ಬೆಂಗಳೂರು:ಬಿಡದಿಯನ್ನು ಗ್ರೇಟರ್ ಬೆಂಗಳೂರಿಗೆ ಸೇರಿಸುತ್ತಿದ್ದೇವೆ. ಬಿಡದಿಗೆ ಮೆಟ್ರೋ ಬಂದೇ ಬರುತ್ತೆ. ಇದಕ್ಕೆ ಡಿಪಿಆರ್ ರೆಡಿ ಮಾಡ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ:ಮದ್ಯದ ನಶೆ ಏರಿದ್ಮೇಲೆ ಹಳೆ ಬಟ್ಟೆ ಹಾಕಿಕೊಂಡು ಭಿಕ್ಷುಕನಾಗ್ತಿದ್ದ! ಗಣ್ಯರಿಗೆ ಸನ್ಮಾನ ಮಾಡ್ತಿದ್ದ ಈ ರಾಜ!
ಸಾರಿಗೆ ಇಲಾಖೆಯಿಂದ ರಾಮನಗರ ಜಿಲ್ಲೆಗೆ ನೀಡಲಾದ ಕೆಎಸ್‌ಆರ್‌ಟಿಸಿಯ ನೂತನ ವಿನ್ಯಾಸದ 25 ಅಶ್ವಮೇಧ ಕ್ಲಾಸಿಕ್ ಬಸ್‌ಗಳಿಗೆ ಚಾಲನೆ ನೀಡಿ ಮಾತನಾಡಿ, ಲೋಕಸಭೆ ಚುನಾವಣೆ ನಂತರ ಇನ್ನಷ್ಟು ಮಾಹಿತಿ ತಿಳಿಸುತ್ತೇನೆ ಎಂದು ತಿಳಿಸಿದರು.

ದೇಶದಲ್ಲಿ ಯಾವ ಸರ್ಕಾರವೂ ಗ್ಯಾರಂಟಿ ಜಾರಿ ಮಾಡಿಲ್ಲ. ನಾವು ಕಷ್ಟಪಟ್ಟು ಗ್ಯಾರಂಟಿ ಜಾರಿ ಮಾಡಿದ್ದೇವೆ. ಬಿಡದಿಯನ್ನು ಗ್ರೇಟರ್ ಬೆಂಗಳೂರಿಗೆ ಸೇರಿಸ್ತಿದ್ದೇವೆ. ನಾವೆಲ್ಲ ಬೆಂಗಳೂರು ಜಿಲ್ಲೆಯವರು. ಚುನಾವಣೆ ಆದಮೇಲೆ ಈ ವಿಚಾರ ಮಾತನಾಡುತ್ತೇನೆ. ಬಿಡದಿಗೆ ಮೆಟ್ರೋ ಬಂದೇ ಬರುತ್ತದೆ. ಇದಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ರೆಡಿ ಮಾಡ್ತಿದ್ದೇವೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸುತ್ತಿದ್ದೇವೆ ಎಂದು ಡಿಸಿಎಂ ತಿಳಿಸಿದರು.
ಶಕ್ತಿ ಯೋಜನೆಯಡಿ 151 ಕೋಟಿ ಮಹಿಳೆಯರ ಸಂಚಾರ: ಸರ್ಕಾರದ ಮೊದಲ ಗ್ಯಾರಂಟಿ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಎಂಟೇ ತಿಂಗಳಿಗೆ ಶಕ್ತಿ ಯೋಜನೆಯಡಿ 151 ಕೋಟಿ ನಾರಿಯರು ಸಂಚಾರ ಮಾಡಿದ್ದಾರೆ. ಸರ್ಕಾರದ ಮೊದಲ ಗ್ಯಾರೆಂಟಿಗೆ 150 ಕೋಟಿ ಮಹಿಳೆಯರು ಬೆಂಬಲ ನೀಡಿದ್ದಾರೆ. 2023ರ ಜೂ.11 ರಿಂದ 2024ರ ಫೆ.12ವರೆಗೆ 151 ಕೋಟಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. KSRTC, BMTC ಸೇರಿ ಎಲ್ಲಾ ಸಾರಿಗೆ ನಿಗಮಗಳ ಮೂಲಕ ಮಹಿಳೆಯರ ಪ್ರಯಾಣ ಮಾಡಿದ್ದಾರೆ.

ಶಕ್ತಿ ಯೋಜನೆ ಜಾರಿಯಾಗಿ ಎಂಟು ತಿಂಗಳಿಗೆ 3,599 ಕೋಟಿ ರೂ. ವ್ಯಯ ಮಾಡಲಾಗಿದೆ. ಪ್ರತಿ‌ನಿತ್ಯ‌ ಲಕ್ಷ ಲಕ್ಷ ಮಹಿಳೆಯರು ಟ್ರಾವೆಲ್ ನಿಂದ 3,614 ಕೋಟಿ ವ್ಯಯವಾಗಿದೆ. ಕಳೆದ 244 ದಿನಗಳಲ್ಲಿ 151,35,86,738 ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. (ಇಲ್ಲಿವರೆಗೆ 151,35,86,738 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದಿಂದ 3614,52,04,190 ಕೋಟಿ ರೂ. ಸರ್ಕಾರದ ಹಣ ವೆಚ್ಚವಾಗಿದೆ ಎಂದು ತಿಳಿಸಿದರು.

ಮದ್ಯದ ನಶೆ ಏರಿದ್ಮೇಲೆ ಹಳೆ ಬಟ್ಟೆ ಹಾಕಿಕೊಂಡು ಭಿಕ್ಷುಕನಾಗ್ತಿದ್ದ! ಗಣ್ಯರಿಗೆ ಸನ್ಮಾನ ಮಾಡ್ತಿದ್ದ ಈ ರಾಜ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + twelve =
Remember me
