| ಅರವಿಂದ ಅಕ್ಲಾಪುರ ಶಿವಮೊಗ್ಗ
45 ವರ್ಷದ ಹಿಂದಿನ ಮಾತು. ಲೋಕೇಶಪ್ಪ, ಕೃಷಿ ಪದವಿ ಪಡೆದು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಬಯಸಿದ್ದರು. ಪಿಯುಸಿ ನಂತರ ಓದು ಮುಂದುವರಿಸಲು ಆಗಲಿಲ್ಲ. ತಂದೆಯೊಂದಿಗೆ ವ್ಯವಸಾಯ ಆರಂಭಿಸಿಯೇ ಬಿಟ್ಟರು. ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣ ಸಮೀಪ ಪಿತ್ರಾರ್ಜಿತ ಜಮೀನು ಹೊಂದಿದ್ದ ಲೋಕೇಶಪ್ಪ, ಆ ಭಾಗದಲ್ಲಿ ಮೊದಲ ಬಾರಿಗೆ ಬೀಜ ನಿಗಮಕ್ಕೆ ಬೀಜ ಪೂರೈಕೆ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಕಬ್ಬು, ಸೂರ್ಯಕಾಂತಿ, ಬಾಳೆ, ರೇಷ್ಮೆ ಮುಂತಾದ ಬೆಳೆ ಬೆಳೆಯುವ ಮೂಲಕ ಅಂತರ ಬೆಳೆ, ಸಮಗ್ರ ಕೃಷಿಯನ್ನು ಆ ಭಾಗದಲ್ಲಿ ಪರಿಚಯಿಸಿದರು. ಕ್ರಮೇಣ ಅಲ್ಲಿನ ರೈತರೂ ಇವರನ್ನು ಅನುಕರಣೆ ಮಾಡಿದ್ದು ವಿಶೇಷ. ಕೆಲ ವರ್ಷಗಳ ಹಿಂದೆ ಕಡೂರು ತಾಲೂಕು ಹಿರೇಅಂಗಳಕ್ಕೆ ಬಂದ ಲೋಕೇಶಪ್ಪ. ಅಲ್ಲಿ 9 ಎಕರೆ ಜಮೀನು ಖರೀದಿಸಿದರು. ದೊಡ್ಡ ಮೊತ್ತದ ಸಾಲ ಬೆನ್ನೇರಿತ್ತು. ಒಂದೇ ಹಸು ಇಟ್ಟುಕೊಂಡು ಅತ್ಯಂತ ಕಷ್ಟದೊಂದಿಗೆ ಅಡಕೆ, ತೆಂಗು, ಬಾಳೆ, ಕಾಳು ಮೆಣಸು ಬೆಳೆದರು. ನಿಧಾನವಾಗಿ ಹೈನುಗಾರಿಕೆ ಅಭಿವೃದ್ಧಿಪಡಿಸಿಕೊಂಡರು. ಇಂದು ಲೋಕೇಶಪ್ಪ ವಾರ್ಷಿಕ ಆದಾಯ 30-35 ಲಕ್ಷ ರೂ.
32 ಹಸು-170ಲೀಟರ್ ಹಾಲು: ಲೋಕೇಶಪ್ಪ ಬಳಿ 32 ಹಸುಗಳಿವೆ. ಪ್ರತಿದಿನ 170 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಇಲ್ಲಿ ಉತ್ಪತ್ತಿಯಾಗುವ ಹಾಲನ್ನು ಅಕ್ಷಯ ಕಲ್ಪ ಡೈರಿಯಿಂದ ಸಾವಯವ ಹಾಲು ಎಂದು ಪರಿಗಣಿಸಲಾಗಿದೆ. ಪ್ರತಿ ಲೀಟರ್​ಗೆ 33-35 ರೂ. ನೀಡಿ ಖರೀದಿಸುತ್ತಾರೆ. ಮುಸುಕಿನ ಜೋಳದ ಹಸಿ ಎಲೆಯನ್ನು ದೊಡ್ಡ ಗಾತ್ರದ ನಾಲ್ಕು ಟ್ಯಾಂಕ್​ಗಳಲ್ಲಿ ಸಂಗ್ರಹಿಸಿ ವರ್ಷವಿಡೀ ಹಸಿ ಮೇವು ಸಿಗುವಂತೆ ನೋಡಿಕೊಳ್ಳುತ್ತಾರೆ ಲೋಕೇಶಪ್ಪ. ಪ್ರತಿ ದನಕ್ಕೆ ದಿನವೊಂದಕ್ಕೆ 25 ಕೆಜಿ ಮೇವು ಒದಗಿಸಲಾಗುತ್ತದೆ. ಪ್ರತಿ ವರ್ಷ ಸುಮಾರು 50 ಲೋಡ್ ಗೊಬ್ಬರ ಉತ್ಪಾದನೆ ಯಾಗುತ್ತದೆ. ಇದರ ಮೌಲ್ಯ 3 ಲಕ್ಷ ರೂ.ಗೂ ಅಧಿಕ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 1 =
Remember me
