ಬೆಂಗಳೂರು: ಕೂಲಿ ಕಾರ್ವಿುಕರು ನಗರದಿಂದ ಹೊರ ಹೋಗುವುದು ಕಂಡುಬಂದರೆ ಅವರನ್ನು ಲಾಕ್​ಡೌನ್ ಮುಗಿಯುವವರೆಗೂ ಕ್ವಾರಂಟೈನ್ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಅವರು, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಕಟ್ಟಡ ನಿರ್ಮಾಣ ಗುತ್ತಿಗೆದಾರರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.
ಕಟ್ಟಡ ನಿರ್ಮಾಣ ಕೂಲಿ ಕಾರ್ವಿುಕರು, ಪೇಂಟಿಂಗ್, ಗ್ರಾನೈಟ್ ಮತ್ತು ಟೈಲ್ಸ್ ಕೆಲಸಗಾರರು ಸೇರಿ 1 ಲಕ್ಷಕ್ಕೂ ಅಧಿಕ ಕಾರ್ವಿುಕರು ನಗರದಲ್ಲಿದ್ದಾರೆ. ಲಾಕ್​ಡೌನ್​ನಿಂದ ಕೆಲಸವಿಲ್ಲದೆ ಊರಿಗೆ ಹೋಗುತ್ತಿದ್ದು, ಪ್ರತಿನಿತ್ಯ ಸಾವಿರಾರು ಜನರು ನಗರದ ಗಡಿಭಾಗದಲ್ಲಿ ಬಂದು ನಿಲ್ಲುತ್ತಿದ್ದಾರೆ. ಯಾವುದೇ ಕಾರ್ವಿುಕರನ್ನು ನಗರದಿಂದ ಹೊರ ಹೋಗಲು ಬಿಡುವುದಿಲ್ಲ. ಹಾಗೇನಾದರೂ ಪ್ರಯತ್ನ ಮುಂದುವರಿಸಿದರೆ, ಅವರನ್ನು ನಗರದ ಗಡಿಭಾಗದ ಸಮುದಾಯ ಭವನಗಳಲ್ಲಿ ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದರು.
ಗುತ್ತಿಗೆದಾರರೇ ಜವಾಬ್ದಾರಿ:ಕಟ್ಟಡ ನಿರ್ವಣದ ಕೂಲಿ ಕಾರ್ವಿುಕರು ಇರುವ ಶೆಡ್​ಗಳಲ್ಲಿಯೇ ವಾಸಕ್ಕೆ ಅವಕಾಶ ಮಾಡಿಕೊಡಬೇಕು. ಜತೆಗೆ ಜೀವನಾವಶ್ಯಕ ಸಾಮಗ್ರಿಗಳನ್ನು ಒದಗಿಸುವುದು ಸಂಬಂಧಿಸಿದ ಗುತ್ತಿಗೆದಾರರು ಮತ್ತು ಡೆವಲಪರ್ಸ್​ಗಳ ಜವಾಬ್ದಾರಿಯಾಗಿದೆ. ಒಂದು ವೇಳೆ ಊರಿಗೆ ತೆರಳಲು ಒತ್ತಾಯ ಮಾಡಿದರೆ ದೂರು ಕೊಡಬಹುದು. ಅಂತಹ ಮಾಲೀಕರು, ಗುತ್ತಿಗೆದಾರರನ್ನು ಬಂಧಿಸಲಾಗುವುದು. ಸಂಬಂಧಿಸಿದ ಗುತ್ತಿಗೆದಾರರನ್ನು ಕಪು್ಪಪಟ್ಟಿಗೆ ಸೇರಿಸುವ ಹಾಗೂ ಮಾಲೀಕರು, ಡೆವಲಪರ್ಸ್​ಗಳು ನಿರ್ವಿುಸುತ್ತಿರುವ ಕಟ್ಟಡಗಳ ನಕ್ಷೆ ರದ್ದುಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ನಗರದ ಗಡಿಗಳಲ್ಲಿ ಸರ್ಪಗಾವಲು:ರಾಜ್ಯದ ಹಲವು ಜಿಲ್ಲೆಗಳ ಗಡಿಗಳಲ್ಲಿ ಬೆಂಗಳೂರಿನಿಂದ ಹೊರ ಹೋದ ಕಾರ್ವಿುಕರು ಒಳಸೇರಲು ಕಾಯುತ್ತಿರುವ ಕುರಿತು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ನಗರವನ್ನು ದಾಟು ವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ನಗರದ ತುಮಕೂರು ರಸ್ತೆ, ಆನೇಕಲ್ ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ ಸೇರಿ ಎಲ್ಲ ಮೂಲೆಗಳಲ್ಲಿಯೂ ಬಿಗಿ ಬಂದೋಬಸ್ತ್ ಮಾಡಿ ಯಾರೊಬ್ಬರು ಗಡಿ ದಾಟದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಲ್ಯಾಣ ಮಂಟಪದಲ್ಲಿ ನಿರಾಶ್ರಿತ ಕೇಂದ್ರ:ವಲಸೆ ಕಾರ್ವಿುಕರು, ಕಟ್ಟಡ ಕಾರ್ವಿುಕರು ಹಾಗೂ ನಿರ್ಗತಿಕರಿಗೆ ತಾತ್ಕಾಲಿಕ ಸೌಲಭ್ಯ ಒದಗಿಸಲು ಪಾಲಿಕೆಯ ವ್ಯಾಪ್ತಿಯಲ್ಲಿ 214 ಕಲ್ಯಾಣ ಮಂಟಪ, ಸಮುದಾಯ ಭವನ, ಪಾರ್ಟಿ ಹಾಲ್, ಮಹಲ್ ಹಾಗೂ ಸಭಾ ಭವನಗಳನ್ನು ವಶಕ್ಕೆ ಪಡೆದು, ಕಾರ್ವಿುಕ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ. ಇಲ್ಲಿ ಕಾರ್ವಿುಕರು ಮತ್ತು ನಿರಾಶ್ರಿತರಿಗೆ ತಾತ್ಕಾಲಿಕ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಶೋಕ್ ತಿಳಿಸಿದರು.
ಪಕ್ಷಿಗಳಿಗೆ ಪಾಲಿಕೆಯಿಂದಲೇ ಆಹಾರ:ನಗರದಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ಪಾಲಿಕೆಯಿಂದಲೇ ಆಹಾರ ಒದಗಿಸಲಾಗುವುದು. ಸಾರ್ವಜನಿಕರು ಹೊರಗೆ ಬಂದು ಕರೊನಾ ಸೋಂಕಿಗೆ ಬಲಿಯಾಗಬಾರದು ಎಂದು ಅಶೋಕ್ ಮನವಿ ಮಾಡಿದ್ದಾರೆ.
ಕಾರ್ವಿುಕರ ಸೌಲಭ್ಯಕ್ಕೆ 25 ಕೋಟಿ ರೂಪಾಯಿ:ನಗರದಿಂದ ಹೊರ ಹೋಗುವ ಕಾರ್ವಿುಕರನ್ನು ತಡೆದು ತಾತ್ಕಾಲಿಕ ಸೌಲಭ್ಯ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ ಹತ್ತಿರವಿರುವ ಕಲ್ಯಾಣ ಮಂಟಪ, ತುಮಕೂರು ವಸ್ತುಪ್ರದರ್ಶನ ಮೈದಾನದಲ್ಲಿ ವಸತಿ, ಊಟದ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಅಶೋಕ್ ತಿಳಿಸಿದರು.
ನೇರವಾಗಿ ಆಹಾರ ಹಂಚಬೇಡಿ:ಹಲವು ಸಂಘ-ಸಂಸ್ಥೆಗಳು ಊಟ ವಿತರಿಸುತ್ತಿವೆ. ಆ ರೀತಿ ಮಾಡದೆ ಹತ್ತಿರದ ಪೊಲೀಸ್ ಠಾಣೆ ಅಥವಾ ಕಂದಾಯ ಅಧಿಕಾರಿ ಕಚೇರಿ ಅಧಿಕಾರಿಗಳ ಮೂಲಕ ಆಹಾರ ವಿತರಿಸಬೇಕು. ದೇಣಿಗೆಯನ್ನು ನೇರವಾಗಿ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಕೇರ್ ನಿಧಿಗೆ ಪಾವತಿಸುವಂತೆ ಸಚಿವರು ಕೋರಿದ್ದಾರೆ.
ವಸತಿ, ಆಹಾರ ವ್ಯವಸ್ಥೆ ಮಾಡದಿದ್ದರೆ ಕ್ರಮ:ಪಾಲಿಕೆಯಿಂದ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ವಿುಸುತ್ತಿರುವ ಬಿಲ್ಡರ್ಸ್ ಮತ್ತು ಡೆವಲಪರ್ಸ್​ಗಳು ತಮ್ಮಅಧೀನದಲ್ಲಿ ಕೆಲಸ ಮಾಡುವ ಕಾರ್ವಿುಕರನ್ನು ಊರುಗಳಿಗೆ ಕಳುಹಿಸಬಾರದು. ಕಾರ್ವಿುಕರಿಗೆ ಅಗತ್ಯ ಊಟ, ದಿನಸಿ, ವಸತಿ ಒದಗಿಸುವ ಕಾರ್ಯ ಮಾಡಬೇಕು. ಇದಕ್ಕಾಗಿ ಸಂಬಂಧಿಸಿದ ಗುತ್ತಿಗೆದಾರರು ಮತ್ತು ಸಂಸ್ಥೆಗಳಿಗೆ ಸರ್ಕಾರದಿಂದ ಅಗತ್ಯ ಪಾಸ್​ಗಳನ್ನು ನೀಡಲಾಗುವುದು. ಕಾರ್ವಿುಕರು ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿದ್ದಲ್ಲಿ ಸಂಬಂಧಿಸಿದ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಶೋಕ್ ಹಾಗೂ ಗೌತಮ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಮಾರಣಾಂತಿಕ ಕರೊನಾ ವೈರಸ್ ಮೆಟ್ಟಿನಿಂತ ಆತ್ಮಸ್ಥೈರ್ಯ:ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವೆಂಕಟ್ ರಾಘವ್ ಮನದಾಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 2 =
Remember me
