ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆಯಲ್ಲಿ ಇದುವರೆಗೆ 300ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನು ಖಂಡಿಸಿ ಅವರ ಪಾಲಕರು ಪೊಲೀಸ್ ಠಾಣೆ ಎದುರು ಹೈಡ್ರಾಮಾ ನಡೆಸಿದ ಘಟನೆ ಭಾನುವಾರ ನಡೆದಿತ್ತು.
ಗಲಭೆ ನಡೆದ ರಾತ್ರಿ ಆರೋಪಿಗಳು ಅಡುಗೆ ಸಾಮಾನು ತರೋದಕ್ಕೆ ಹೋಗಿದ್ರು, ಕೊತ್ತಂಬರಿ ಸೊಪ್ಪು ತರೋದಕ್ಕೆ ಹೋಗಿದ್ರು ಎಂದೆಲ್ಲ ಹೇಳಿ ಹೈಡ್ರಾಮಾ ನಡೆಸಿದ ಘಟನೆಯ ವಿಡಿಯೋ ವೈರಲ್ ಆಗಿತ್ತು. ಬಂಧಿತ ಆರೋಪಿಗಳನ್ನು ಬಿಡುವಂತೆ ಆಗ್ರಹಿಸಿ ಅವರ ಪಾಲಕರು ಭಾನುವಾರ ಬೆಳಗ್ಗೆ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ ನಡೆಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಮಹಿಳಾ ಪೊಲೀಸ್ ಸಿಬ್ಬಂದಿ, ನಿಷೇಧಾಜ್ಞೆ ಜಾರಿಯಲ್ಲಿದೆ.
ಇದನ್ನೂ ಓದಿ:ಡಿಜೆ ಹಳ್ಳಿ ಗಲಭೆಗೆ ಆರೋಪಿಗಳು ಏನೇನು ಬಳಸಿದ್ರು?
ರಸ್ತೆಯಲ್ಲಿ ಗುಂಪಾಗಿ ನಿಲ್ಲುವಂತಿಲ್ಲ. ನಿಮ್ಮ ಮಕ್ಕಳು, ಸಂಬಂಧಿಕರು ತಪ್ಪು ಮಾಡಿರುವುದರಿಂದ ಬಂಧಿಸಿ, ಕರೆ ತರಲಾಗಿದೆ ಎಂದು ತಿಳಿ ಹೇಳಿದರು. ಇದಕ್ಕೆ ಒಪ್ಪದ ಕೆಲವರು, ನಮ್ಮವರು ಬೆಂಕಿ ಇಟ್ಟಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಏನಿದೆ ಎಂದು ಹೇಳಿದಾಗ ಪೊಲೀಸರು ಎಚ್ಚರಿಕೆ ನೀಡಿ ಸ್ಥಳದಿಂದ ಕಳುಹಿಸಿದ ಘಟನೆ ನಡೆದಿದೆ.
ಡಿಜೆಹಳ್ಳಿ ಗಲಭೆಯಲ್ಲಿ ಉಗ್ರರ ಕೈವಾಡ?

Sign in to your account
Please enter an answer in digits:2 + eight =
Remember me
