| ಕೀರ್ತಿನಾರಾಯಣ ಸಿ. ಬೆಂಗಳೂರು
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವ್ಯಕ್ತಿಯ ಕೊಲೆಯಾದಲ್ಲಿ ಆ ಕುಟುಂಬದ ಸದಸ್ಯ ಅಥವಾ ಅವರ ಅವಲಂಬಿತರಿಗಾಗಿ ಸರ್ಕಾರಿ ಉದ್ಯೋಗ ಸೌಲಭ್ಯದ ಅವಕಾಶವಿದ್ದರೂ ಜಾಗೃತಿ ಕೊರತೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಅನೇಕರಿಗೆ ಈ ಅನುಕೂಲ ಸಿಗುತ್ತಿಲ್ಲ.
ನೊಂದ ಕುಟುಂಬಗಳಿಗೆ ಸೌಲಭ್ಯ ತಲುಪಿಸಲು ಜಾಗೃತಿ ಮೂಡಿಸುತ್ತಿರುವ ರಾಜ್ಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಡಿಸಿಆರ್​ಇ) ಪರಿಶ್ರಮದ ಫಲವಾಗಿ, ಈವರೆಗೆ 33 ಜನರಿಗೆ ಉದ್ಯೋಗ ಭಾಗ್ಯ ದಕ್ಕಿದೆ. ಆದರೂ ಅನೇಕ ಕುಟುಂಬಗಳು ಇದರ ಅರಿವೇ ಇಲ್ಲದೆ ಸೌಲಭ್ಯದಿಂದ ವಂಚಿತವಾಗುತ್ತಿವೆ.
3 ವರ್ಷದಲ್ಲಿ 163 ಹತ್ಯೆ:2018, 2019 ಮತ್ತು 2020ರ ಆಗಸ್ಟ್ ವರೆಗೆ ರಾಜ್ಯದಲ್ಲಿ ಎಸ್​ಸಿ-ಎಸ್​ಟಿ ಸಮುದಾಯಕ್ಕೆ ಸೇರಿದ 163 ವ್ಯಕ್ತಿಗಳು ಕೊಲೆಯಾಗಿದ್ದಾರೆ. 2018ರ 1 ಪ್ರಕರಣದಲ್ಲಷ್ಟೇ ಶಿಕ್ಷೆಯಾಗಿದೆ. ಉಳಿದಂತೆ 113ರಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದ್ದು, 7 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಆಗಿದೆ. 23 ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ.
ಅನುಸೂಚಿತ ಜಾತಿ, ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1995 ಕಲಂ 12(4)ರ ಪ್ರಕಾರ ಕೊಲೆಯಾದ ವ್ಯಕ್ತಿಯ ಕುಟುಂಬದ ಒಬ್ಬ ಸದಸ್ಯರಿಗೆ 8.25 ಲಕ್ಷ ರೂ. ಆರ್ಥಿಕ ನೆರವಿನ ಜತೆಗೆ ಸರ್ಕಾರಿ ನೌಕರಿ, ಪಿಂಚಣಿ, ಸರ್ಕಾರಿ ಜಮೀನು ನೀಡಲು ಅವಕಾಶವಿದೆ. ಹತ್ಯೆಯಾದ 163 ಜನರಲ್ಲಿ ಈವರೆಗೆ 33 ಮಂದಿ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕೊಡಿಸುವಲ್ಲಿ ಡಿಸಿಆರ್​ಇ ಯಶಸ್ವಿಯಾಗಿದೆ.
ಡಿಸಿಆರ್​ಇ ಮಾರ್ಗದರ್ಶನ:ಕೊಲೆಯಾದ ಎಸ್​ಸಿ- ಎಸ್​ಟಿ ವ್ಯಕ್ತಿಯ ಕುಟುಂಬಕ್ಕಿರುವ ಸರ್ಕಾರಿ ಸವಲತ್ತುಗಳ ಮಾಹಿತಿ ಬಹುತೇಕರಿಗೆ ಗೊತ್ತಿಲ್ಲ. ಹೀಗಾಗಿ ಇನ್ನುಮುಂದೆ ಹತ್ಯೆ ಪ್ರಕರಣ ದಾಖಲಾದ ಕೂಡಲೇ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಕುಟುಂಬಸ್ಥರಿಗೆ ಸಾಂತ್ವನ ಹೇಳುವುದರ ಜತೆಗೆ ನಿಯಮಾನುಸಾರ ಪರಿಹಾರ ಪಡೆಯಲು ಮಾರ್ಗದರ್ಶನ ನೀಡಲಿದ್ದಾರೆ.
ರಾಜ್ಯದಲ್ಲಿ 2016ರಿಂದ 2020ರವರೆಗೆ 5 ವರ್ಷದಲ್ಲಿ ಎಸ್ಸಿ-ಎಸ್ಟಿ ಸಮುದಾಯದ ವಿರುದ್ಧದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 8268 ಕೇಸ್ ದಾಖಲಾಗಿವೆ. ಶಿಕ್ಷೆ ಪ್ರಮಾಣ ಶೇ.4.
ಸರ್ಕಾರಿ ಸವಲತ್ತಿನ ಬಗ್ಗೆ ಬಹುತೇಕರಿಗೆ ಮಾಹಿತಿ ಇಲ್ಲ. ಎಸ್ಸಿ-ಎಸ್ಟಿ ವ್ಯಕ್ತಿಗಳ ಎಲ್ಲ ಕೊಲೆ ಪ್ರಕರಣಗಳಲ್ಲೂ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ಕೊಡಿಸಲಾಗುತ್ತದೆ. ಕೆಲವೊಮ್ಮೆ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳಿಂದ ಅರ್ಜಿ ತಿರಸ್ಕೃತವಾಗುತ್ತಿದೆ. ಹೀಗಾಗಿ ಕಾಯ್ದೆ ತಿದ್ದುಪಡಿಗಾಗಿ ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ.
| ಡಾ.ಕೆ. ರಾಮಚಂದ್ರರಾವ್ಎಡಿಜಿಪಿ, ಡಿಸಿಆರ್​ಇ
ಕರೊನಾದಿಂದಾಗಿ ಸತ್ತ 200ಕ್ಕೂ ಅಧಿಕ ಜನರ ಶವ ಸಾಗಿಸಿದ್ದ ಆಂಬುಲೆನ್ಸ್ ಚಾಲಕನೇ ಕೋವಿಡ್​ಗೆ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
