ಬೆಂಗಳೂರು:ವಿಶ್ವವಿಖ್ಯಾತ ಮೈಸೂರು ದಸರಾ ಆಯೋಜನೆ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ಉನ್ನತ ಸಮಿತಿಯ ಪೂರ್ವಭಾವಿ ಸಭೆ ನಡೆದಿದ್ದು, ಈ ಸಲದ ದಸರಾ ಕುರಿತಂತೆ ವಿಶೇಷ ಚರ್ಚೆ ನಡೆದಿದೆ. ದಸರಾ ಆಯೋಜನೆ ಕುರಿತಂತೆ ಸಭೆ ಬಳಿಕ ಸಿಎಂ ಮಾಹಿತಿ ನೀಡಿದರು.
2023ರ ಮೈಸೂರು ದಸರಾ ಮಹೋತ್ಸವ ಬಹಳ ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ ಆಚರಿಸಲು ಉನ್ನತ ಸಮಿತಿಯ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಸರಾ ಪಾರಂಪರಿಕ ಉತ್ಸವ, ಪ್ರತಿವರ್ಷ ಸರ್ಕಾರ ಉತ್ತಮವಾಗಿ ನಡೆಸಲಿದೆ. ಇದು ಜನರ ಉತ್ಸವವಾಗಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ದಸರಾದಲ್ಲಿ ಜನರನ್ನು ಆಕರ್ಷಿಸಲು, ದೀಪಾಲಂಕಾರ, ಸ್ತಬ್ಧಚಿತ್ರ ಮಾಡುವಾಗ ರಾಜ್ಯದ ಪರಂಪರೆ ಜಿಲ್ಲೆಯ ವಿಶೇಷತೆಗಳು ಇರಲಿವೆ. ಅಲ್ಲದೆ ನಮ್ಮ ಐದು ಗ್ಯಾರಂಟಿಗಳನ್ನ ತಿಳಿಸುವ ರೀತಿಯ ಸ್ತಬ್ಧಚಿತ್ರಗಳೂ ಇರಲಿದೆ ಎಂದರು.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ದಸರಾ ಮಹೋತ್ಸವ ಉದ್ಘಾಟನೆ ಚಾಮುಂಡಿಬೆಟ್ಟದ ಮೇಲೆ ಅ. 15ರಂದು 10-15ರಿಂದ 10-30ರ ಶುಭ ಲಗ್ನದಲ್ಲಿ ನಡೆಯಲಿದೆ. ವಸ್ತು ಪ್ರದರ್ಶನವೂ ಅಂದೇ ನಡೆಯಲಿದೆ. ದೀಪಾಲಂಕಾರ ಅಂದು ಪ್ರಾರಂಭವಾಗಿ ದಸರಾ ಮುಗಿದು ಒಂದು ವಾರದ ಬಳಿಕವೂ ಇರಲಿದೆ. ದೀಪಾಲಂಕಾರ ಈ ಬಾರಿ ಸುಂದರವಾಗಿರಬೇಕು ಎಂದು ಹೇಳಿದ್ದೇನೆ. ಪಂಜಿನ ಕವಾಯತು ಜಂಬೂಸವಾರಿ ಮುಕ್ತಾಯದ ಬಳಿಕ ನಡೆಯಲಿದೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೊತ್ಸವ, ರೈತ ದಸರಾ, ಯುವ ದಸರಾ ಎಲ್ಲವೂ ಇರಲಿವೆ ಎಂದು ಸಿಎಂ ಹೇಳಿದರು.
ವಸ್ತುಪ್ರದರ್ಶನಕ್ಕೊಂದು ಸಮಿತಿ ಇರಲಿದೆ. ಉಸ್ತುವಾರಿ ಸಚಿವರ ಜೊತೆ, ಕನ್ನಡ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರು ಕೂಡ ಸಮಿತಿಯಲ್ಲಿ ಇರಲಿದ್ದಾರೆ. ಶ್ರೀರಂಗಪಟ್ಟಣ, ಚಾಮರಾಜನಗರ ಅಲ್ಲೂ ದಸರಾ ಉತ್ಸವ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕು. ನಮ್ಮಲ್ಲಿ ಬಹಳ ಒಳ್ಳೆಯ ಕಲಾವಿದರಿದ್ದಾರೆ. ಸಂಗೀತ, ಜಾನಪದ, ನೃತ್ಯ ಎಲ್ಲದರಲ್ಲೂ ನಮ್ಮವರೇ ಉತ್ತಮ ಕಲಾವಿದರಿದ್ದಾರೆ ಎಂದೂ ಹೇಳಿದರು.
ಇದನ್ನೂ ಓದಿ:ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ದಸರಾ ಮಹೋತ್ಸವ ಉದ್ಘಾಟನೆಯನ್ನು ಯಾರು ಮಾಡಬೇಕೆಂಬ ತೀರ್ಮಾನ ಕೈಗೊಳ್ಳುವ ಅಧಿಕಾರ ನನಗೆ ಕೊಟ್ಟಿದ್ದಾರೆ. ಸುತ್ತೂರು ಸ್ವಾಮೀಜಿ ಹೆಸರನ್ನು ಶಾಸಕ ಶ್ರೀವತ್ಸ ಸೂಚಿಸಿದ್ದಾರೆ. ನಾವು ಚರ್ಚೆ ಮಾಡಿ ಯಾರು ಉದ್ಘಾಟಿಸಬೇಕೆಂದು ಹೇಳುತ್ತೇವೆ ಎಂದು ಸಿಎಂ ತಿಳಿಸಿದರು.
ದಸರಾ ಅದ್ದೂರಿ ಆಗಿರಬೇಕು, ಅನಗತ್ಯ ಖರ್ಚು ಆಗಬಾರದು, ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದೇನೆ. ಶಕ್ತಿ ಯೋಜನೆಯಿಂದಾಗಿ ರಾಜ್ಯಾದ್ಯಂತದ ಮಹಿಳೆಯರು ಹೆಚ್ಚಿನ ಸಂಖ್ಯೆಯ ಬರುವ ಸಾಧ್ಯತೆ ಇದೆ ಎಂದೂ ಸಿಎಂ ಹೇಳಿದರು.
ನಾಪತ್ತೆ ಆಗಿದ್ದ ಗಂಡ ಹತ್ತು ವರ್ಷಗಳ ಬಳಿಕ ಪತ್ತೆ; ವೈದ್ಯರನ್ನು ನೋಡಲು ಹೋಗಿದ್ದ ಪತ್ನಿಗೆ ಪತಿಯೇ ಸಿಕ್ಕಿ ಅಚ್ಚರಿ!

ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + fifteen =
Remember me
