ಮಂಗಳೂರು:ಹಾಲು ತರಲು ಹೋಗುತ್ತಿದ್ದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸಾಕಷ್ಟು ಅಂತರದಿಂದ ಹಾರಿ ಎದುರಿನಿಂದ ಬರುತ್ತಿದ್ದ ಬೈಕ್​ ಅಡಿಗೆ ಬಿದ್ದ ದೃಶ್ಯವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಆ.28ರಂದು ಸಂಜೆ 4.35ರ ಸುಮಾರಿಗೆ ದ.ಕ ಜಿಲ್ಲೆಯ ಪುತ್ತೂರಿನ ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ‌ ಅಪಘಾತ ನಡೆದಿತ್ತು. ಆದರೆ ಅದೃಷ್ಟವಶಾತ್ ಆ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಹೊರತು ಯಾವುದೇ ಅಪಾಯ ಸಂಭವಿಸಿಲ್ಲ.
ಇದನ್ನೂ ಓದಿ:ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟಿನ ವಿಚಾರ ಸ್ಫೋಟಕ ಹೇಳಿಕೆ ನೀಡಿದ ನಟ ಆದಿ ಲೋಕೇಶ್​…!
ಅಪಘಾತದ ದೃಶ್ಯ ಎಂಥವರ ಎದೆಯನ್ನು ಝಲ್ಲೆನಿಸುವಂತಿದ್ದು, ಕಾರಿನಲ್ಲಿರುವವರೂ, ಬೈಕ್ ಸವಾರರೂ ಸಂಪೂರ್ಣ ಭಯಭೀತರಾಗಿದ್ದೂ ದೃಶ್ಯದಲ್ಲಿ ಕಂಡು ಬರುತ್ತಿದೆ. ಬಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿರದ ಕಾರಣ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.(ದಿಗ್ವಿಜಯ ನ್ಯೂಸ್​)
ಡ್ರಗ್ಸ್​ ಚರ್ಚೆಯಲ್ಲಿ ಚಿರು ಹೆಸರು: ದಯವಿಟ್ಟು ಇಂದ್ರಜಿತ್​​ಗೆ ತಿಳಿಸಿ, ಮೇಘನಾ ರಾಜ್​ ನೋವಿನ ಮಾತು!

Sign in to your account
Please enter an answer in digits:seven − three =
Remember me
