ಕುಂದಾಪುರ: ಮುಂಬೈಯಲ್ಲಿ ಕುಳಿತು ಡಾನ್ ರೀತಿ ಕರೆ ಮಾಡಿ ಮಾತನಾಡುವವರನ್ನು ಮುಲಾಜಿಲ್ಲದೆ ಬಂಧಿಸಿ ಜೈಲಿಗೆ ಕಳಿಸುವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
‘‘ಕೆಲವರು ಕ್ಷುಲ್ಲಕ ಕಾರಣಕ್ಕೆ ಫೋನ್ ಕರೆ ಮಾಡಿ ಅದನ್ನು ರೆಕಾರ್ಡ್ ಮಾಡಿಕೊಂಡು ವೈರಲ್ ಮಾಡುವಂತಹ ಕೆಲಸವನ್ನೂ ಮಾಡುತ್ತಿದ್ದಾರೆ. ಇಂಥ ಕೃತ್ಯಗಳು ಇವತ್ತಿಗೇ ಕೊನೆಯಾಗಬೇಕು. ನಾಳೆಯಿಂದ ಮುಂದುವರಿದರೆ ಮುಲಾಜಿಲ್ಲದೆ ಜೈಲಿಗಟ್ಟುತ್ತೇನೆ’’ ಎಂದು ಜಿಲ್ಲಾಧಿಕಾರಿ ಗುಡುಗಿದರು.
ಇದನ್ನೂ ಓದಿಹಸಿವಿನಿಂದ ಕಂಗೆಟ್ಟು ಸತ್ತ ನಾಯಿಯ ಮಾಂಸವನ್ನೇ ತಿಂದ!
‘‘ಇಂಥದ್ದನ್ನೆಲ್ಲ ನಾನು ಬಹಳ ನೋಡಿದ್ದೇನೆ, ಇದಕ್ಕೆಲ್ಲ ನಾನು ಮೊದಲಿನಿಂದಲೂ ಡೋಂಟ್ ಕೇರ್. ಫೋನ್ ಮಾಡಿ ಎಂಪಿ, ಎಂಎಲ್ಎ, ಡಿಸಿ, ಎಸ್ಪಿಗಳಿಗೆ ಹೆದರಿಸುವ ಆಟ ನಡೆಯುವುದಿಲ್ಲ. ಎಷ್ಟೇ ದೊಡ್ಡ ಮನುಷ್ಯನಾಗಿದ್ರೂ ಆತನನ್ನು ಜೈಲಲ್ಲಿಡುತ್ತೇವೆ’’ ಎಂದು ಎಚ್ಚರಿಸಿದರು.
‘‘ನಾವು ಮೂರು ತಿಂಗಳಿಂದ ರಾತ್ರಿ ಹಗಲು ಕೆಲಸ ಮಾಡುತ್ತಿದ್ದೇವೆ. ಊಟ, ತಿಂಡಿ ಬಿಟ್ಟು ಜನರ ಕಾಳಜಿಗಾಗಿ ದುಡಿಯುತ್ತಿದ್ದೇವೆ. ಆದರೆ ಮೊಸರಲ್ಲಿ ಕಲ್ಲು ಹುಡುಕುವುದು ಸರಿಯಲ್ಲ’’ ಎಂದು ಹೇಳಿದರು.ಕುಂದಾಪುರ ತಾ.ಪಂ ಸಭಾಂಗಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದ ಸಭೆಯಲ್ಲಿ ಮಾತನಾಡುವಾಗ ಜಿಲ್ಲಾಧಿಕಾರಿಯವರಿಂದ ಈ ಮಾತುಗಳು ಬಂದವು.
ಆರ್ಥಿಕ ಬೆಳವಣಿಗೆ ರೇಸ್​ನಿಂದ ಹಿಂದೆ ಸರಿದ ಚೀನಾ: 2020ಕ್ಕೆ ಜಿಡಿಪಿ ಗುರಿ ನಿಗದಿ ಇಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + fifteen =
Remember me
