ಬೆಂಗಳೂರು:ಹೊಸ ಸಿನಿಮಾಕ್ಕೆ ತಂಗಿ ಪಾತ್ರ ಮಾಡಲು ನಟಿ ಬೇಕಾಗಿದ್ದಾಳೆ. ಅದಕ್ಕಾಗಿ ಆಡಿಶನ್​ ಇದೆ ಎಂದು ನಂಬಿಸಿ ಕರೆದು ಅತ್ಯಾಚಾರ ಮಾಡಿದ ಡಾನ್ಸ್​ ಮಾಸ್ಟರ್​ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಡ್ಯಾನ್ಸ್ ಮಾಸ್ಟರ್ ಕನ್ನಡದ ಖ್ಯಾತ ರಿಯಾಲಿಟಿ ಶೋಗಳಿಗೆ ಕೊರಿಯೋಗ್ರಫರ್ ಆಗಿದ್ದ ಪವನ್. ಈತ ಕನ್ನಡದ ರಿಯಾಲಿಟಿ ಶೋಗಳಾದ ‘ಡಾನ್ಸ್ ಡಾನ್ಸ್..’ ‘ತಕಧಿಮಿತ…’ ‘ಕಿಕ್…’ ‘ಡಾನ್ಸಿಂಗ್ ಸ್ಟಾರ್…’ ಮತ್ತು ‘ಡಾನ್ಸ್ ಕರ್ನಾಟಕ ಡಾನ್ಸ್…” ಶೋಗಳಲ್ಲಿ ಕೊರಿಯೋಗ್ರಫರ್ ಆಗಿದ್ದ.
ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ ಡಾನ್ಸ್ ಕ್ಲಾಸ್ ನಡೆಸುತ್ತಿದ್ದ ಪವನ್, ಕಳೆದ ಮೂರು ವರ್ಷಗಳಿಂದ ಡಾನ್ಸ್ ಕಲಿಯುತ್ತಿದ್ದ ಸಂತ್ರಸ್ಥ ಯುವತಿಯನ್ನು ಕರೆಸಿ ಅತ್ಯಾಚಾರವೆಸಗಿದ್ದಾನೆ.
ಜನವರಿ 12ರಂದು ಸಂತ್ರಸ್ಥೆಗೆ ಡ್ಯಾನ್ಸ್ ಮಾಸ್ಟರ್ ಪವನ್, ಬೆಳಗ್ಗೆ 11ಕ್ಕೆ ಕರೆ ಮಾಡಿ ಸುದೀಪ್ ನಟಿಸುತ್ತಿರುವ ಹೊಸ ಚಿತ್ರಕ್ಕೆ ತಂಗಿ ಪಾತ್ರದ ಆಡಿಶನ್ ಇದೆ ಎಂದು ತನ್ನ ಡಾನ್ಸ್ ಕ್ಲಾಸಿಗೆ ಸಂತ್ರಸ್ಥ ಯುವತಿಯನ್ನ ಕರೆಸಿಕೊಂಡಿದ್ದಾನೆ.
ನಂತರ ಆತನ ಗೆಳೆಯನೊಬ್ಬನಿಗೆ ಕರೆ ಮಾಡಿ ನಿರ್ದೇಶಕನ ಸೋಗಿನಲ್ಲಿ ಯುವತಿಯ ಜತೆ ಮಾತನಾಡಿಸಿರೋ ಪವನ್, ನಂತರ ನೀನು ಸುದೀಪ್ ಸರ್ ಮುಂದಿನ ಚಿತ್ರಕ್ಕೆ ತಂಗಿ ಪಾತ್ರಕ್ಕೆ ಸೆಲೆಕ್ಟ್ ಆಗಿದ್ದೀಯ ಅಂತ ನಂಬಿಸಿದ್ದಾನೆ.
ನಂತರ ಡಾನ್ಸ್ ಕ್ಲಾಸ್​ನಲ್ಲಿ ಯುವತಿಗೆ ಮೊಬೈನ್​ನಲ್ಲಿ ಅಶ್ಲೀಲ ವಿಡಿಯೋ ತೋರಿಸಿದ್ದಾನೆ. ಮತ್ತು ಬರುವ ದ್ರಾವಣವನ್ನು ನೀರಲ್ಲಿ ಬೆರೆಸಿ ಯುವತಿಗೆ ಕುಡಿಸಿದ್ದಾನೆ.
ಕೆಲ ಹೊತ್ತಿನಲ್ಲೇ ಯುವತಿ ಪ್ರಜ್ಞೆ ತಪ್ಪಿದಾಗ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ಥೆ ಪಾಲಕರು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಆರೋಪಿಯನ್ನು ಬಂಧಿಸಿರುವ ಅನ್ನಪೂರ್ಣೇಶ್ವರಿನಗರ ಪೊಲೀಸರು ಜೈಲಿಗಟ್ಟಿದ್ದಾರೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + twenty =
Remember me
