| ಮಂಜುನಾಥ ಟಿ.ಭೋವಿ ಮೈಸೂರು
ನಾಡಿನ ಸಾಂಸ್ಕೃತಿಕ ಸಿರಿತನವನ್ನು ಪ್ರತಿಬಿಂಬಿಸುವ, ಪಾರಂಪರಿಕ ವೈಭವ-ವೈಭೋಗವನ್ನು ಪ್ರಜ್ವಲಿಸುವ ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ಈ ಸಲ ನಿರಾಡಂಬರ!
ಜಗತ್ತನ್ನೇ ಕಾಡುತ್ತಿರುವ ಕರೊನಾ ಕರಿನೆರಳಿನಲ್ಲಿ ನಾಡಹಬ್ಬ ಆಚರಣೆಗೆ ಮೈಸೂರು ಸಕಲ ರೀತಿಯಲ್ಲಿ ಸಜ್ಜಾಗಿದೆ. ಆದರಿದು ಸಾಂಕೇತಿಕ ಮತ್ತು ಸರಳ ಮಾತ್ರ. ಸಡಗರ, ಸಂಭ್ರಮ ಮೇಳೈಸಿಲ್ಲ! ವಿದ್ಯುತ್ ದೀಪಾಲಂಕಾರ ಸಾಂಸ್ಕೃತಿಕ ನಗರಕ್ಕೆ ಶರನ್ನವರಾತ್ರಿಯ ರಂಗು ತುಂಬಿದೆ. ಆದರೆ, ಲಕ್ಷಾಂತರ ಪ್ರವಾಸಿಗರು, ಅನ್ಯ ರಾಜ್ಯ, ಜಿಲ್ಲೆಯ ಜನರನ್ನು ಕೈಬೀಸಿ ಕರೆಯುವ ಮತ್ತು ಸ್ವಾಗತಿಸುವ ಸ್ಥಿತಿಯಲ್ಲಿ ಅರಮನೆ ನಗರಿ ಇಲ್ಲ. ಇರುವಲ್ಲೇ ವರ್ಚುಯಲ್ ಮೂಲಕ ದಸರೆ ಕಣ್ತುಂಬಿಕೊಳ್ಳಬೇಕಿದೆ.
ಬೆಟ್ಟದತಾಯಿ ಸನ್ನಿಧಿಯಲ್ಲಿ ಚಾಲನೆ: ಚಾಮುಂಡಿ ಬೆಟ್ಟದಲ್ಲಿರುವ ನಾಡಿನ ಅಧಿದೇವತೆ ಶ್ರೀಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಅ.17ರಂದು ದಸರಾಗೆ ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ. ದೇವಿಗೆ ಅಗ್ರಪೂಜೆ ನಡೆದ ಬಳಿಕ ಬೆಳಗ್ಗೆ 7.45ರಿಂದ 8.15ರೊಳಗೆ ಸಲ್ಲುವ ಶುಭ ಮುಹೂರ್ತದಲ್ಲಿ ನಾಡಹಬ್ಬವನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಲಿದ್ದಾರೆ. ಆರು ಕರೊನಾ ಸೇನಾನಿಗಳಿಗೆ ಸನ್ಮಾನಿಸುವ ಮೂಲಕ ಕೋವಿಡ್ ವಿರುದ್ಧ ಹೋರಾಟದಲ್ಲಿ ಕೈಜೋಡಿರುವ ಕಾರ್ಯಪಡೆಗೆ ಸಾಂಕೇತಿಕವಾಗಿ ಗೌರವ ಅರ್ಪಿಸಲಾಗುತ್ತದೆ. ಇದಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಇನ್ನಿತರರು ಸಾಕ್ಷಿಯಾಗಲಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರಿಗೆ ಮಿತಿಗೊಳಿಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೈಹಿಕ ಅಂತರ, ಮಾಸ್ಕ್ ಧಾರಣೆ ಇನ್ನಿತರ ಕೋವಿಡ್ ಮಾರ್ಗಸೂಚಿ ಪಾಲನೆಯ ಮಂತ್ರ ಜಪಿಸಲಾಗುತ್ತಿದೆ.
ಕುಶಾಲತೋಪು ತಾಲೀಮು:ಅರಮನೆ ಹೊರಭಾಗದ ವಾಹನ ನಿಲುಗಡೆ ಪ್ರದೇಶದಲ್ಲಿ ಪ್ರತಿ ವರ್ಷದಂತೆ ಕುಶಾಲತೋಪು ಅಭ್ಯಾಸ ಮಾಡಲಾಯಿತು. ಆದರೆ, ಕರೊನಾ ಕಾರಣಕ್ಕೆ ದಸರಾ ಆನೆಗಳು ಇರಲಿಲ್ಲ. ಅಶ್ವಾರೋಹಿ ಪಡೆ ಮಾತ್ರ ಹಾಜರಿತ್ತು.
ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯನ್ನು ಅರಮನೆಗೆ ಮಾತ್ರ ಸೀಮಿತಗೊಳಿಸಿ ತಯಾರಿ ಮಾಡಿಕೊಳ್ಳಲಾಗಿದೆ. ಅ26ರಂದು ಮಧ್ಯಾಹ್ನ 2.59ರಿಂದ 3.20ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಸಿಎಂ ನಂದಿಧ್ವಜಕ್ಕೆ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಮಧ್ಯಾಹ್ನ 3.40ಕ್ಕೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಜಂಬೂಸವಾರಿ ಮತ್ತು ವಿಜಯದಶಮಿ ಮೆರವಣಿಗೆಗೆ ಚಾಲನೆ ದೊರೆಯಲಿದೆ.
ಬೆಂಗಳೂರು: ಕರೊನಾದಿಂದ ಆರ್ಥಿಕ ಸಂಕಷ್ಟದಲ್ಲಿರುವ ಪ್ರವಾಸಿ ವಾಹನ ಮಾಲೀಕರಿಗೆ ಮೈಸೂರು ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮ, ದಸರಾ ಸಂದರ್ಭದಲ್ಲೂ ಆದಾಯವಿಲ್ಲದಂತೆ ಮಾಡಿದೆ. ಪ್ರತಿವರ್ಷ ದಸರಾ ಸಂದರ್ಭದಲ್ಲಿ ಮೈಸೂರು ಹಾಗೂ ಸುತ್ತಲಿನ ಪ್ರವಾಸಿ ತಾಣಗಳಿಗೆ ಬೆಂಗಳೂರು ಸೇರಿ ಇನ್ನಿತರ ಕಡೆಗಳಿಂದ 20 ಸಾವಿರಕ್ಕೂ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದರು. ಆದರೀಗ, ಮೈಸೂರು ಜಿಲ್ಲಾಡಳಿತ ಕರೊನಾ ಸೋಂಕಿನ ಭೀತಿಯಿಂದಾಗಿ ಅ.17ರಿಂದ ನ.1ರವರೆಗೆ ಮೈಸೂರು ಹಾಗೂ ಸುತ್ತಲಿನ ಪ್ರವಾಸಿ ತಾಣಗಳನ್ನು ಬಂದ್ ಮಾಡುವ ಕುರಿತು ಆದೇಶಿಸಿದೆ. ಅದರ ಜತೆಗೆ ಈ ಅವಧಿಯಲ್ಲಿ ಮೈಸೂರು ಅರಮನೆ ವೀಕ್ಷಣೆಯನ್ನು ನಿರ್ಬಂಧಿಸಲಾಗಿದೆ. ಇದರಿಂದಾಗಿ ಪ್ರವಾಸಿ ವಾಹನ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಷ್ಟಿದೆ ಗೃಹಸಚಿವರ ಬಳಿ ಸಂಪತ್ತು? ಕಳೆದ ವರ್ಷಕ್ಕಿಂತಲೂ ಕಡಿಮೆಯಾಯ್ತು ಷಾ ಆಸ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − sixteen =
Remember me
