ಬೆಂಗಳೂರು:ಸ್ಯಾಂಡಲ್​ವುಡ್​​ ನಟ ದರ್ಶನ್​ ಪ್ರಾಣಿಗಳ ಕುರಿತಾಗಿ ವಿಶೇಷ ಕಾಳಜಿ ಮತ್ತು ಅಕ್ಕರೆ, ಇದೇ ಕಾರಣಕ್ಕೆ ಕುದುರೆ, ಹಸು, ಎತ್ತು ಸೇರಿದಂತೆ ಹಲವು ಪ್ರಾಣಿಗಳನ್ನು ಸಾಕಿದ್ದಾರೆ. ಅರಣ್ಯಕ್ಕೆ ತೆರಳಿ ವನ್ಯಜೀವಿಗಳ ಛಾಯಾಗ್ರಹಣದಲ್ಲಿ ತೊಡಗುತ್ತಾರೆ. ಅವರು ತೆಗೆದ ವನ್ಯಜೀವಿಗಳ ಚಿತ್ರಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಅರಣ್ಯ ಇಲಾಖೆಗೆ ನೀಡುತ್ತಾರೆ. ಆ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಕಾಣ್ಕೆ ನೀಡುತ್ತಾರೆ.
ನಟ ದರ್ಶನ್ ಪ್ರಾಣಿ ಪಕ್ಷಿಗಳನ್ನು ಶೋಕಿಗಾಗಿ ಸಾಕುವವರಲ್ಲ. ಪ್ರಾಣಿ, ಪಕ್ಷಿಗಳ ಪಾಲನೆಯಲ್ಲಿ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.
ನಟ ದರ್ಶನ್​ ಬಲ ಕೈಗೆ ಸರ್ಜರಿ ಆಗಿದೆ. ಇನ್ನು ಒಂದು ತಿಂಗಳು ಶೂಟಿಂಗ್​ ಹೋಗದೇ ಕಂಪ್ಲೀಟ್ ಆಗಿ ರೆಸ್ಟ್​ ಮಾಡಿ ಅಂತ ಡಾಕ್ಟರ್ ಹೇಳಿದ್ದಾರೆ. ಹೀಗಾಗಿ ದರ್ಶನ್ ನಟನೆಯ ಡೆವಿಲ್ ಸಿನಿಮಾ ಶೂಟಿಂಗ್ ಮುಂದಕ್ಕೆ ಹೋಗಿದೆ. ಮುಂದಿನ ತಿಂಗಳು 15ರ ನಂತರ ಡೆವಿಲ್ ಚಿತ್ರೀಕರಣಕ್ಕೆ ದರ್ಶನ್ ಹೋಗಲಿದ್ದಾರೆ.
When not shooting,@dasadarshanindulges in his true passion:#farming. Despite still recovering from a hand injury, the#DBossof his#celebritiestirelessly prepares feed for the#animalsat his farmhouse.#AnimalLover#DevilTheHeropic.twitter.com/Cn9Gph0HHw
— A Sharadhaa (@sharadasrinidhi)May 10, 2024

ಸಿನಿಮಾ ಶೂಟಿಂಗ್​ ರೆಜೆಯಲ್ಲಿರೋ ದರ್ಶನ್ ಕಾರ್ಯಕ್ರಮಗಳಿಗೆ ಬೇಟಿ ಕೊಡುತ್ತಿದ್ರು. ಈಗ ತನ್ನ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ತನ್ನ ಫಾರ್ಮ್ ಹೌಸ್​ನಲ್ಲಿ ಕಾಲ ಕಳೆಯುತ್ತಿರೋ ನಟ ದರ್ಶನ್ ತನ್ನ ಹುಸುಗಳಿಗೆ ಮೇವು ಸಿದ್ಧಪಡಿಸಿದ್ದಾರೆ. ಆ ವೀಡಿಯೋ ಈಗ ವೈರಲ್ ಆಗುತ್ತಿದೆ.
ಫಾರ್ಮ್ ಹೌಸ್​ನಲ್ಲಿ ತನ್ನ ಹುಸುಗಳಿಗೆ ಮೇವು ಸಿದ್ಧಪಡಿಸಿದ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಶ್ರೀದೇವಿ ಸಾಯುವ ಮುನ್ನ ಕೊನೆಯದಾಗಿ ಪ್ರಯಾಣಿಸಿದ ರಸ್ತೆಗೆ ಆಕೆಯ ಹೆಸರನ್ನು ಇಡಲಾಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
