ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಭೀಕರ ಹತ್ಯೆ ಪ್ರಕರಣದಲ್ಲಿ ಸದ್ಯ ಕಳೆದ ಎರಡು ತಿಂಗಳಿನಿಂದ ಪರಪ್ಪನ ಜೈಲು ಸೇರಿರುವ ಎ2 ಆರೋಪಿ ನಟ ದರ್ಶನ್​, ಇದೀಗ ಇತರೆ ರೌಡಿಗಳ ಜತೆ ಜೈಲಿನೊಳಗೆ ಒಂದು ಕೈನಲ್ಲಿ ಕಾಫಿ ಲೋಟ ಹಾಗೂ ಮತ್ತೊಂದು ಕೈಯಲ್ಲಿ ಸಿಗರೇಟ್​ ತುಂಡು ಹಿಡಿದಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಹಲವರ ಆಕ್ರೋಶಕ್ಕೆ ಗುರಿಯಾಗಿದೆ. ಒಬ್ಬ ಖೈದಿಗೆ ಸೆರೆಮನೆಯಲ್ಲಿ ಇಂತಹ ರಾಜಾತಿಥ್ಯ ಇದೆ ಅಂದಮೇಲೆ ಆತನಿಗೆ ಶಿಕ್ಷೆಯ ಅರ್ಥ ಹೇಗೆ ತಿಳಿಯುತ್ತದೆ ಎಂದು ಕೆಲವರು ಜಾಲತಾಣಗಳಲ್ಲಿ ಅಭಿಪ್ರಾಯಿಸಿದ್ದಾರೆ.
ಇದನ್ನೂ ಓದಿ:ಕಾವ್ಯದ ಮೂಲಕ ಸಮಾಜದ ತಾರತಮ್ಯ ಅನಾವರಣಗೊಳ್ಳಬೇಕು: ಡಾ. ಎಚ್.ಎಲ್. ಪುಷ್ಪ

Murder accused actor#Darshangets VIP treatment at Parappana Agrahara central prison?!
If true, this just reinforces how rich & affluent criminals get treated differently within the same four walls of prison. Hierarchy even in jail, wahpic.twitter.com/ZuyfA3KDF8
— Nabila Jamal (@nabilajamal_)August 25, 2024
ಅಸಲಿಗೆ ವೈರಲ್ ಆದ ಈ ಫೋಟೋ ​ ಕ್ಲಿಕ್ಕಿಸಿದ್ದು ಯಾರು ಎಂಬ ಪ್ರಶ್ನೆ ಇದೀಗ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಸದ್ಯದ ಮಟ್ಟಿಗೆ ಇದಕ್ಕೆ ಉತ್ತರ ಸಿಕ್ಕಿಲ್ಲ. ಇನ್ನು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಬಂಧಿತರಾಗಿರುವ ದರ್ಶನ್​, ಬೆಂಗಳೂರಿನ ರೌಡಿ ಶೀಟರ್‌ ವಿಲ್ಸನ್ ಗಾರ್ಡನ್ ನಾಗನ ಜತೆಗೆ ಕುಳಿತು ಬಹಳ ಆರಾಮದಾಯಕವಾಗಿ ಸಿಗರೇಟ್‌ ಸೇದುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ. ತಮಗೆ ತಪ್ಪಿನ ಅರಿವು ಕಾಡುತ್ತಿಲ್ಲವೇ? ಯಾವ ಆಧಾರದ ಮೇಲೆ ದರ್ಶನ್​ ಇಷ್ಟೊಂದು ಧೈರ್ಯವಾಗಿದ್ದಾರೆ? ಇದನ್ನು ನೋಡಿದ್ರೆ ಜೈಲಿಗೂ, ಮನೆಗೂ ಯಾವ ವ್ಯತ್ಯಾಸವು ಕಂಡುಬರುತ್ತಿಲ್ಲ ಎಂದು ಅನೇಕರು ಜಾಲತಾಣಗಳಲ್ಲಿ ಕಮೆಂಟ್ ಮುಖೇನ ಕಿಡಿಕಾರಿದ್ದಾರೆ.
Looks like Parappana Agrahara has become a Resort.pic.twitter.com/jxBv7mvRvi
— 👑Che_ಕೃಷ್ಣ🇮🇳💛❤️ (@ChekrishnaCk)August 25, 2024
ಇದು ನೀವೇನಾ? ಟೀಕೆಗಳ ಬೆನ್ನಲ್ಲೇ ಫೋಟೋ ಡಿಲೀಟ್​! ಗುರುತು ಸಿಗದಷ್ಟು ಬದಲಾಗಿದ್ದಾರೆ ಈ ಸ್ಟಾರ್​ ಬ್ಯೂಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
