ಕಲಾವಿದನ ಬದುಕು ಕಿತ್ತುಕೊಳ್ಳೋ ಹಕ್ಕು ಯಾರಿಗೂ ಇಲ್ಲ… ಅನಿರುದ್ಧ್​ ಪರ ಫಿಲ್ಮ್​ ಚೇಂಬರ್​ ಬ್ಯಾಟಿಂಗ್​

ಒಂದೇ ರಾತ್ರಿ 2 ಬಾರಿ ಸಂಭೋಗಿಸಲು ನಿರಾಕರಿಸಿದ ಪತ್ನಿಯನ್ನೇ ಕೊಂದು ಹೈಡ್ರಾಮ! ಈತ ಕಟ್ಟಿದ ಕಥೆ ಅಷ್ಟಿಷ್ಟಲ್ಲ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × five =
Remember me
