ಬೆಂಗಳೂರು:ಶೋಷಿತ ಸಮುದಾಯಗಳ ಏಳಿಗೆಗೆ ಶಾಸನಾತ್ಮಕವಾಗಿ ಅನುದಾನ ಮೀಸಲಿಟ್ಟ ನಂತರ ವಿನಿಯೋಗ, ಪ್ರಯೋಜನ, ಲಿತಾಂಶ, ಸಬಲೀಕರಣ ಹಾಗೂ ಪರಿಣಾಮಗಳ ಸಮಗ್ರ ಮೌಲ್ಯಮಾಪನಕ್ಕೆ ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೋಮವಾರ ಪ್ರಕಟಿಸಿದರು.
ವಿಧಾನಸೌಧದಲ್ಲಿ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಕಾಯ್ದೆಬದ್ಧವಾಗಿ ಮೀಸಲಿಡಲಾಗುತ್ತಿದೆ.
ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಆರೋಗ್ಯದ ನೆಲೆಯಲ್ಲಿ ವಂಚಿತ ಸಮುದಾಯಗಳನ್ನು ಮೇಲಕ್ಕೆತ್ತಿ, ಮುಖ್ಯ ವಾಹಿನಿಗೆ ತರುವುದು ಶಾಸನಾತ್ಮಕ ಉಪಯೋಜನೆ ಉದ್ದೇಶವಾಗಿದೆ. ಕಾಯ್ದೆ ಜಾರಿಯಾಗಿ ಒಂಭತ್ತು ವರ್ಷಗಳಾಗಿದ್ದು, ಈವರೆಗೆ ಎರಡು ಲಕ್ಷ ಕೋಟಿ ರೂ. ಹೆಚ್ಚು ವೆಚ್ಚವಾಗಿದೆ.
ಈ ಹಿನ್ನೆಲೆಯಲ್ಲಿ ಕಾಯ್ದೆ ಉದ್ದೇಶ ಈಡೇರಿದೆಯೆ ?, ಅನುದಾನದ ವಿನಿಯೋಗದ ಪ್ರಯೋಜನ, ಬದುಕಿನಲ್ಲಾಗಿರುವ ಬದಲಾವಣೆ, ಪರಿಣಾಮಗಳನ್ನು ತಿಳಿದುಕೊಳ್ಳಲೆಂದು ಸಮಗ್ರ ಮೌಲ್ಯಮಾಪನ ನಡೆಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ಐಸೆಕ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರತ್ಯೇಕವಾಗಿ ಈ ಅಧ್ಯಯನ, ಮೌಲ್ಯಮಾಪನ ನಿರ್ವಹಿಸಲಿವೆ. ವಸ್ತುಸ್ಥಿತಿ ಸ್ಥೂಲ ವರದಿಯನ್ನು ಆರು ತಿಂಗಳಲ್ಲಿ ತರಿಸಿಕೊಳ್ಳಲು ಆಲೋಚಿಸಿರುವೆ ಎಂದರು.
ಅಲ್ಲದೆ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಕ್ರಿಯಾ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತ 35 ಇಲಾಖೆಗಳಿಗೂ ಮೌಲ್ಯಮಾಪನ ವರದಿ ಸಲ್ಲಿಸಲು ಸೂಚಿಸಲಾಗಿದೆ. ಕೆಲವು ಇಲಾಖೆಗಳು ವರದಿ ಸಲ್ಲಿಸಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಅಡ್ಡ ತಪಾಸಣೆ ಮಾಡಲಾಗುವುದು ಎಂದರು.
ಸಮಗ್ರ ಮೌಲ್ಯಮಾನಪನದಿಂದ ಕಾಯ್ದೆಯ ಪರಿಣಾಮ, ಅನುದಾನ ವಿನಿಯೋಗದ ಪ್ರಯೋಜನ ಜತೆಗೆ ದಮನಿತ ಸಮುದಾಯಗಳ ಬದುಕಿನ ವಸ್ತುಸ್ಥಿತಿ ಗೊತ್ತಾಗಲಿದೆ. ಅನುದಾನ ಸಮರ್ಪಕ ಬಳಕೆ, ಉದ್ದೇಶಿತ ಗುರಿ ಸಾಧನೆ ತಿಳಿದುಕೊಂಡು, ಮುಂದೆ ಯಾವ ರೀತಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ವರದಿ ತಿಳಿಸಿಕೊಡಲಿದೆ.ದೊಡ್ಡ ಪ್ರಮಾಣದ ಅನುದಾನದ ಬಳಕೆ ರೀತಿ-ರಿವಾಜು, ಒಂದೇ ಕಾರ್ಯಕ್ರಮ ಹಲವು ಇಲಾಖೆಗಳಿಂದ ಜಾರಿ, ದುರ್ಬಳಕೆ, ವ್ಯರ್ಥ ಅಪವ್ಯಯ, ಸಾರ್ಥಕತೆ ಕಾಣದ ಆರ್ಥಿಕ ಹಾಗೂ ಭೌತಿಕ ಪ್ರಗತಿ ಮತ್ತಿತರ ಲೋಪ-ದೋಷಗಳ ಪತ್ತೆಯಾಗಲಿದ್ದು, ಪರಿಣಾಮಕಾರಿ ಹಾಗೂ ಲಿತಾಂಶ ಆಧರಿತ ಯೋಜನೆಗಳನ್ನು ರೂಪಿಸಲು ನೆರವಾಗುತ್ತದೆ ಎಂದು ಡಾಎಚ್.ಸಿ.ಮಹದೇವಪ್ಪ ವಿವರಿಸಿದರು.
ಬಿಬಿಎಂಪಿ ಒಳಗೊಂಡು ಹಲವು ಜಿಲ್ಲೆಗಳಲ್ಲಿ ಪರಿಗಣಿತ ವೆಚ್ಚದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಬಳಸಿಕೊಂಡಿರುವುದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಮನಕ್ಕೆ ಬಂದಿದೆ.ಎಸ್‌ಸಿ, ಎಸ್‌ಟಿ ಸಮುದಾಯಗಳಿಲ್ಲದ ಪ್ರದೇಶದಲ್ಲಿ ರಸ್ತೆಗಳ ಸುಧಾರಣೆಗೆ ನಾಲ್ಕು ಕೋಟಿ ರೂ. ಬಳಕೆ, ವಿಮಾನ ನಿಲ್ದಾಣಕ್ಕೆ 11 ಕೋಟಿ ರೂ., ಮತ್ತೊಂದು ಕಾಮಗಾರಿಗೆ ಎರಡು ಕೋಟಿ ರೂ ವೆಚ್ಚ ಮಾಡಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.
ನಿರ್ಲಕ್ಷಿತ ಸಮುದಾಯಗಳ ಜೀವನಮಟ್ಟ ಸುಧಾರಣೆ, ಎಲ್ಲ ಆಯಾಮಗಳಲ್ಲಿ ಬದಲಾವಣೆ ಮತ್ತು ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ಸಾಮರ್ಥ್ಯ ಬೆಳೆಸಿಕೊಳ್ಳಲೆಂದು ಉಪ ಯೋಜನೆಯನ್ನು ಕಾಯ್ದೆಬದ್ಧಗೊಳಿಸಲಾಗಿದ್ದು, ಉದ್ದೇಶ ಈಡೇರಿಸುವುದು ಸರ್ಕಾರದ ದೃಢ ಸಂಕಲ್ಪವಾಗಿದೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ಮಂಡನೆ
ಉಪಯೋಜನೆಯಡಿ ಮೀಸಲಿಟ್ಟ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ, ಮಾರ್ಗಪಲ್ಲಟಕ್ಕೆ ಅವಕಾಶ ಕೊಡುವ ಕಾಯ್ದೆಯ ಉಪಬಂಧ 7ಡಿ ರದ್ದುಪಡಿಸಲು ಸರ್ಕಾರ ತೀರ್ಮಾನಿಸಲಾಗಿದೆ.ಈ ನಿರ್ಧಾರವನ್ನು ಕಾಯ್ದೆಬದ್ಧಗೊಳಿಸಬೇಕಾಗಿರುವ ಕಾರಣ 7ಡಿ ರದ್ದುಪಡಿಸಲೆಂದು ತಿದ್ದುಪಡಿ ಮಸೂದೆಯನ್ನು ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಹೇಳಿದರು.
ಈ ಉಪಬಂಧವನ್ನು ಬಳಸಿಕೊಂಡು ಹಿಂದಿನ ಸರ್ಕಾರದ ಅವಧಿಯಲ್ಲಿ 10 ಸಾವಿರ ಕೋಟಿ ರೂ. ಅನುದಾನ ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ಹೀಗೆಯೇ ಮುಂದುವರಿದರೆ ಕಾಯ್ದೆಯಿದ್ದೂ ಪ್ರಯೋಜನವಿಲ್ಲದಂತಾಗುತ್ತದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 17 =
Remember me
