ಬೆಂಗಳೂರು:ಜಾಹೀರಾತು ನೀಡುವ ಬಗ್ಗೆ ಮಾತನಾಡುವ ಭರದಲ್ಲಿ ಸ್ಯಾಂಡಲ್​ವುಡ್​ ಸ್ಟಾರ್​ ದರ್ಶನ್​ ತೂಗುದೀಪ್​ ಅವರ ಬಗ್ಗೆ ಜಗ್ಗೇಶ್​ ಮಾತನಾಡಿರುವ ಆಡಿಯೋ ಎನ್ನಲಾದ ಆಡಿಯೋ ಕ್ಲಿಪ್​ ಒಂದು ಹರಿದಾಡಿದ್ದು, ಅದರಿಂದಲೇ ನವರಸ ನಾಯಕ ಜಗ್ಗೇಶ್​ ಪೇಚಿಗೆ ಸಿಲುಕುವಂತಾಗಿದೆ. ನೆಚ್ಚಿನ ನಾಯಕನ ಬಗ್ಗೆ ಕೆಟ್ಟದಾಗಿ ಮಾತನಾಡಿದ ಜಗ್ಗೇಶ್​ಗೆ ದರ್ಶನ್​ ಅಭಿಮಾನಿಗಳು ಸಿನಿಮಾ ಸೆಟ್​ನಲ್ಲೇ ಬೆವರಳಿಸಿದ್ದಾರೆ.
ಇತ್ತೀಚೆಗೆ ಜಗ್ಗೇಶ್​ ಅವರ ಧ್ವನಿ ಎನ್ನಲಾದ ಆಡಿಯೋ ಒಂದು ಹರಿದಾಡಿದೆ. ಅದರಲ್ಲಿ ಅವರು ದರ್ಶನ್​ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ರೆಕಾರ್ಡ್​ ಆಗಿದೆ. ಸಿನಿಮಾದ ನಿರ್ಮಾಪಕರೊಬ್ಬರೊಂದಿಗೆ ಜಗ್ಗೇಶ್​ ಮಾತನಾಡಿದ್ದ ಆ ಆಡಿಯೋ ಕ್ಲಿಪ್​ ದರ್ಶನ್​ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸದ್ಯ ಜಗ್ಗೇಶ್​ ಅವರು ತೋತಾಪುರಿ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಸಿನಿಮಾ ಸೆಟ್​ಗೆ ದಾಳಿಯಿಟ್ಟಿರುವ ದರ್ಶನ್​ ಅಭಿಮಾನಿಗಳು ಜಗ್ಗೇಶ್​ಗೆ ಮುತ್ತಿಗೆ ಹಾಕಿದ್ದಾರೆ. ಆದರೆ ಜಗ್ಗೇಶ್​ ಮಾತ್ರ ಆ ಆಡಿಯೋ ಕ್ಲಿಪ್​ನಲ್ಲಿರುವ ಧ್ವನಿ ತನ್ನದಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ. ತಾನು ದರ್ಶನ್​ ಹೆಸರಿನ ವೆಬ್​ ಡಿಸೈನರ್​ ಬಗ್ಗೆ ಮಾತನಾಡಿದ್ದು, ಅದನ್ನು ಎಡಿಟ್​ ಮಾಡಿ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ರಾಜಕೀಯ ಆರಂಭವಾಗಿದೆ. ಇದೊಂದು ದೊಡ್ಡ ಹುನ್ನಾರ ಎಂದು ಅವರು ಹೇಳಿರುವುದು ಕಂಡುಬಂದಿದೆ. (ದಿಗ್ವಿಜಯ ನ್ಯೂಸ್​)
ಡಿ ಬಾಸ್​ ಬಗ್ಗೆ ಮಾತನಾಡಿ ಸಮಸ್ಯೆ ಸಿಲುಕಿದ ಜಗ್ಗೇಶ್​?ಸ್ಯಾಂಡಲ್​ವುಡ್​ನ ಸ್ಟಾರ್​ ನಟ ದರ್ಶನ್​ ಬಗ್ಗೆ ಜಗ್ಗೇಶ್​ ಮಾತನಾಡಿರುವ ಆಡಿಯೋ ಕ್ಲಿಪ್​ ಎಂದು ಒಂದು ಆಡಿಯೋ ಕ್ಲಿಪ್​ ಹರಿದಾಡುತ್ತಿದ್ದಂತೆಯೇ ಡಿ ಬಾಸ್​ ಅಭಿಮಾನಿಗಳು ಜಗ್ಗೇಶ್​ ಅಭಿನಯದ ತೋತಾಪುರಿ ಸಿನಿಮಾ ಸೆಟ್​ಗೆ ತೆರಳಿ ಜಗ್ಗೇಶ್​ಗೆ ಧಮಕಿ ಹಾಕಿರುವ ದೃಶ್ಯವಿದು…pic.twitter.com/BpMlovSETN
— Vijayavani (@VVani4U)February 22, 2021

‘ನನ್ನ ಹೆಸರಲ್ಲೇ ರಾಮನಿದ್ದಾನೆ… ನಾನು ಅಯೋಧ್ಯೆಯ ರಾಮಮಂದಿರಕ್ಕೆ ದುಡ್ಡು ಕೊಡಲ್ಲ, ನಮ್ಮೂರಿನ ರಾಮ ಮಂದಿರಕ್ಕೆ ಕೊಡ್ತೀನಿ’

ಮನೆ ಮುಂದೆ ಪಾತ್ರೆ ತೊಳೆಯುತ್ತಿದ್ದ ಮಗಳನ್ನೇ ಕೊಚ್ಚಿ ಕೊಂದ ತಂದೆ: ಪುತ್ರಿ ಮೇಲಿದ್ದ ಕೋಪವಾದ್ರು ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
