ಮಂಡ್ಯ:ಜೆಡಿಎಸ್ ಸೇರಿದ ಗ್ರಾಮ ಪಂಚಾಯಿತಿ ಸದಸ್ಯರಿಂದ ಮಾಜಿ ಸಚಿವ ಹಾಗೂ ಮದ್ದೂರು ಕ್ಷೇತ್ರದ ಹಾಲಿ ಶಾಸಕ ಡಿ.ಸಿ. ತಮ್ಮಣ್ಣ ಅವರು ಖಾಲಿ ಚೆಕ್ ಪಡೆದರಾ? ಎಂಬ ಅನುಮಾನ ಮೂಡತೊಡಗಿದೆ.

ಗ್ರಾ.ಪಂ ಅಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್​ ಬೆಂಬಲಿಸಿದ ಸದಸ್ಯರು ಖಾಲಿ ಚೆಕ್​ಗೆ ಸಹಿ ಹಾಕುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಸಕರು ಖಾಲಿ ಚೆಕ್‌ಗೆ ಸಹಿ ಪಡೆದು ಪಕ್ಷಕ್ಕೆ ಸೇರಿಸಿಕೊಂಡರಾ ಎಂಬ ಸಂಶಯ ಮೂಡಿದೆ.
ಇದನ್ನೂ ಓದಿರಿ:ರಾಮಮಂದಿರ ನಿರ್ಮಾಣಕ್ಕೆ 51 ಲಕ್ಷ ರೂ. ದೇಣಿಗೆ ನೀಡಿ ಕಾಂಗ್ರೆಸ್​ ಶಾಸಕಿ ಕೊಟ್ಟ ಕರೆ ಹೀಗಿದೆ…

ಡಿ.ಸಿ.ತಮ್ಮಣ್ಣ ಅವರು ಸದಸ್ಯರಿಂದ ಚೆಕ್, ಪ್ರನೋಟ್‌ಗೆ ಸಹಿ ಪಡೆಯುತ್ತಿರುವ ಫೋಟೋ ಮತ್ತು ಖಾಲಿ ಚೆಕ್‌ಗೆ ಸಹಿ ಪಡೆದ ಬಳಿಕ ಸದಸ್ಯರಿಗೆ ಜೆಡಿಎಸ್​ ಶಾಲು ಹಾಕಿರುವ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಜೆಡಿಎಸ್​ ಪ್ರಾಬಲ್ಯವಿರದ ಗ್ರಾ.ಪಂಗಳಲ್ಲಿ ಸದಸ್ಯರಿಗೆ ಹಣ ಕೊಟ್ಟು ಅಧಿಕಾರ ಹಿಡಿದರಾ ಶಾಸಕರು? ಎಂಬ ಪ್ರಶ್ನೆಗಳು ಕೇಳಿಬಂದಿವೆ. ಅಲ್ಲದೆ, ಹಣ ಪಡೆದ ಸದಸ್ಯರು ಬೇರೆ ಪಕ್ಷ ಬೆಂಬಲಿಸದಂತೆ ಮಾಡಲು ಶಾಸಕರು ಖಾಲಿ ಚೆಕ್ ಪಡೆದಿದ್ದಾರೆಂದು ಹೇಳಲಾಗಿದೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿರಿ:ತುಂಬಿದ ಶಾಲೆಯಲ್ಲಿ ಮಕ್ಕಳ ಮುಂದೆ ಹಸ್ತಮೈಥುನ ಮಾಡಿ, ವಿಡಿಯೋ ಹರಿಬಿಟ್ಟ ಶಿಕ್ಷಕಿ..!
ದೆಹಲಿಯಿಂದ ಆಸ್ಟ್ರೇಲಿಯಾಕ್ಕೆ ಹೊರಟಿದ್ದ ಬಣ್ಣಬಣ್ಣದ ಲೆಹೆಂಗಾಗಳಲ್ಲಿ ಏನು ಅಡಗಿತ್ತು ಗೊತ್ತಾ ?!

VIDEO: ಹಿಮ ಸ್ಫೋಟ- 32 ಮೃತದೇಹ ಪತ್ತೆ; 200ಕ್ಕೂ ಅಧಿಕ ಮಂದಿ ನಾಪತ್ತೆ; ಹಗಲಿರುಳು ರಕ್ಷಣಾ ಕಾರ್ಯ

ಲಿಕ್ಕರ್​ ಮಾಫಿಯಾ ಮಟ್ಟಹಾಕಲು ಹೋದ ಪೇದೆ​ಯ ಹತ್ಯೆ, ಎಸ್​ಐ ಸ್ಥಿತಿ ಗಂಭೀರ: ಸಿಎಂ ಯೋಗಿ ಖಡಕ್​ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
