ಬೆಂಗಳೂರು:ಅ.17ರಂದು ನವರಾತ್ರಿ ಆರಂಭವಾಗಿದ್ದು, ಕರೊನಾ ಆತಂಕದ ನಡುವೆಯೂ ನಾಡಿನೆಲ್ಲೆಡೆ ದಸರಾ ಸಂಭ್ರಮ ಕಳೆಗಟ್ಟಿದೆ. ನವರಾತ್ರಿಯ ಮೊದಲ ದಿನವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ, ಗಾಯಗೊಂಡಿರುವ ಲಕ್ಷ್ಮೀ ದೇವರ ಫೋಟೋವನ್ನು ತನ್ನ ಟ್ವಿಟರ್​ನಲ್ಲಿ ಅಪ್ಲೌಡ್​ ಮಾಡಿಕೊಂಡದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಫೋಟೋ ಹಾಕಿದ ವಿಜಯಲಕ್ಷ್ಮೀ ವಿರುದ್ಧ ಕೆಲ ನೆಟ್ಟಿಗರು ಕಿಡಿಕಾರಿದ್ದರೂ ಹಲವರು ಸಮ್ಮತಿ ಸೂಚಿಸಿದ್ದಾರೆ. ನಾಡಹಬ್ಬ ದಸರಾ ಆರಂಭದ ದಿನವೇ ವಿಜಯಲಕ್ಷ್ಮೀ ಅವರು ಗಾಯಗೊಂಡಿರುವ ಲಕ್ಷ್ಮೀ ಫೋಟೋವನ್ನು ಹಾಕಿದ್ದ ಉದ್ದೇಶ ಏನು ಗೊತ್ತಾ?
ಭಾರತವನ್ನು ಭಾರತಾಂಬೆ, ಕರ್ನಾಟಕವನ್ನು ಕನ್ನಡಾಂಬೆಗೆ ಹೋಲಿಸಲಾಗಿದೆ. ಆ ಮೂಲಕ ನಮ್ಮ ದೇಶದಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ಆದರೂ ಹೆಣ್ಣಿನ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಿತ್ಯ ಅತ್ಯಾಚಾರ, ಹಲ್ಲೆ, ಹತ್ಯೆಯಂತಹ ಘಟನೆ ಆಘಾತ ನೀಡುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಗಾಯಗೊಂಡಿರುವ ಲಕ್ಷ್ಮೀ ದೇವರ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡ ವಿಜಯಲಕ್ಷ್ಮೀ, ‘ದೇಶದಲ್ಲಿ ಮಹಿಳೆಯರ ಮೇಲೆಯೇ ಹೆಚ್ಚು ಅಪರಾಧ ನಡೆಯುತ್ತಿದೆ. ಆದರೂ ಈ 9 ದಿನ ಮಹಿಳೆಗೆ ಪೂಜೆ ಮಾಡುತ್ತೇವೆ. ಇದು ಕಹಿ ಸತ್ಯ’ ಎಂದಿದ್ದಾರೆ. ಆ ಮೂಲಕ ದೇಶದಲ್ಲಿ ಮಹಿಳೆಯರ ಮೇಲೆ ನೆಡೆಯುತ್ತಿರುವ ದೌರ್ಜನ್ಯದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈ ಫೋಟೋಗೆ ಹಲವರು ಕಮೆಂಟ್ಸ್​ ಮಾಡಿದ್ದು, ‘ಮಹಿಳೆಯ ಬೆಲೆ ಕೆಲವರಿಗೆ ತಿಳಿದಿಲ್ಲ. ನಮ್ಮ ಭರತಖಂಡದಲ್ಲಿ ಹಿಂದುಗಳು ಸಾವಿರಾರು ವರ್ಷದಿಂದ ಮಹಿಳೆಗೆ ದೇವರ ಸ್ಥಾನ ಕೊಟ್ಟಿದ್ದಾರೆ. ಮಹಿಳೆಯರಿಗೆ ಗೌರವ ಕೊಡುತ್ತಿದ್ದೇವೆ. ಬೇರೆ ದೇಶಗಳಲ್ಲಿ, ಬೇರೆ ಧರ್ಮಗಳಲ್ಲಿ ಮಹಿಳೆಯರಿಗೆ ಗೌರವ ಕೊಡುವುದನ್ನು ನೀವು ತೋರಿಸಿ’ ಎಂದು ಸವಾಲು ಹಾಕಿದ್ದಾರೆ. ಇನ್ನು ಕೆಲವರು ‘ದೌರ್ಜನ್ಯ ಮಾಡುವವರ ವಿರುದ್ಧ ಹೋರಾಡಿ, ಬೇಡ ಎಂದವರು ಯಾರು? ಪ್ರಚಾರಕ್ಕಾಗಿ ಹಿಂದೂ ದೇವರ ಫೋಟೋ ಬಳಸಿದ್ದು ತಪ್ಪು, ಕ್ಷಮೆ ಕೇಳಿ’ ಎಂದು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ವಿಜಯಲಕ್ಷ್ಮೀ ಟ್ವೀಟ್‌ಗೆ ಪರ-ವಿರೋಧ ಪ್ರತಿಕ್ರಿಯೆ ಬಂದಿದ್ದು, ಸದ್ಯ ಆ ಫೋಟೋ ಡಿಲೀಟ್​ ಆಗಿದೆ.ದರ್ಶನ್ ಪತ್ನಿ ವಿಜಯಲಕ್ಷ್ಮೀ ಇತ್ತೀಚೆಗೆ ಉದ್ಯಮವೊಂದನ್ನು ಶುರು ಮಾಡಿದ್ದು, ನೈಸರ್ಗಿಕ ಆಹಾರ ಪದಾರ್ಥ ಮಾರಾಟ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
VIDEO| ಜೂ.ಚಿರು ಸ್ವಾಗತಕ್ಕೆ ಸರ್ಜಾ ಫ್ಯಾಮಿಲಿಯಿಂದ ಸ್ಪೆಷಲ್​ ವಿಡಿಯೋ

VIDEO| ಸಿಗಂದೂರು ಚೌಡೇಶ್ವರಿ ಸನ್ನಿಧಿಯಲ್ಲೇ ದಾಂಧಲೆ! ಭಕ್ತರ ಮೇಲೂ ಹಲ್ಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 9 =
Remember me
