ಬೆಂಗಳೂರು:ಸಿಂಗಾಪೂರದಲ್ಲಿ ಕುಳಿತು ಸರ್ಕಾರ ಬೀಳಿಸಲು ರಹಸ್ಯ ಪ್ಲ್ಯಾನ್ ನಡೆದಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಹಲವಾರು ದೃಷ್ಟಿಕೋನಗಳಿವೆ. ನನ್ನನ್ನು ಸಿಎಂ ಮಾಡದಿದ್ದರೆ ಈ ಸರ್ಕಾರ ಉಳಿಸಲ್ಲವೆಂದು ಎಚ್ಚರಿಕೆ ಕೊಟ್ಟಂಗಿದೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಟಕ್ಕರ್ ಕೊಟ್ಟಿದ್ದಾರೆ.
ಡಿಕೆಶಿ ಹೇಳಿಕೆ ಕುರಿತು ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನೊಳಗೆ ಅತಂತ್ರ ಪರಿಸ್ಥಿತಿಯಿದೆ. ಆಂತರಿಕ ಸಮಸ್ಯೆಯಿಂದ ತೊಳಲಾಡುತ್ತಿದ್ದು, ಎಲ್ಲವೂ ಸರಿಯಿಲ್ಲವೆಂದು ಗೊತ್ತಾಗುತ್ತದೆ. ಬಿ.ಕೆ.ಹರಿಪ್ರಸಾದ್, ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆ ಗಮನಿಸಿದರೆ ಕಾಂಗ್ರೆಸ್ ಆಂತರಿಕ ಸಮಸ್ಯೆಯೇ ಸರ್ಕಾರಕ್ಕೆ ಕಂಟಕವಾಗುವ ಸಾಧ್ಯತೆಗಳಿವೆ ತಿವಿದರು.
ಸರ್ಕಾರ ಬೀಳಿಸುತ್ತಾರೆ, ಒಳಗೊಳಗೆ ಕುರ್ಚಿ ಅಲುಗಾಡಿಸುವ ಕೆಲಸ ನಡೆದಿದೆ ಎಂದು ಹೇಳಿದ್ದಾರೆ. ಅದು ಹೇಗೆ ? ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಬೇಕು. ಕಾಂಗ್ರೆಸ್‌ನವರ ಸಹಕಾರವಿಲ್ಲದೆ ಇದೆಲ್ಲ ನಡೆಯುವುದಿಲ್ಲ. ಬಹಳ ದೊಡ್ಡವರೇ ಇದಕ್ಕೆ ಸಹಕಾರ ಕೊಟ್ಟಿರುವಂತಿದೆ ಎಂಬ ಅನುಮಾನ ವ್ಯಕ್ತಪಡಿಸಿದರು.
ರಹಸ್ಯ ಸ್ಕೆಚ್ ರೂಪಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳುವುದಾದರೆ ಹೇಗೆ ಬೀಳಿಸುತ್ತಾರೆ ಎನ್ನುವುದನ್ನೂ ಹೇಳಿದ್ದರೆ ಚೆನ್ನಾಗಿತ್ತು. ಜೆಡಿಎಸ್ ಆಪರೇಷನ್‌ಗೆ ಬಿಜೆಪಿ ಸಹಕಾರದ ಪ್ರಶ್ನೆಯೇ ಇಲ್ಲ. ನಮ್ಮಿಂದ ಇಂತಹ ಯಾವುದೇ ಪ್ರಯತ್ನ ನಡೆಯುತ್ತಿಲ್ಲ, ಅಪಕ್ವ ಹಾಗೂ ಅಪ್ರಸ್ತುತ ವಿಚಾರ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಳ್ಳಿಹಾಕಿದರು.
ದಾಲ್ ಮೇ ಕುಚ್ ಕಾಲಾ
ಕಾಂಗ್ರೆಸ್ ಸರ್ಕಾರದೊಳಗೆ ಏನೋ ಸಮಸ್ಯೆಯಿದ್ದಂತಿದೆ. ‘ದಾಲ್ ಮೇ ಕುಚ್ ಕಾಲಾ’ ರೀತಿಯಲ್ಲಿ ಭಾಸವಾಗುತ್ತಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಿಂಗಾಪೂರಕ್ಕೆ ಹೋಗಿರುವ ನಿಖರ ಕಾರಣ ಗೊತ್ತಿಲ್ಲ. ಆದರೆ ಸರ್ಕಾರ ಬೀಳಿಸುವುದಂತೂ ಅವರ ಉದ್ದೇಶವಾಗಿರಲಿಕ್ಕಿಲ್ಲ. ಕಾಂಗ್ರೆಸ್‌ನ ಆಂತರಿಕ ಗೊಂದಲು, ಗೋಜಲುಗಳನ್ನು ಬೇರೆಯವರ ತಲೆಗೆ ಕಟ್ಟಲು ಪ್ರಯತ್ನಿಸುತ್ತಿದ್ದಾರಷ್ಟೇ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿರುಗೇಟು ನೀಡಿದರು.
ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಿದ ಅಸಮಾಧಾನ ಒಳಗೊಳಗೆ ಕುದಿಯುತ್ತಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ತಮ್ಮನ್ನಷ್ಟೇ ಅಲ್ಲ, ಹಿಂದುಳಿದ ವರ್ಗವನ್ನು ಕಡೆಗಣಿಸಿದ ಬೇಸರ ಹೊರ ಹಾಕಿದ್ದು, ಮೊದಲು ಈ ಪ್ರಶ್ನೆಗೆ ಉತ್ತರಿಸಲಿ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎನ್.ರವಿಕುಮಾರ್, ಕಾಂಗ್ರೆಸ್ ನಾಯಕರಿಗೆ ಸವಾಲೆಸೆದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 4 =
Remember me
