ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳಿಗೆ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದೆ. ಜುಲೈ 4ರವರೆಗೆ ನಟ ದರ್ಶನ್​ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯಬೇಕಿದೆ.  ಈ ವಿಚಾರವಾಗಿ ದಚ್ಚು ಅಭಿಮಾನಿಗಳು ಕೊಂಚ ಆತಂಕಕ್ಕೆ ಇಡಾಗಿದ್ದಾರೆ. ಈ  ಸುದ್ದಿ ಬೆನ್ನಲ್ಲೇ ಈಗ ದರ್ಶನ್ ಅಭಿಮಾನಿಯೊಬ್ಬನನ್ನು ಪೊಲೀಸರು ಅರೆಸ್ಟ್​​ ಮಾಡಿದ್ದಾರೆ ಎನ್ನಲಾಗಿದೆ.
ಚೇತನ್ ಬಂಧನಕ್ಕೊಳಗಾದ ದರ್ಶನ್​ ಅಭಿಮಾನಿ. ಬಸವೇಶ್ವರ ನಗರ ಪೊಲೀಸರು ದರ್ಶನ್ ಅಭಿಮಾನಿ ಚೇತನ್​ನನ್ನು ಬೆದರಿಕೆ ಮತ್ತು ಪ್ರಚೋದನೆ ಆರೋಪದ ಮೇಲೆ ಬಂಧಿಸಿದ್ದಾರೆ. ನಿರ್ಮಾಪಕ ಉಮಾಪತಿ ವಿರುದ್ದ ದರ್ಶನ್ ಅಭಿಮಾನಿಗಳಿಗೆ ಪ್ರಚೋದನೆ ಮಾಡಿದ್ದ ಆರೋಪದ ಹಿನ್ನೆಲೆ ಐಪಿಸಿ ಸೆಕ್ಷನ್ 504, 506 ಅಡಿ ಎಫ್ಐಆರ್ ದಾಖಲಿಸಿ ಬಂಧಿಸಲಾಗಿದೆ.
ಚೇತನ್ ಸೋಷಿಯಲ್ ಮೀಡಿಯಾ ಮೂಲಕವಾಗಿ ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದ. ಜತೆಗೆ ದರ್ಶನ್ ಅಭಿಮಾ‌ನಿಗಳಿಗೆಪ್ರಚೋದನೆ ಮಾಡಿದ್ದ. ಜತೆಗೆ ಉಮಾಪತಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಚೇತನ್.
ಬೆದರಿಕೆ ಹಾಕಿದ್ದ ಯುವಕನ ಬಗ್ಗೆ  ನಿರ್ಮಾಪಕ ಉಮಾಪತಿ ಗೌಡ ದೂರು ನೀಡಿದ್ದರು.  ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಚೇತನ್​​ ಬಂಧನ ಮಾಡಿದ್ದಾರೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:1 + fifteen =
Remember me
