ಬೆಂಗಳೂರು:ಹೊಸ ವರ್ಷದಲ್ಲಿ ಜೀ ಕನ್ನಡ ವಾಹಿನಿಯು ತನ್ನ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ‘ಡಾನ್ಸ್ ಕರ್ನಾಟಕ ಡಾನ್ಸ್’ ಶೋನ ಹೊಸ ಸೀಸನ್‌ ಪ್ರಸಾರ ಆರಂಭಿಸಿದ್ದು, ಇಂದು ಅಂದರೆ ಜ. 30ರಂದು ಪ್ರಸಾರವಾಗಲಿರುವ ಸಂಚಿಕೆ ಸಾಕಷ್ಟು ವಿಶೇಷಗಳನ್ನು ಹೊಂದಿದೆ.
ಕಳೆದೆರಡು ವಾರಗಳ ಹಿಂದೆಯೇ ಹೊಸ ಸೀಸನ್​ ಆರಂಭವಾಗಿದ್ದು, ಈ ಸಲವೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಇವರಲ್ಲಿ ಪ್ರತಿಯೊಬ್ಬರೂ ವಿಭಿನ್ನವಾಗಿದ್ದು, ಒಬ್ಬೊಬ್ಬರ ಹಿಂದೆಯೂ ಒಂದೊಂದು ವಿಶೇಷವಿದೆ, ಕಥೆ ಇದೆ, ವ್ಯಥೆ ಇದೆ. ಅವೆಲ್ಲದರ ಜೊತೆಗೆ ಗೆಲ್ಲಲೇಬೇಕು ಎಂಬ ಅದಮ್ಯ ಆಸಕ್ತಿ ಪ್ರತಿಯೊಬ್ಬರಲ್ಲೂ ಇದೆ.
ತೀರ್ಪುಗಾರರ ತಂಡಕ್ಕೆ ಮತ್ತಷ್ಟು ಪ್ರಕಾಶ:ಡಾನ್ಸ್ ಕರ್ನಾಟಕ ಡಾನ್ಸ್​ ಶೋನ ತೀರ್ಪುಗಾರರ ತಂಡದಲ್ಲಿ ಬೆಳ್ಳಿತೆರೆಯ ತಾರೆಯರಿರುವುದರಿಂದ ಈಗಾಗಲೇ ಅದು ಲಕಲಕ ಎನ್ನುತ್ತಿದ್ದು, ಇದೀಗ ಆ ತಂಡದ ಪ್ರಕಾಶ ಮತ್ತಷ್ಟು ಹೆಚ್ಚಾಗಿದೆ. ಏಕೆಂದರೆ ತೀರ್ಪುಗಾರರ ತಂಡದಲ್ಲಿನ ‘ಕ್ರೇಜಿ ಕ್ವೀನ್​’ ರಕ್ಷಿತಾ ಪ್ರೇಮ್​, ನಟ ವಿಜಯ್ ರಾಘವೇಂದ್ರ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಜತೆಗೆ ಹೊಸದಾಗಿ ಮತ್ತೊಬ್ಬರು ಸೇರಿಕೊಂಡಿದ್ದಾರೆ. ಅವರು ಮತ್ಯಾರೂ ಅಲ್ಲ.. ಭಾರತೀಯ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್​.
ವಾಕ್​-ಶ್ರವಣ ಸಮಸ್ಯೆ ಇರುವ ಚೈತ್ರಾಲಿ ರಿಷಿ ಸಿನಿಮಾದ ಬಾಂಗ್ರಾ ಗೀತೆಗೆ ಐದು ತೆರನಾಗಿ ನರ್ತಿಸಿ ಚಿತ್ತವನ್ನು ಸೆಳೆದಿದ್ದಾರೆ. ಇದೊಂದೇ ಗೀತೆಗೆ ಅವಳು ಭರತನಾಟ್ಯ, ಟಪಾಂಗುಚ್ಚಿ, ಯಕ್ಷಗಾನ, ಬಾಂಗ್ಡಾ ಮತ್ತು ಪಾಶ್ಚಾತ್ಯ ಪ್ರಕಾರಗಳಲ್ಲಿ ಹೆಜ್ಜೆ ಹಾಕಿದ್ದಲ್ಲದೆ ಗೋಲ್ಡನ್ ಹ್ಯಾಟ್​ಗೂ ಪಾತ್ರಳಾಗಿದ್ದಾರೆ.
ಸ್ಪರ್ಧಿ ರೋಶ್ನಿ ಮಿಸ್ ಕರ್ನಾಟಕ ಟೈಟಲ್ ಗಳಿಸಿದ ಹಿನ್ನೆಲೆಯಲ್ಲಿ ಡಾನ್ಸ್ ಕರ್ನಾಟಕ ಡಾನ್ಸ್​ ಶೋನ ವೇದಿಕೆಯಲ್ಲಿ ಆಕೆಯ ಕುಟುಂಬ ಸದಸ್ಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದರು.
ಸ್ಪರ್ಧಿಗಳಾದ ಇಬ್ರಾಹಿಂ ಪಾಷಾ ಹಾಗೂ ರೋಶ್ನಿ ಅವರು ‘ಚೆಂದುಟಿಯ ಪಕ್ಕದಲ್ಲಿ..’ ಎಂಬ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದ್ದಷ್ಟೇ ಅಲ್ಲದೆ ಗೋಲ್ಡನ್​ ಹ್ಯಾಟ್ ಹಾಗೂ ಸ್ಟ್ಯಾಂಡಿಂಗ್ ಒವೇಷನ್​ಗೂ ಭಾಜನರಾದರು.
‘ಐ ಕಾಂಟ್​ ವೇಟ್ ಬೇಬಿ..’ ಎಂಬ ಗೀತೆಗೆ ಸೂರ್ಯ ಹಾಗೂ ಅಮೂಲ್ಯ ಅವರ ಪರ್​ಫಾರ್ಮೆನ್ಸ್ ನೆರೆದವರ ಮನರಂಜಿಸಿ, ಫೈರ್ ಬ್ರ್ಯಾಂಡ್ ಪರ್​ಫಾರ್ಮೆನ್ಸ್ ಎಂದೆನಿಸಿಕೊಂಡಿತು. ಜತೆಗೆ ಗೋಲ್ಡನ್ ಹ್ಯಾಟ್ ಗೌರವಕ್ಕೂ ಪಾತ್ರವಾಯಿತು. ಸೂರ್ಯ ಅವರು ಅಬ್ಬಾಯಿ ನಾಯ್ಡು ಸ್ಟುಡಿಯೊದಲ್ಲಿ ನಡೆದ ಪ್ರತಿ ಶೂಟ್​ನಲ್ಲೂ ಆಡಿಯನ್ಸ್​ ಗ್ಯಾಲರಿಯಲ್ಲಿ ಕೂತು ಖುಷಿಪಟ್ಟರು.
ಪಾರ್ಟನರ್​ ರಾಹುಲ್ ಗಾಯಗೊಂಡಿದ್ದರಿಂದ ಸಾಕ್ಷಿ ಏಕಾಂಗಿಯಾಗಿ ಪ್ರದರ್ಶನ ನೀಡಬೇಕಾಯಿತು. ಆದರೂ ರಾಹುಲ್ ಚೆನ್ನಾಗಿದ್ದಿದ್ದರೆ ತಾವು ಹೇಗೆ ಪ್ರದರ್ಶನ ನೀಡುತ್ತಿದ್ದೆವು ಎಂಬ ಥೀಮ್​ನಲ್ಲೇ ಸಾಕ್ಷಿ ಸೋಲೋ ಪ್ರದರ್ಶನ ನೀಡಿ ಮನ ಗೆದ್ದರು. ಅಲ್ಲದೆ ಸ್ಪರ್ಧಿಗಳ ಗ್ಯಾಲರಿಯಲ್ಲಿ ಉಪಸ್ಥಿತರಿದ್ದ ರಾಹುಲ್​ಗೆ ಬೊಕ್ಕೆ ನೀಡಿದ ಸಾಕ್ಷಿ, ‘ವೀ ಮಿಸ್​ ಯೂ.. ಕಮ್ ಬ್ಯಾಕ್​ ಸೂನ್​..’ ಎಂಬ ಸಂದೇಶ ರವಾನಿಸಿ, ಪ್ರದರ್ಶನಕ್ಕೆ ಭಾವುಕತೆಯ ಸ್ಪರ್ಶ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
