ಬೆಂಗಳೂರು: ಕೊಲೆ ಪ್ರಕರಣವೊಂದರಲ್ಲಿ ನಟ ದರ್ಶನ್‌ರನ್ನು ಪೊಲೀಸರು ಇಂದು ಮುಂಜಾನೆ ಮೈಸೂರಿನಲ್ಲಿ ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆ ತಂದಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಾದ ಮೃತ ದುರ್ದೈವಿ. ದರ್ಶನ್‌ ಕೊಲೆ ಆರೋಪ ಹೊತ್ತಿರುವ ಆರೋಪಿ. ಚಿತ್ರದುರ್ಗ ನಗರದ VRS ಬಡಾವಣೆಯ ರೇಣುಕಾ ಸ್ವಾಮಿ ಅವರು ಕಳೆದ 1 ವರ್ಷದ ಹಿಂದಷ್ಟೇ ಮದುವೆಯಾಗಿದ್ದರು.
ಕಳೆದ 3-4 ವರ್ಷಗಳಿಂದ ಖಾಸಗಿ ಔಷಧ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ರೇಣುಕಾ ಸ್ವಾಮಿ ಪತ್ನಿ ಸಹನಾ ಸದ್ಯ 5 ತಿಂಗಳ ಗರ್ಭಿಣಿಯಾಗಿದ್ದು, ಪತಿಯ ಹತ್ಯೆ ವಿಚಾರ ಇನ್ನೂ ತಿಳಿದಿಲ್ಲ.
ಶನಿವಾರ ಬೆಳಗ್ಗೆ 10 ಗಂಟೆಗೆ ಚಿತ್ರದುರ್ಗದಿಂದ ರೇಣುಕಾ ಸ್ವಾಮಿ ತೆರಳಿದ್ದು, ಅವರ ಬೈಕ್ ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ಬಾಲಾಜಿ ಬಾರ್ ಬಳಿ ಪತ್ತೆಯಾಗಿತ್ತು. ನಿನ್ನೆ ಮಧ್ಯಾಹ್ನ ಕಾಮಾಕ್ಷಿಪಾಳ್ಯ ಪೊಲೀಸರು ಪೋಷಕರಿಗೆ ಕರೆ ಮಾಡಿದ್ದರು.
ಕೊಲೆ ಪ್ರಕರಣವೊಂದರಲ್ಲಿ ನಟ ದರ್ಶನ್‌ರನ್ನು ಪೊಲೀಸರು ಇಂದು ಮುಂಜಾನೆ ಮೈಸೂರಿನಲ್ಲಿ ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆ ತಂದಿದ್ದಾರೆ. ನಟ ದರ್ಶನ್ ಬಂಧನ ಇಡೀ ಸ್ಯಾಂಡಲ್‌ವುಡ್ ಅನ್ನೇ ಬೆಚ್ಚಿ ಬೀಳಿಸಿದ್ದು, ಆದರೆ ಈ ಕೊಲೆ ಪ್ರಕರಣದ ಕಾರಣ ಮಾತ್ರ ಜನರನ್ನು ಬೆಚ್ಚಿ ಬೀಳಿಸಿದೆ.ಮಾಹಿತಿ ಪ್ರಕಾರ ಮೃತ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದಿರೋ ಹಿನ್ನೆಲೆಯಲ್ಲಿ ರೇಣುಕಾ ಸ್ವಾಮಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದ್ದು, ಆ ಬಳಿಕ ಆರ್ ಆರ್ ನಗರದಿಂದ ಕಾಮಾಕ್ಷಿಪಾಳ್ಯಕ್ಕೆ ತಂದು ಮೃತದೇಹವನ್ನು ಮೋರಿಗೆ ಎಸೆದಿದ್ದಾರೆ. ನಿನ್ನೆ‌ ಬೆಳಗ್ಗೆ ಮೃತದೇಹ ಸಿಕ್ಕಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:12 − six =
Remember me
