ಬೆಂಗಳೂರು:ನಟ ದರ್ಶನ್​ ಪ್ರಾಣಿ ಪ್ರಿಯರು. ಸಮಯ ಸಿಕ್ಕಾಗೆಲ್ಲ ಅಭಯಾರಣ್ಯಗಳಿಗೆ ತೆರಳಿ ಪ್ರಾಣಿಗಳ ಫೋಟೋ ಕ್ಲಿಕ್ಕಿಸುವ ನಟ ತಮ್ಮ ಮನೆಯಲ್ಲಿಯೂ ಸಹ ಅನೇಕ ಪ್ರಾಣಿಗಳನ್ನು ಸಾಕಿ ಸಲಹುತ್ತಿದ್ದಾರೆ. ನಟ ಪ್ರಾಣಿಗಳನ್ನು ಮಕ್ಕಳಂತೆ ಸಾಕುತ್ತಿದ್ದರೆ ಅವರ ಅಭಿಮಾನಿಗಳಲ್ಲೊಬ್ಬ ಮಾತ್ರ ಅದೇ ಪ್ರಾಣಿಗಳನ್ನು ಮನಸೋ ಇಚ್ಛೆ ಹಿಂಸಿಸುತ್ತಿದ್ದಾನೆ.
ಆಟೋ ಚಾಲಕನಾಗಿರುವ ರುದ್ರೇಶ್​ ಹೆಸರಿನ ದರ್ಶನ್​ ಅಭಿಮಾನಿಯೊಬ್ಬ ತನ್ನ ಆಟೋದ ಹಿಂದೆ ದರ್ಶನ್​ ಫೋಟೋ ಹಾಕಿಸಿಕೊಂಡಿದ್ದು, ಅದಕ್ಕೆ ಹಾವಿನ ಮಾಲೆ ಹಾಕುವ ಮೂಲಕ ಹುಚ್ಚಾಟ ಮೆರೆದಿದ್ದಾನೆ. ಕೇರೆ ಹಾವೊಂದರ ಬಾಲ ಮತ್ತು ತಲೆಯನ್ನು ಹಿಡಿದುಕೊಂಡು ಅದನ್ನು ದರ್ಶನ್​ ಫೋಟೋಕ್ಕೆ ಹಾಕುತ್ತಿರುವಂತೆ ವಿಡಿಯೋ ಮಾಡಿದ್ದು ಅದನ್ನು ಇನ್ಸ್ಸಾಗ್ರಾಮ್​ನಲ್ಲಿ ದರ್ಶನ್​ ಅಭಿಮಾನಿಗಳ ಪೇಜ್​ ಒಂದರಲ್ಲಿ ಹಾಕಲಾಗಿದೆ. ಫ್ಯಾನ್​ ಕ್ರೇಜ್​ ಎನ್ನುವ ಕ್ಯಾಪ್ಷನ್​ನೊಂದಿಗೆ ಹಾಕಲಾಗಿರುವ ಈ ವಿಡಿಯೋ ಬಗ್ಗೆ ಅನೇಕರು ಆಕ್ರೋಷ ವ್ಯಕ್ತ ಪಡಿಸುತ್ತಿದ್ದಾರೆ.
1972ರ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯ ಕೇರೆ ಹಾವು ಸಂರಕ್ಷಿಸಲ್ಪಟ್ಟ ಜೀವಿಯಾಗಿದೆ. ಹಾಗಿರುವಾಗ ಆ ಹಾವನ್ನು ಈ ರೀತಿಯಲ್ಲಿ ಹಿಂಸಿಸುತ್ತಿರುವುದು ಶಿಕ್ಷಾರ್ಹ ಅಪರಾಧ ಎಂದು ನೆಟ್ಟಿಗರು ಹೇಳುತ್ತಿದ್ದು ಈ ವಿಚಾರವಾಗಿ ದೂರು ನೀಡಲು ವನ್ಯ ಜೀವಿ ಪ್ರೇಮಿ ರಾಜೇಶ್​ ಮುಂದಾಗಿದ್ದಾರೆ.
ಈ ಹಿಂದೆ ನಟ ದರ್ಶನ್​ ಸಾರ್ವಜನಿಕರಲ್ಲಿ ಹಾವುಗಳನ್ನು ಸಂರಕ್ಷಿಸುವಂತೆ ಕೇಳಿಕೊಂಡಿದ್ದರು. ನಾವೆಲ್ಲರೂ ಆಹಾರ ಸರಪಳಿಯಲ್ಲಿ ಒಬ್ಬರಿಗೊಬ್ಬರು ಅವಲಂಬಿತರಾಗಿದ್ದೇವೆ. ಹಾವಿದ್ದರೆ ಮಾತ್ರ ಮನುಷ್ಯ ಇರಲು ಸಾಧ್ಯ. ನಿಮ್ಮ ಮನೆ ಹತ್ತಿರ ಅಥವಾ ರಸ್ತೆಯಲ್ಲಿ ಹಾವು ಕಂಡರೆ ಅದನ್ನು ಸಾಯುಸಬೇಡಿ, ಹಿಂಸಿಸಬೇಡಿ ಎಂದು ನಟ ಮನವಿ ಮಾಡಿಕೊಂಡಿದ್ದರು.
https://www.instagram.com/p/B9t_5dag8qm/?utm_source=ig_web_button_share_sheet
ಬೇರೆಯವರ ಕೈ ದಾನ ಪಡೆದು ದೇಹಕ್ಕೆ ಜೋಡಿಸಿಕೊಂಡ ಯುವತಿಯ ಕೈಗಳಲ್ಲಿ ಪವಾಡ! ಶಾಕ್​ ಆದ ವೈದ್ಯರು

ಮತ್ತೆ ಏರಿತು ಕರೊನಾ ಸೋಂಕಿತರ ಸಂಖ್ಯೆ; 107 ಜನರಲ್ಲಿ ಸೋಂಕು ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + seventeen =
Remember me
