ಕಡಬ:ದೈವದ ನರ್ತನ ಸೇವೆ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಇಹಲೋಕ ತ್ಯಜಿಸಿದ ಘಟನೆ ಕಡಬ ಸಮೀಪದ ಎಡಮಂಗಲ ಗ್ರಾಮದಿಂದ ವರದಿಯಾಗಿದೆ.
ಗ್ರಾಮದಲ್ಲಿ ದೈವ ನರ್ತಕರಾಗಿ ಹೆಸರುವಾಸಿಯಾಗಿದ್ದ ಕಾಂತು ಅಜಿಲ ಮೂಲಂಗೀರಿ (55) ಮೃತರು. ಹಲವಾರು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಗಟ್ಟಿಗೆ ಸಂಬಂಧಿಸಿದಂತೆ ದೈವಾರಾದಕರಾಗಿ ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಇದನ್ನೂ ಓದಿ:SSLC ವಿದ್ಯಾರ್ಥಿಗಳಿಗೆ ಈ ಬಾರಿಯೂ 10% ಗ್ರೇಸ್ ಮಾರ್ಕ್ಸ್: ಯಾವೆಲ್ಲ ವಿಷಯಕ್ಕೆ ಸಿಗಲಿದೆ?ಮಾ.30 ರಂದು ರಾತ್ರಿ 2 ಗಂಟೆ ಸುಮಾರಿಗೆ ಎಡಮಂಗಲ ಗ್ರಾಮದ ಇಡ್ಯಡ್ಕದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ನೇಮೊತ್ಸವ ನಡೆಯುತ್ತಿತ್ತು.ದೈವ ನರ್ತನ ಮಾಡುತ್ತಿರುವಾಗಲೇ ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದರೂ ಫಲ ನೀಡಲಿಲ್ಲ ಎಂಬ ಮಾಹಿತಿ ಲಭಿಸಿದೆ.
ಇದನ್ನೂ ಓದಿ:15 ವರ್ಷಗಳ ಬಳಿಕ ಪೆಪ್ಸಿ ಹೊಸ ಲೋಗೋ ಅನಾವರಣ!ಘಟನೆ ನಡೆಯುವ ವೇಳೆ ಕಾಂತು ಅಜಿಲರವರು ಶಿರಾಡಿ ದೈವಕ್ಕೆ ನರ್ತನ ಸೇವೆ ನೀಡುತ್ತಿದ್ದರು. ಅವರ ಜತೆ ಕಲ್ಕುಡ ದೈವದ ಪಾತ್ರಿ ನರ್ತನ ಸೇವೆ ನೀಡುತ್ತಿದ್ದರು. ಅದಕ್ಕೂ ಮೊದಲು ಬರ್ಮೆರ್ ಹಾಗೂ ಗಿಣಿ ರಾಮ ದೈವಕ್ಕೆ ನೇಮೋತ್ಸವ ನಡೆದಿತ್ತು. ನರ್ತನ ಸೇವೆಯ ವೇಳೆ ಹೃದಯಾಘಾತಕ್ಕೆ ಒಳಗಾಗಿ ಕಾಂತು ಅಜಿಲರವರು ನಿಧನ ಹೊಂದಿರಬಹುದೆಂದು ಅಂದಾಜಿಸಲಾಗಿದೆ. ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ರಾಜ್ಯ ರಾಜಧಾನಿಯಲ್ಲಿ ಮುಂದಿನ‌ ಐದು ದಿನ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + ten =
Remember me
