ಬೆಂಗಳೂರು:ರಸ್ತೆ ಬದಿಯಲ್ಲಿ ಕಾರು ಪಾರ್ಕ್​ ಮಾಡಿ ಹೋದರೂ ನೆಮ್ಮದಿ ಆಗಿರುವಂತಿಲ್ಲ. ಏಕೆಂದರೆ ಇಲ್ಲೊಂದು ಖತರ್ನಾಕ್​ ಖದೀರಮರ ಗ್ಯಾಂಗ್ ಎಂಥದ್ದೇ ಕಾರನ್ನಾದರೂ ಕ್ಷಣಮಾತ್ರದಲ್ಲೇ ಕದ್ದೊಯ್ಯುತ್ತಿದೆ. ಮಾತ್ರವಲ್ಲ ಹಾಗೆ ಕದ್ದ ಕಾರುಗಳಲ್ಲೇ ಮನೆಗಳವನ್ನೂ ನಡೆಸುತ್ತಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ಎಂಟ್ರಿ ಕೊಟ್ಟಿರುವ ಈ ಗ್ಯಾಂಗ್ ಇಂಥ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದೆ.
ರಸ್ತೆ ಬದಿಯಲ್ಲಿ, ಜನಸಂದಣಿ ಕಡಿಮೆ ಇರುವ ಜಾಗಗಳಲ್ಲಿ ಪಾರ್ಕ್​ಮಾಡಲಾಗಿರುವ ಕಾರುಗಳನ್ನೇ ಗುರಿಯಾಗಿಸಿಕೊಳ್ಳುವ ಈ ರಾಜಸ್ಥಾನಿ ಗ್ಯಾಂಗ್, ಅದೆಂಥದ್ದೇ ಕಾರಾದರೂ ಸುಲಭದಲ್ಲಿ ಕಳವು ಮಾಡಿ ಬಿಡುತ್ತದೆ. ಬಳಿಕ ಕದ್ದ ಕಾರಿನಲ್ಲಿ ಬೆಂಗಳೂರಿನಲ್ಲಿ ರಾತ್ರಿ ಸಂಚಾರ ನಡೆಸುವ ಈ ಗ್ಯಾಂಗ್ ಹೊರವಲಯಲ್ಲಿ ಒಂಟಿಯಾಗಿರುವ ಅಥವಾ ಮನೆಯವರು ಹೊರಗೆ ಹೋಗಿರುವಂತೆ ಕಾಣಿಸುವ ಮನೆಗಳನ್ನು ಗುರಿಯಾಗಿಸಿ ಕಳವು ಮಾಡುತ್ತಾರೆ. ಒಂದು ದಿನವಿಡೀ ಹೀಗೆ ಮನೆಗಳನ್ನು ಹುಡುಕಾಡಿ ಗುರುತು ಮಾಡಿಕೊಳ್ಳುವ ಈ ತಂಡ ಮಾರನೆಯ ದಿನ ಅವುಗಳಲ್ಲಿ ಕೆಲವು ಮನೆಗಳಿಗೆ ಹೋಗಿ ಕಳವು ಮಾಡಿಬಿಡುತ್ತದೆ. ಹೀಗೆ ಎರಡು ಕಾರುಗಳನ್ನು ಕದ್ದು ಈಗಾಗಲೇ ಹತ್ತಾರು ಮನೆಗಳಲ್ಲಿ ಕಳ್ಳತನ ನಡೆಸಿರುವ ಈ ತಂಡ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದೆ.

ಬೆಂಗಳೂರಿನ ವಿಲ್ಸನ್ ಗಾರ್ಡನ್​ನಲ್ಲಿ ಮಾರುತಿ ಈಕೋ ಕಾರು ಕಳ್ಳತನ ಮಾಡಿರುವ ಈ ತಂಡ ವಿಲ್ಸನ್ ಗಾರ್ಡನ್​ನಲ್ಲಿ ಕಾರು ಕಳ್ಳತನ ಮಾಡಿರುವ ಹಾಗೂ ಬೆಂಗಳೂರಿನಲ್ಲಿ ತಿರುಗಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಲ್ಸನ್ ಗಾರ್ಡನ್, ಸಿಟಿ ಮಾರ್ಕೆಟ್ ಏರಿಯಾ ಸೇರಿ ಬೆಂಗಳೂರಿನ ಹಲವೆಡೆ ಮಾತ್ರವಲ್ಲದೆ ಹಾವೇರಿ- ದಾವಣಗೆರೆಯಲ್ಲೂ ಈ ತಂಡ ಕಳ್ಳತನ ಮಾಡಿದೆ. ಇಂಥ ಕಾರು ಹಾಗೂ ಮನೆಗಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿತೇಂದ್ರ ಕುಮಾರ್, ಪ್ರಕಾಶ್, ಅಮರರಾಮ್ ಮತ್ತು ರಮೇಶ್ ಕುಮಾರ್ ಎಂಬುವರನ್ನು ಬಂಧಿಸಿರುವ ಬೆಂಗಳೂರಿನ ಸಿಟಿ ಮಾರ್ಕೆಟ್ ಪೊಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಬಂಧಿತರಿಂದ 2 ಕಾರುಗಳ ಜತೆಗೆ 28 ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳನ್ನೂ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಅಲ್ಲದೆ ಕಳ್ಳತನಕ್ಕೆ, ಜನರನ್ನು ಬೆದರಿಸಲು ಇವರು ಬಳಸುತ್ತಿದ್ದ ಮಾರಕಾಸ್ತ್ರಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಅಯ್ಯೋ ಅಪ್ಪ… ಅಮ್ಮನೂ ಬದುಕಿಲ್ಲ, ಈಗ ನೀನು ಇಲ್ಲವಾದೆ…

ಕಬಡ್ಡಿ ಆಟಗಾತಿಯ ತಲೆಗೂದಲನ್ನೇ ಕತ್ತರಿಸಿದ್ರು, ಅವಳ ತಾಯಿ ಮೇಲೂ ಹಲ್ಲೆ ನಡೆಸಿದ್ರು; ಇದು ‘ಗಂಡ-ಹೆಂಡತಿ ಮತ್ತು ಅವನು’ ಕಥೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
