ಹುಬ್ಬಳ್ಳಿ:ಬೆಂಗಳೂರಿನಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ದರ್ಶನ್ ತೂಗುದೀಪ, ಪವಿತ್ರಾಗೌಡ ಸೇರಿ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಟ ದರ್ಶನ್​​ ಎಸಗಿರುವ ಕೌರ್ಯಕ್ಕೆ ಶಿಕ್ಷೆ ಆಗಬೇಕು ಎಂಬ ಕೂಗಿನ ಜತೆಗೆ ಸಿನಿಮಾದಿಂದ ಆತನನ್ನು ಬ್ಯಾನ್​ ಮಾಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.​
ಇದನ್ನು ಓದಿ:ಅಧಿಕಾರ ವಹಿಸಿಕೊಳ್ಳುವ ಮುನ್ನ ಶ್ರೀರಾಮನನ್ನು ಸ್ಮರಿಸಿದ ಕೇಂದ್ರ ಸಚಿವ; ವಿಡಿಯೋ ವೈರಲ್​
ಜೈಲುವಾಸದಲ್ಲಿರುವ ದರ್ಶನ್​​ಗೆ ಪೊಲೀಸ್​ ಠಾಣೆಯಲ್ಲಿ ರಾಜಾತಿಥ್ಯ ನಡೆಯುತ್ತಿದೆ ಎಂಬುದನ್ನು ಸಚಿವ ಎಂ.ಬಿ.ಪಾಟೀಲ್​​ ತಿರಸ್ಕರಿಸಿದರು. ಆ ರೀತಿ ಏನು ಇಲ್ಲ, ಅವರು ಆರೋಪಿಯಾಗಿದ್ದಾರೆ. ಆರೋಪದಿಂದ ಮುಕ್ತರಾಗದಿದ್ದರೆ ಅಥವಾ ಆರೋಪ ಸಾಬೀತಾದರೆ ಅವರಿಗೆ ಖಂಡಿತ ಶಿಕ್ಷೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇನ್ನೂ ಬಿಜೆಪಿ ಆಡಳಿತಾವಧಿಯಲ್ಲಿ ಅಂದ್ರೆ ಫೆಬ್ರವರಿ 2021ರಿಂದ ದರ್ಶನ್​ ಕೃಷಿ ಇಲಾಖೆಯ ರಾಯಭಾರಿಯಾಗಿದ್ದರು. ರೈತರ ಹಿತಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಮತ್ತು ಕೃಷಿಕರಲ್ಲಿ ತುಂಬುವ ಸಲುವಾಗಿ ಕೃಷಿ ಇಲಾಖೆ ರಾಯಭಾರಿಯನ್ನು ನೇಮಿಸಿತ್ತು. ಆದರೆ ಪ್ರಸ್ತುತ ಆರೋಪಗಳನ್ನು ಒತ್ತಿರುವ ದರ್ಶನ್​ ಅವರನ್ನು ಕೃಷಿ ಇಲಾಖೆ ರಾಯಭಾರಿಯಾಗಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದಾರೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + nine =
Remember me
