ಬೆಂಗಳೂರು: ಡಿಜೆಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ. ನಿನ್ನೆ ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಗಲಭೆಯ ಮತ್ತೋರ್ವ ಪ್ರಮುಖ ಆರೋಪಿ ಜೆಡಿಎಸ್​ ನಾಯಕನೊಬ್ಬನನ್ನೂ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಎಸ್​ಡಿಪಿಐ, ಕಾಂಗ್ರೆಸ್​, ಜೆಡಿಎಸ್​ ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಗಲಭೆಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಂತಾಗಿದೆ.
ಗಲಭೆ ದಿನದ ವಿಡಿಯೋ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದು, ನಿನ್ನೆ ರಾತ್ರಿ 10ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ. ಡಿಜೆ ಹಳ್ಳಿ ಠಾಣಾ ಇನ್​ಸ್ಪೆಕ್ಟರ್​ ಕೇಶವಮೂರ್ತಿ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೆ 350 ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ವಿಶ್ವಗುರು: ಡಿಜೆ ಹಳ್ಳಿ ಗಲಭೆ, ಅನೇಕ ಪ್ರಶ್ನೆಗಳು!
ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ 10ಕ್ಕೂ ಹೆಚ್ಚು ಆರೋಪಿಗಳ ಪೈಕಿ ಒಬ್ಬಾತ ಜೆಡಿಎಸ್ ನಾಯಕ. ವಿಧಾನಸಭಾ ಕ್ಷೇತ್ರದ ಅಧ್ಯಕ್ಷನಾಗಿರುವ ಅಬ್ದುಲ್ ವಾಜೀದ್ ಪಾಷಾ ಕೆ.ಎಂ. ಬಂಧಿತ ಜೆಡಿಎಸ್ ನಾಯಕ. ಈತ ಎಸ್​ಡಿಪಿಐ ಜತೆಗೆ ನೇರ ಸಂಪರ್ಕ ಹೊಂದಿದ್ದು, ಕರ್ನಾಟಕ ಟಿಪ್ಪು ಟೈಗರ್​ ವೆಲ್​ಫೇರ್ ಟ್ರಸ್ಟ್​ನ ಅಧ್ಯಕ್ಷನೂ ಹೌದು. ಗಲಭೆಗೆ ಜನ ಸೇರಿಸುವ ಹೊಣೆಯನ್ನು ಈತ ಮತ್ತು ಈತನ ಸಂಘಟನೆ ಹೊತ್ತುಕೊಂಡಿತ್ತು. ಗಲಭೆ ನಂತರದಲ್ಲಿ ಈತ ತಲೆಮರೆಸಿಕೊಂಡಿದ್ದ. ನಿನ್ನೆ ರಾತ್ರಿ ಪೊಲೀಸ್ ಕಾರ್ಯಾಚರಣೆ ವೇಳೆ ಬಲೆಗೆ ಬಿದ್ದಿದ್ದ. ಈತನ ವಿರುದ್ಧವೂ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.
ದೇವರಜೀವನಹಳ್ಳಿ ಗಲಭೆಗೂ ಕಾಂಗ್ರೆಸ್​ಗೂ ಸಂಬಂಧ ಇಲ್ವಂತೆ…

Sign in to your account
Please enter an answer in digits:five + 11 =
Remember me
