ಬೆಂಗಳೂರು:ಪ್ರವಾಸೋದ್ಯಮ ಪೋ›ತ್ಸಾಹಿಸುವ ಜತೆಗೆ ಆರ್ಥಿಕ ಪುನಶ್ಚೇತನದ ಉದ್ದೇಶದಿಂದ ರಾಜ್ಯದ 9 ಕಡೆ ಸೀಪ್ಲೇನ್​ಗಳು ಏರಿಳಿಯುವ ವಾಟರ್ ಏರೋಡ್ರೋಮ್ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ವಸತಿ ಹಾಗೂ ಮೂಲಸೌಕರ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
‘ಕರ್ನಾಟಕದ ಸಮಗ್ರ ನಾಗರಿಕ ವಿಮಾನಯಾನ ನೀತಿ ರೂಪಣೆ’ ಕಾರ್ಯಾಗಾರದಲ್ಲಿ ಈ ಮಾಹಿತಿ ನೀಡಿದರು. ಕಾಳಿ ನದಿ, ಬೈಂದೂರು, ಮಲ್ಪೆ, ಮಂಗಳೂರು, ತುಂಗಭದ್ರಾ, ಕೆಆರ್​ಎಸ್, ಲಿಂಗನಮಕ್ಕಿ, ಆಲಮಟ್ಟಿ, ಹಾಗೂ ಹಿಡಕಲ್ ಜಲಾಶಯಗಳನ್ನು ವಾಟರ್ ಏರೋಡ್ರೋಮ್್ಸ ಅಭಿವೃದ್ಧಿಗೆ ಸಂಭಾವ್ಯ ಸ್ಥಳಗಳಾಗಿವೆ. ಸಮಗ್ರ ನಾಗರಿಕ ವಿಮಾನಯಾನ ನೀತಿ ರೂಪಿಸಬೇಕಿದ್ದು, ರಾಜ್ಯದ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಸಹಕಾರಿ ಆಗಲಿದೆ ಎಂದರು.
ವರ್ಷಾಂತ್ಯಕ್ಕೆ ಸಿದ್ಧ:ಶಿವಮೊಗ್ಗ ವಿಮಾನ ನಿಲ್ದಾಣ ಈ ವರ್ಷಾಂತ್ಯದೊಳಗೆ ಲೋಕಾರ್ಪಣೆ ಆಗಲಿದೆ. ವಿಜಯಪುರ ಮತ್ತು ಹಾಸನ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಹೇಳಿದರು.
ನೀರಿನ ಮೇಲೆ ಲಘು ವಿಮಾನ ಹಾಗೂ ಸೀಪ್ಲೇನ್​ಗಳು ಇಳಿಯು ವುದಕ್ಕೆ ಮತ್ತು ಟೇಕಾಫ್​ಗೆ ಮಾಡುವ ವ್ಯವಸ್ಥೆ. ನೀರಿನಲ್ಲಿಯೇ ರನ್​ವೇ ಮಾಡುವುದರಿಂದ ಕನಿಷ್ಠ 3ರಿಂದ 4 ಮೀಟರ್ ಆಳದಷ್ಟು ನೀರು ಸದಾ ಇರಬೇಕು. ಇದನ್ನು 10 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸ ಲಾಗುವುದು. ಪ್ಯಾಸೆಂಜರ್ ಟರ್ವಿುನಲ್ ಬಿಲ್ಡಿಂಗ್ ಸಂಪರ್ಕ ಒದಗಿಸಲು ನೀರಿನ ಜಟ್ಟಿಯನ್ನು ನಿರ್ವಿುಸಲಾಗುತ್ತದೆ. ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಹೆಲಿಪೋರ್ಟ್​ಗಳ ನಿರ್ಮಾಣ:ಮಡಿಕೇರಿ, ಚಿಕ್ಕಮಗಳೂರು ಮತ್ತು ಹಂಪಿಯಲ್ಲಿ ಹೆಲಿಪೋರ್ಟ್ ಸ್ಥಾಪಿಸಲು ಕಾರ್ಯಸಾಧ್ಯತೆ ಮತ್ತು ವಿಸõತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗುತ್ತಿದೆ. ಚಿಕ್ಕಮಗಳೂರು, ಹರಿಹರ, ಕುಶಾಲನಗರ ಮತ್ತು ಅಥಣಿಯಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪಿಸುವ ಚಿಂತನೆ ಇದೆ. ಮೈಸೂರು ವಿಮಾನ ನಿಲ್ದಾಣದ ಮೇಲ್ದರ್ಜೆ ಹಾಗೂ ರನ್​ವೇ ವಿಸ್ತರಣೆಗೆ 240 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು 320 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ರಾಯಚೂರಿನಲ್ಲಿ 324 ಎಕರೆ ಜಾಗದಲ್ಲಿ 186 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ವಣಕ್ಕೆ ಟೆಂಡರ್ ಕರೆಯಲಾಗಿದೆ ಎಂದರು.
ಉಡಾನ್​ಗೆ ಇನ್ನಷ್ಟು ಉತ್ತೇಜನ:ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಾಗಿರುವ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಅನ್ವಯ ಮೈಸೂರು, ಹುಬ್ಬಳ್ಳಿ, ವಿದ್ಯಾನಗರ (ತೋರಣಗಲ್), ಬೆಳಗಾವಿ, ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳಿಂದ ಕಾರ್ಯಾಚರಣೆ ಮಾಡುತ್ತಿರುವ ವಿಮಾನಯಾನ ಸಂಸ್ಥೆಗಳಿಗೆ ರಾಜ್ಯ ಸರ್ಕಾರದ ಪಾಲಿನ ಶೇಕಡ 20 ರಷ್ಟು ವಯಬಿಲಿಟಿ ಗ್ಯಾಪ್ ಫಂಡಿಂಗ್ ಭರಿಸಲಾಗುತ್ತಿದೆ. ಇದಲ್ಲದೆ, ವಿಮಾನ ನಿಲ್ದಾಣದ ರಕ್ಷಣೆ, ಭದ್ರತೆ ಮತ್ತು ಅಗ್ನಿಶಾಮಕ ಸೇವಗಳ ಶುಲ್ಕವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ ಎಂದು ವಿವರಿಸಿದರು.
ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + fourteen =
Remember me
