ಬೆಂಗಳೂರು:ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಸಹಚರರು ಜೈಲು ಸೇರಿ ಎರಡು ತಿಂಗಳಾಗುತ್ತ ಬಂದಿದ್ದು, ನಿಜಜೀವನದಲ್ಲಿ ಅನೇಕರಿಗೆ ಮಾದರಿಯಾಗಬೇಕಿದ್ದ ಸ್ಟಾರ್​ನಟನ ಈ ಹೀನ ಕೃತ್ಯ ತಲೆತಗ್ಗಿಸುವಂತೆ ಮಾಡಿದ್ದು, ಇದರ ಹೊರತಾಗಿಯೂ ಅಭಿಮಾನಿಗಳು ನೆಚ್ಚಿನ ನಟನ ಬೆಂಬಲಕ್ಕೆ ನಿಂತಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ. ದಾಸ ಆದಷ್ಟು ಬೇಗ ಹೊರಬರಲಿ ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುವ ಅಭಿಮಾನಿಗಳು ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದು, ಈ ಅತಿರೇಕದ ವರ್ತನೆಗೆ ಹಲವರು ಕಿಡಿಕಾರಿದ್ದಾರೆ.
ಸಾಮಾನ್ಯವಾಗಿ ನಾವು ನೋಡಿದಂತೆ ಜನರು ತಮ್ಮ ನೆಚ್ಚಿನ ನಟ-ನಟಿಯರ ಹೆಸರು ಹಾಗೂ ಫೋಟೋವನ್ನ ಕೈ ಮೇಲೆ, ಎದೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನ, ಪ್ರೀತಿಯನ್ನು ತೋರ್ಪಡಿಸುತ್ತಾರೆ. ಆದರ, ಇಲ್ಲೊಬ್ಬ ಅಭಿಮಾನಿ ಡಿ ಬಾಸ್​ ಎಂದು ತನ್ನ ಹಣೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಅಭಿಮಾನಿಯ ನಡೆಗೆ ಕಿಡಿಕಾರಿದ್ದಾರೆ.
Darshan fans tattoo craze 🔥#dboss#darshan#sandalwood#kannadapic.twitter.com/SjBwE2Tukp
ಇದನ್ನೂ ಓದಿ:ಸೆಮಿಫೈನಲ್​ಗೂ ಮುನ್ನ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡಕ್ಕೆ ಆಘಾತ; ಪ್ರಮುಖ ಆಟಗಾರನನ್ನು ನಿಷೇಧಿಸಿದ FIH
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಪರಪ್ಪನ ಅಗ್ರಹಾರ ಸೇರಿದ ಬಳಿಕ ಅವರಿಗೆ ನೀಡಲಾಗಿರುವ ಖೈದಿ ಸಂಖ್ಯೆಯನ್ನು ಅಭಿಮಾನಿಗಳು ಕೈ, ಕುತ್ತಿಗೆ, ಎದೆ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ.ಕೆಲವರು ತಾವು ಖರೀದಿಸುವ ಹೊಸ ಗಾಡಿ ಸಂಖ್ಯೆಯೂ 6106 ಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದೆಲ್ಲದರ ನಡುವೆ ಒಂದು ಹೆಜ್ಜೆ ಮುಂದೆ ಹೋಗಿರುವ ಅಭಿಮಾನಿ ತನ್ನ ಹಣೆಯ ಮೇಲೆ ಡಿ ಬಾಸ್​ ಎಂದು ಟ್ಯಾಟೂ ಹಾಕಿಸಿಕೊಂಡಿದ್ದು, ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.
ಕನ್ನಡ ಬಾಕ್ಸ್ ಆಫೀಸ್​ ಎಂಬ ಟ್ವಿಟರ್​ ಪೇಜ್​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಲಕ್ಷಕ್ಕೂ ಅಧಿಕ ವೀವ್ಸ್​ ಪಡೆದುಕೊಂಡಿದೆ. ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಕಿಡಿಕಾರಿ ಕಮೆಂಟ್​ ಮಾಡಿರುವ ನೆಟ್ಟಿಗರು, ತಂದೆ-ತಾಯಿ ಹೆಸರನ್ನಾದರೂ ಹಾಕಿಸಿಕೊಂಡಿದರೆ ಪುಣ್ಯ ಬರುತ್ತಿತ್ತು. ಅದನ್ನ ಬಿಟ್ಟು ಇದ್ಯಾವ ಕರ್ಮ ಎಂದು ಕಮೆಂಟ್​ ಮಾಡಿ ಕಿಡಿಕಾರಿದ್ದಾರೆ.

Karunada Adhipati DBoss (@karunada_adhipati_official) 分享的帖子
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − eight =
Remember me
