ಬೆಂಗಳೂರು:ದೇವರು-ದೇವಸ್ಥಾನಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಕಿಡಿಗೇಡಿತನಕ್ಕೆ ಈಗ ಇನ್ನೊಂದು ಪ್ರಕರಣ ಸೇರಿಕೊಂಡಿದೆ. ನಾಗದೇವರ ಮೂರ್ತಿಯೊಂದನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ, ಹಿಂದೂಗಳ ಭಾವನೆಗಳ ಧಕ್ಕೆ ತಂದಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಚಿಕ್ಕತೋಗೂರು ಗೇಟ್ ಬಳಿ ಈ ಪ್ರಕರಣ ನಡೆದಿದೆ. ಹೊಸೂರು ಬೆಂಗಳೂರು ಮುಖ್ಯರಸ್ತೆಯ ಚಿಕ್ಕತೋಗೂರಿನ ರಸ್ತೆಪಕ್ಕದ ನಾಗದೇವರ ಬನದಲ್ಲಿನ ಮೂರ್ತಿಯನ್ನು ಕಿಡಿಗೇಡಿಗಳು ನಿನ್ನೆ ರಾತ್ರಿ ವಿರೂಪಗೊಳಿಸಿದ್ದಾರೆ.
ಸುಮಾರು 30 ವರ್ಷಗಳಿಂದ ಇಲ್ಲಿ ಪೂಜೆ ಪುನಸ್ಕಾರ ನಡೆಯುತ್ತಿದೆ. ಪ್ರತಿದಿನವೂ ಪೂಜೆ ನಡೆಯುವ ಈ ಜಾಗದಲ್ಲಿ ನಿನ್ನೆ ಕಿಡಿಗೇಡಿಗಳು ಕಲ್ಲಿನಿಂದ ಹೊಡೆದು ದೇವರ ಮೂರ್ತಿಯನ್ನು ಒಡೆದು ಹಾಕಿದ್ದಾರೆ. ದೇವರ ಮೂರ್ತಿಯನ್ನು ವಿರೂಪಗೊಳಿಸಿದ್ದಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಿಡಿಕಾರಿದ್ದಾರೆ. ಸ್ಥಳಕ್ಕೆ ಬಜರಂಗದಳ ಹಾಗೂ ಹಿಂದೂ ಪರ ಹೋರಾಟಗಾರರು ಭೇಟಿ ನೀಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರೂ ಸ್ಥಳಕ್ಕೆ ಧಾವಿಸಿದ್ದಾರೆ.
ಹೋಟೆಲ್ ಕಾರ್ಮಿಕನಿಗೆ 55 ಕೋಟಿ ರೂಪಾಯಿ ಜಾಕ್​ಪಾಟ್​!

ಅಪಾರ್ಟ್​ಮೆಂಟ್ ಹತ್ತನೇ ಮಹಡಿಯಿಂದ ಹಾರಿದ ವಿದ್ಯಾರ್ಥಿ; ತಪ್ಪು ಮಾಡಿ ಸಿಕ್ಕಿಬಿದ್ದ ಮುಜುಗರ ಎದುರಿಸಲಾಗದೆ ಸಾವಿಗೆ ಶರಣು..

ಪ್ರಧಾನಿ ಬರ್ತಾರೆ, ಕಾಲೇಜು ವಿದ್ಯಾರ್ಥಿಗಳನ್ನೂ ಕರೆ ತನ್ನಿ; ‘ತಪ್ಪಿದರೆ ಪ್ರಾಂಶುಪಾಲರೇ ಹೊಣೆ’ ಎಂದೂ ಎಚ್ಚರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
