ಮಂಗಳೂರು:ಸಿನಿಮಾ ನಂಟಿನ ಡ್ರಗ್ಸ್ ಜಾಲ ದೇಶವ್ಯಾಪಿ ಹರಡಿದ್ದು, ಮಂಗಳೂರಿನಲ್ಲಿ ಬಾಲಿವುಡ್​ನ ಉದಯೋನ್ಮುಖ ನಟ ಕಿಶೋರ್ ಅಮನ್ ಶೆಟ್ಟಿಯನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಸಾಗಾಟದ ಕಾರಣಕ್ಕೆ ಈತನನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಈತನ ಚಲನವಲನದ ಬಗ್ಗೆ ತೀವ್ರ ನಿಗಾ ಇರಿಸಿದ್ದ ಪೊಲೀಸರು, ಈತನ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಬಂಧನಕ್ಕೆ ಸಂಬಂಧಿಸಿದ ಇನ್ನಷ್ಟು ವಿವರಗಳು ಲಭ್ಯವಾಗಬೇಕಷ್ಟೆ.
ಇದನ್ನೂ ಓದಿ:ಜನರ ದನಿಯಾಗಲು ಜೆಡಿಎಸ್ ಕಸರತ್ತು: ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ಧತೆ
ಕಿಶೋರ್ ಅಮನ್ ಶೆಟ್ಟಿ ಯುವ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದು, ಎರಡನೇ ಆವೃತ್ತಿಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಶೋ ಮೂಲಕ ಜನಪ್ರಿಯತೆ ಗಳಿಸಿದಾತ. ಬಾಲಿವುಡ್​ನ ಎಬಿಸಿಡಿ ಸಿನಿಮಾದಲ್ಲಿ ನಟಿಸಿದ್ದ. ಹತ್ತನೇ ಕ್ಲಾಸ್ ವರೆಗೆ ಓದಿದ ಕಿಶೋರ್ ಮತ್ತು ಆತನ ಮೂವರು ಸಹೋದರರನ್ನು ತಾಯಿಯೇ ಸಾಕಿ ಬೆಳೆಸಿದ್ದು. ಸ್ವತಃ ಪರಿಶ್ರಮದಿಂದ ಡ್ಯಾನ್ಸರ್ ಆಗಿ ಬೆಳೆದ ವಿಚಾರವನ್ನುನೆಟ್​ವಿ4ಯುಎಂಬ ಜಾಲತಾಣದಲ್ಲಿನ ಲೇಖನ ಉಲ್ಲೇಖಿಸಿದೆ.
“ಆರ್​.ವಿ.ಯುವರಾಜ್ ಬಂದ್ರು ಅಂತ ಸಿಸಿಬಿ ಇನ್​ಸ್ಪೆಕ್ಟರ್​ಗೆ ಹೇಳಿ…”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
