ಗದಗ:ಕನಕಪುರ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣದ ವಿಚಾರವಾಗಿ ಡಿ.ಕೆ.ಶಿವಕುಮಾರ್​ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿ.ಕೆ.ಶಿವಕುಮಾರ್​ಗೆ ಹೇಗಾದರೂ ಮಾಡಿ ಪ್ರತಿಪಕ್ಷದ ನಾಯಕರಾಗಬೇಕು ಅಥವಾ ಕೆಪಿಸಿಸಿ ಅಧ್ಯಕ್ಷ ಆಗಬೇಕು ಎಂಬುದು ಉದ್ದೇಶ. ಹಾಗಾಗಿ ತಮ್ಮ ನಿಷ್ಠೆಯನ್ನು ಅವರು ಸೋನಿಯಾ ಗಾಂಧಿಗೆ ತೋರಿಸಬೇಕಾಗಿದೆ. ನಿಷ್ಠೆ ಏಸು ಕ್ರಿಸ್ತನಿಗೆ ಅಲ್ಲ, ಸೋನಿಯಾ ಗಾಂಧಿಗೆ. ಏನು ಮಾಡಿದರೆ ಸೋನಿಯಾ ಗಾಂಧಿಯವರಿಗೆ ಇಷ್ಟ ಎಂಬುದು ಡಿ.ಕೆ.ಶಿವಕುಮಾರ್​ಗೆ ಗೊತ್ತು ಎಂದು ಹೇಳಿದರು.
ಸರಿಯಾಗಿ ಅನುಮತಿ ಪಡೆಯದೆ ಸರ್ಕಾರಿ ಜಾಗದಲ್ಲಿ ಏಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವುದು ತಪ್ಪು. ಹಾಗಾಗಿ ಬಿಜೆಪಿ ಪಕ್ಷ ಆಕ್ಷೇಪ ಮಾಡಿದೆ. ತುಷ್ಟೀಕರಣದ ರಾಜಕಾರಣಕ್ಕೆ ಬಿಜೆಪಿಯ ವಿರೋಧ ಇದೆ. ಬಿಜೆಪಿ ಮುಸ್ಲಿಂ ವಿರೋಧಿಯೂ ಅಲ್ಲ, ಕ್ರಿಶ್ಚಿಯನ್​ ವಿರೋಧಿಯೂ ಅಲ್ಲ ಎಂದು ಹೇಳಿದರು.
ಕಲ್ಲಡ್ಕ ಪ್ರಭಾಕರ್​ ಭಟ್​ ಅವರು ಅಲ್ಲಿಗೆ ಹೋಗಿ ಯಾಕೆ ಭಾಷಣ ಮಾಡಬೇಕು ಎಂದು ಯು.ಟಿ.ಖಾದರ್​ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯು.ಟಿ.ಖಾದರ್​ ಅವರೂ ಕೂಡ ಬೇರೆ ಕಡೆಗೆ ಹೋಗಿ ಭಾಷಣ ಮಾಡುತ್ತಾರೆ. ಪೌರತ್ವ ಕಾಯ್ದೆ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್​ ಅವರು ಎಲ್ಲಿ ಭಾಷಣ ಮಾಡಬೇಕು, ಎಲ್ಲಿ ಮಾಡಬಾರದು ಎನ್ನುವುದು ಅವರಿಗೇ ಬಿಟ್ಟಿದ್ದು. ಆಯಾ ಜಿಲ್ಲಾಡಳಿತ ಅದನ್ನು ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
